ಹಿಂದಿಯಲ್ಲಿ ಇದುವರೆಗೂ 32 ಕೋಟಿ ರೂಪಾಯಿ ಗಳಿಸಿದ ಕೆಜಿಎಫ್ 

 KGF has Earned Rs 32 Crore in Hindi So Far

07-01-2019

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ತೆರೆಯ ಮೇಲೆ ತನ್ನ ನಾಗಾಲೋಟ ಮುಂದುವರೆಸಿದೆ. ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ  ಬಿಡುಗಡೆ ಕಂಡ ಸಿನಿಮಾ ಹಿಂದಿ ಭಾಷೆಯಲ್ಲಿ ತನ್ನ ಸ್ಕ್ರೀನ್‍ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಲೆ ಸಾಗಿದ್ದು, ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ, ಕೆಜಿಎಫ್ 32 ಕೋಟಿ ರೂಪಾಯಿ ಗಳಿಸಿದೆ. ಹಿಂದಿಯಲ್ಲಿ ಬಿಡುಗಡೆಯಾದ ಮೂರು ವಾರಗಳ ಬಳಿಕವೂ  ಕೆಜಿಎಫ್ ಚಿತ್ರ ಸ್ಕ್ರೀನ್‍ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದು, ಹೊಸ ಚಿತ್ರಗಳಿಗೆ ಸ್ಪರ್ಧೆ ಒಡ್ಡುವಂತೆ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯ ಮೊದಲ ವಾರದಲ್ಲಿ 21.45 ಕೋಟಿ ಆದಾಯ ಗಳಿಸಿದ್ದ ಕೆಜಿಎಫ್,  2 ನೇ ವಾರದಲ್ಲಿ 11.50 ಕೋಟಿ ರೂಪಾಯಿ ಗಳಿಕೆಯೊಂದಿಗೆ  ಒಟ್ಟು 32 ಕೋಟಿ ಆದಾಯ ದಾಟಿದೆ. 780 ಸ್ಕ್ರೀನ್‍ಗಳಲ್ಲಿ  ಪ್ರದರ್ಶನ ಕಾಣುತ್ತಿದ್ದ ಕೆಜಿಎಫ್ ಈಗ ಹಿಂದಿಯ ಒಟ್ಟು 951 ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇನ್ನು ಕನ್ನಡದಲ್ಲೂ ಕೆಜಿಎಫ್ ಓಟ ಇನ್ನೂ ಯಶಸ್ವಿಯಾಗಿ ಸಾಗಿದ್ದು ಚಿತ್ರ ಬಿಡುಗಡೆಯಾದ 13 ನೇ ದಿನ 175 ಕೋಟಿ ಕ್ಲಬ್ ಸೇರುವ ಮೂಲಕ  ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಇನ್ನು ಕೆಜಿಎಫ್‍ನ ಜಗತ್ತಿನಾದ್ಯಂತದ ಒಟ್ಟಾರೆ 175 ಕೋಟಿ ರೂಪಾಯಿ ಗಳಿಸಿದ್ದು, ಕನ್ನಡದಲ್ಲಿ ಒಟ್ಟಾರೆ 90 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ.  ಇದು ಕನ್ನಡದ ಹೊಸ ದಾಖಲೆಯಾಗಿದೆ. 
ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ್ ಸಿನಿಮಾ, 75 ಕೋಟಿ ಆದಾಯ ಗಳಿಸಿತ್ತು. ಇದೀಗ ಕೆಜಿಎಫ್ ಈ ದಾಖಲೆ ಮುರಿದಿದೆ. ಚಿತ್ರ ಬಿಡುಗಡೆಯಾಗಿ ವಾರಗಳೇ ಕಳೆದಿದ್ದರೂ ಇನ್ನು ಜನರು ಚಿತ್ರಮಂದಿರದತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಕೆಜಿಎಫ್ ಸಿನಿಮಾ ಬಾಕ್ಸಾಪೀಸ್‍ನಲ್ಲಿ ಇನ್ನಷ್ಟು ಹೊಸ ದಾಖಲೆ ಸೃಷ್ಟಿಸೋದಂತು ಸತ್ಯ. ಹಿಂದಿ ಪ್ರದರ್ಶನ ಅತ್ಯಂತ ಯಶಸ್ವಿಯಾಗಿರೋದರಿಂದ ಅಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಶ್ ಮುಂಬೈಗೆ ತೆರಳಿದ್ದರು, ಆದರೆ ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಿ ವಾಪಸ್ಸಾಗಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

# KGF #32 Crore #Earned # In Hindi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ