ತಿನ್ನಲು ಮರಿಬೇಡಿ "ದೀಪಿಕಾ ಪಡುಕೋಣ ದೋಸೆ"

 Do not  Forgot  To Eat "Deepika Padukone Dosa"

07-01-2019

ನೀವು ದೀಪಿಕಾ ಪಡುಕೋಣೆ ಕಟ್ಟಾ ಅಭಿಮಾನಿನಾ? ನೀವೇನಾದ್ರೂ ಸಧ್ಯ ಅಮೇರಿಕಾ ಹೋಗ್ತಿದ್ದೀರಾ? ಹಾಗಿದ್ದರೇ ದೀಪಿಕಾ ಪಡುಕೋಣೆ ದೋಸೆ ಸವಿಯೋಕೆ ಮರಿಬೇಡಿ. ಇದೇನಿದು? ದೀಪಿಕಾ ಪಡುಕೋಣೆ ದೋಸೆ ಅಂದ್ರಾ? ಅಮೇರಿಕಾ ಹೊಟೇಲ್‍ವೊಂದು ದೋಸೆ ಮಾರಾಟಕ್ಕೆ ಮುಂದಾಗಿದ್ದು, ಆ ದೋಸೆಗೆ ದೀಪಿಕಾ ಪಡುಕೋಣೆ ದೋಸೆ ಎಂದು ಹೆಸರಿಟ್ಟಿದೆ. ಇದನ್ನು ದೀಪಿಕಾ ಅಭಿಮಾನಿಯೊಬ್ಬರು ಟ್ವಿಟ್  ಮಾಡಿದ್ದಾರೆ. ಹನಿಮೂನ್ ಮೂಡನಲ್ಲಿರುವ ರಣವೀರ್ ಸಿಂಗ್ ಈ ಟ್ವಿಟ್ ಶೇರ್ ಮಾಡಿಕೊಂಡಿದ್ದು, ನಾನು ಈ ದೋಸೆಯನ್ನು ಖಂಡಿತಾ ತಿನ್ನುತ್ತೇನೆ ಎಂದಿದ್ದಾರೆ. 

ಅಮೇರಿಕಾದ ಟೆಕ್ಕಾಸ್ ನಗರದಲ್ಲಿರುವ ಹೊಟೇಲ್‍ವೊಂದರಲ್ಲಿ ಇಂತಹದೊಂದು ದೋಸೆ ಮೆನು ಕಾರ್ಡ್‍ನಲ್ಲಿದೆ. ಇದನ್ನು ನೋಡಿದ ದೀಪಿಕಾ ಪಡುಕೋಣೆ ಅಭಿಮಾನಿಯೊಬ್ಬರು ಪೋಟೋದೊಂದಿಗೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಲೂಗಡ್ಡೆಗೆ ಪೆಪ್ಪರ್ ಬೆರೆಸಿ ತಯಾರಿಸುವ ಪಲ್ಯದೊಂದಿಗೆ ಈ ದೋಸೆಯನ್ನು ಸರ್ವ್ ಮಾಡಲಾಗುತ್ತಿದ್ದು, ಆ ದೋಸೆಗೆ ದೀಪಿಕಾ ಪಡುಕೋಣೆ ದೋಸೆ ಎಂದು ಹೆಸರಿಡಲಾಗಿದೆ. 

ಇನ್ನು ದೋಸೆ ಟ್ವಿಟ್‍ಗೆ ಕಮೆಂಟ್ ಮಾಡಿರುವ ಮತ್ತೊರ್ವ ಅಭಿಮಾನಿ, ಪುಣೆಯ ಹೊಟೇಲ್‍ವೊಂದರಲ್ಲಿ ದೀಪಿಕಾ ಪಡುಕೋಣ ಥಾಲಿ ಸಿಗುತ್ತದೆ ಅನ್ನೋ ವಿಚಾರವನ್ನು ಹಂಚಿಕೊಂಡಿದ್ದಾನೆ. ಒಟ್ಟಿನಲ್ಲಿ ಸಧ್ಯ  ಪತಿ ರಣವೀರ್ ಸಿಂಗ್ ಜೊತೆ ಹನಿಮೂನ್‍ನಲ್ಲಿರುವ ದೀಪಿಕಾ ಪಡುಕೋಣ್‍ಗೆ ಇಲ್ಲಿ ಅಭಿಮಾನಿಗಳು ಇಂಟರಸ್ಟಿಂಗ್ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಖತ್ ಸಪ್ರೈಸ್ ನೀಡುತ್ತಿದ್ದಾರೆ. 

ಇತ್ತೀಚಿಗೆ ವಿವಾಹವಾದ ದೀಪಿಕಾ ಹಾಗೂ ರಣವೀರ್ ಹನಿಮೂನಗಾಗಿ ಎಲ್ಲಿಗೆ ತೆರಳಿದ್ದಾರೆ ಅನ್ನೋದನ್ನು ಎಲ್ಲರಿಂದಲೂ ಮುಚ್ಚಿಟ್ಟಿದ್ದು, ತಿಂಗಳಾಂತ್ಯದ ವೇಳೆಗೆ ದೇಶಕ್ಕೆ ವಾಪಸ್ಸಾಗುವ ಸಾಧ್ಯತೆ ಇದೆ. ವಾಪಸ್ಸಾಗುತ್ತಿದಂತೆ ದೀಪಿಕಾ, ಮೇಘನಾ ಗುಲ್ಜಾರ್ ಅವರ  ಚಪಾಕ್ ಚಿತ್ರದಲ್ಲಿ ನಟಿಸಲಿದ್ದು, ಆ ಸಿನಿಮಾದಲ್ಲಿ ದೀಪಿಕಾ, ಆಸ್ಯಿಡ್ ಸಂತ್ರಸ್ಥೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#America # Donot Forgot To Eat # Deepika Dosa #Ranveer sing


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ