ಬಿಟೌನ್‍ಗೆ ಕನ್ನಡದ ಭಾವನಾ

Bhavana Journy to Bollywood

08-01-2019

ಯೋಗ್‍ರಾಜ್ ಭಟ್ ನಿರ್ದೇಶನದ ಹಿಟ್ ಚಿತ್ರ ಗಾಳಿಪಟದ ಮೂಲಕ ಚಂದನವನ ಪ್ರವೇಶಿಸಿದ್ದ ಬೆಡಗಿ ಭಾವನಾ ರಾವ್ ಇದೀಘ ಬಾಲಿವುಡ್‍ನತ್ತ ಮುಖಮಾಡಿದ್ದಾರೆ. ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ರೋಡ್ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ಭಾವನಾ  ಕೆರಿಯರ್ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. 

ಇತ್ತೀಚಿಗೆ ಭಾವನಾ ಹಾಟ್-ಹಾಟ್ ಪೋಟೋ  ಶೂಟ್ ಮಾಡಿಸಿಕೊಂಡಿದ್ದು, ಇದೇ ಪೋಟೋ ಶೂಟ್ ಭಾವನಾಗೆ ಬಾಲಿವುಡ್ ಹಾದಿ ತೋರಿಸಿದೆ. ಭಾವನಾ ಪೋಟೋಗಳು ಬಿಟೌನ್ ಕಣ್ಣಿಗೆ ಬಿದ್ದು ಬಾಂಬೆಯಿಂದ ಅಡಿಷನ್‍ಗೆ ಕರೆ ಬಂದಿತ್ತು. ಅಡಿಷನ್ ಕೊಟ್ಟು ಬಂದಿದ್ದೆ. ಈಗ ಚಿತ್ರಕ್ಕೆ ಆಯ್ಕೆಯಾಗಿದ್ದೇನೆ. ಇಂದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿದ್ದು, ನನ್ನ ರೋಲ್ ಇಂಟ್ರಸ್ಟಿಂಗ್ ಅನ್ನಿಸಿದ್ದರಿಂದ ಒಪ್ಪಿಕೊಂಡೆ ಅಂತಿದ್ದಾರೆ ಭಾವನಾ ರಾವ್. 

ಗಾಳಿಪಟದ ನಂತರ ಕನ್ನಡದಲ್ಲಿ ಅಂತಹ ಒಳ್ಳೆಯ ಅವಕಾಶವನ್ನೇನೂ ಪಡೆಯದ ಭಾವನಾ ರಾವ್,  ತಮಿಳು ಹಾಗೂ ತೆಲುಗಿನಲ್ಲಿ ನಟಿಸಿದ್ದರು. ಈಗ ಬಾಲಿವುಡ್‍ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.  ನೀಲ್ ನಿತೀನ್ ಮುಖೇಶ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ಅವರ ಸಹೋದರ  ನಮನ್ ನಿತೇಶ್ ನಿರ್ದೇಶಿಸುತ್ತಿದ್ದಾರೆ. 

ಕನ್ನಡ ಸೇರಿದಂತೆ ಎಲ್ಲ ಭಾಷೆಯ ಚಿತ್ರಗಳಲ್ಲೂ ಈಗ ಪರಭಾಷಾ ತಾರೆಯರದ್ದೇ ಸದ್ದು, ಹೀಗಿರುವಾಗಲೇ ಭಾವನಾ ಕೂಡ ಬಿ ಟೌನ್‍ನತ್ತ ಮುಖ ಮಾಡಿದ್ದು, ಬೈಪಾಸ್ ರೋಡ್ ಚಿತ್ರದಲ್ಲಿ ಶ್ರೀಮಂತ ಬೋಲ್ಡ್ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ  ಭಾವನಾ  ಮೋಡಿ ಮಾಡುವ ಭರವಸೆ ಮೂಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

# Bhavana rao #Movie #Bollywood #Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ