"ಭಾರತ್ ಬಂದ್" ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? 

Two Days Strike In Karnataka

07-01-2019

ಮೋಟಾರು ವಾಹನ ಕಾಯಿದೆ ತಿದ್ದುಪಡಿ ಮಸೂದೆ 2017 ನ್ನು ಹಿಂದಕ್ಕೆ ಪಡೆಯುವುದು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯಿದೆ ಜಾರಿಗೊಳಿಸುವುದು ಸೇರಿದಂತೆ 12 ವಿವಿಧ  ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ  ಎರಡು ದಿನಗಳ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಅಸಂಘಟಿತ ವಲಯದ ಕಾರ್ಮಿಕರ ಈ ಸ್ಟ್ರೈಕ್‍ನಿಂದ ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯ ಸ್ತಬ್ಧವಾಗುವ ಮುನ್ಸೂಚನೆ ಲಭ್ಯವಾಗಿದೆ.  

ಎಐಟಿಯುಸಿ,ಸಿಐಟಿಯು,ಐಎನ್‍ಟಿಯುಸಿ,ಎಲ್‍ಫಿಎಫ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಈ ಬಂದ್‍ಗೆ  ಸಾರಿಗೆ ಕಾರ್ಮಿಕರು ಸಂಪೂರ್ಣ ಬೆಂಬಲ ನೀಡಿರೋದರಿಂದ ಮಂಗಳವಾರ ಹಾಗೂ ಬುಧವಾರ ಎರಡೂ ದಿನ ರಾಜ್ಯದಲ್ಲಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಬಸ್‍ಗಳು ರಸ್ತೆಗಿಳಿಯೋದು ಡೌಟ್. ಕೆಲವೆಡೆ ಖಾಸಗಿ ಬಸ್ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿರೋದರಿಂದ ಪ್ರೈವೆಟ್ ಬಸ್‍ಗಳ ಓಡಾಟವೂ ಅನುಮಾನ. 


ಇನ್ನು ನಗರದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಅಟೋ ಚಾಲಕರು ಬಂದ್‍ಗೆ ಬೆಂಬಲ ನೀಡಿದ್ದಾರೆ. ಬ್ಯಾಂಕ್ ನೌಕರರು ಕೂಡ ಮುಷ್ಕರಕ್ಕೆ ಬೆಂಬಲ ನೀಡಿರೋದರಿಂದ ಎರಡು ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಕೂಡ ಸ್ಥಗಿತವಾಗಲಿದೆ. ಎಪಿಎಂಸಿ ಲಾರಿಗಳು ಬಂದ್‍ಗೆ ಬೆಂಬಲ ನೀಡಿರೋದರಿಂದ ನಗರದಲ್ಲಿ ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡೋದು ಅನುಮಾನವಾಗಿದ್ದು,ನಗರದಲ್ಲಿ ಓಲಾ-ಊಬರ್ ಕ್ಯಾಬ್‍ಗಳು ಸಂಚಾರಕ್ಕೆ ಲಭ್ಯವಾಗಬಹುದು. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಜಿಲ್ಲೆಯ ಸ್ಥಿತಿ-ಗತಿ ನೋಡಿಕೊಂಡು ಅಗತ್ಯವಿದ್ದರೆ ರಜೆ ಘೋಷಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಸಂಚಾರ ಸಮಸ್ಯೆ ಎದುರಾಗೋದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿವೆ. 

ಮೆಟ್ರೋ, ಔಷಧಿ ಅಂಗಡಿಗಳು, ಹೊಟೇಲ್,ಆಸ್ಪತ್ರೆಗಳು, ಪೆಟ್ರೋಲ್ ಬಂಕ್ ಕೆಲಸ ನಿರ್ವಹಿಸಲಿದ್ದು, ಖಾಸಗಿ ಕಂಪನಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.  ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಲಾಗಿರುವ ಈ ಮುಷ್ಕರಕ್ಕೆ  ರಾಜ್ಯ ಸರ್ಕಾರ ಪ್ರತ್ಯಕ್ಷ ಸಹಕಾರ ನೀಡುವ ಸಾಧ್ಯತೆ ಇರೋದರಿಂದ ರಾಜ್ಯದಲ್ಲಿ ಬಂದ್ ಬಹುತೇಕ ಯಶಸ್ವಿಯಾಗುವ ಸಾಧ್ಯತೆ ಇದೆ. 

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಹೊಸಪಿಂಚಣಿ ಯೋಜನೆ ವಿರೋಧಿಸಿದ್ದು, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಮೋಟಾರು ವಾಹನ ಕಾಯಿದೆಗೆ ತಂದಿರುವ ತಿದ್ದುಪಡಿ ರದ್ದುಪಡಿಸಬೇಕು, ಸಾರ್ವಜನಿಕ ಹಾಗೂ ಸರ್ಕಾರಿಸಂಸ್ಥೆಗಳನ್ನು ಖಾಸಗಿಕರಣಗೊಳಿಸುವದನ್ನು ನಿಲ್ಲಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಒಟ್ಟಿನಲ್ಲಿ ಏಕಕಾಲಕ್ಕೆ ಎರಡು ದಿನ ಸ್ಟ್ರೈಕ್ ನಡೆಯೋದರಿಂದ ಜನಜೀವನ ಅಸ್ತವ್ಯಸ್ಥವಾಗೋದ್ರಲ್ಲಿ ಅನುಮಾನವಿಲ್ಲ. 


ಸಂಬಂಧಿತ ಟ್ಯಾಗ್ಗಳು

#Bharath Bandh #No Vehical #Karnataka Support #No School


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ