ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬ ಬೇಡ ಅಂದಿದ್ಯಾಕೆ ಗೊತ್ತಾ?

Rocking Star Yash Said No To Birthday Celebration

07-01-2019

ಕನ್ನಡದ ರಾಕಿಂಗ್ ಸ್ಟಾರ್ ಯಶ್‍ಗೆ 2018 ಮರೆಯಲಾರದ ವರ್ಷ. ಅವರ ವೈಯಕ್ತಿಕ ಬದುಕಿನಲ್ಲಿ ದೇವತೆಯಂತಹ ಮಗಳು ಬಂದ ಈ ವರ್ಷವನ್ನು ತಾವೆಂದು ಮರೆಯೋದಿಲ್ಲ ಅಂತ ಯಶ್ ಹೇಳಿಕೊಂಡಿದ್ದಾರೆ. ಇದರೊಂದಿಗೆ ರಿಲೀಸ್ ಆದ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ಕೂಡ ಒಳ್ಳೆಯ ಹೆಸರು ಮಾಡಿರೋದರಿಂದ ಯಶ್ ಡಬ್ಬಲ್ ಖುಷಿಯಲ್ಲಿದ್ದಾರೆ. ಈ ಮಧ್ಯೆ ನಾಳೆ ಯಶ್ ಹುಟ್ಟುಹಬ್ಬವಿದೆ. ಆದರೆ ಈ ಎಲ್ಲ ಖುಷಿಗಳ ಜೊತೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಬರ್ತಡೇ ಸೆಲಿಬ್ರೇಶನ್‍ಗೆ ಯಶ್ ನೋ ಎಂದಿದ್ದಾರೆ. 

ಕೆಜಿಎಫ್ ಯಶಸ್ಸಿನ ಖುಷಿಯಲ್ಲಿರುವ ಯಶ್‍ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಆದರೆ ಐಟಿ ದಾಳಿಯಿಂದ ಕೊಂಚ ಡಿಸ್ಟರ್ಬ್ ಆಗಿರುವ ಯಶ್, ನಾಳೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋದಿಲ್ಲ. ಯಾರು ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಪೇಸ್ ಬುಕ್ ಪೇಜ್‍ನಲ್ಲಿ ತಡವಾಗಿ 2018 ಕ್ಕೆ ಧನ್ಯವಾದ ಹೇಳುವ ವಿಡಿಯೋ ಅಪ್‍ಲೋಡ್ ಮಾಡಿರುವ ಯಶ್, ಅಂಬರೀಶ್ ಅವರ ನಿಧನವನ್ನು ನೆನಪಿಸಿಕೊಂಡಿದ್ದಾರೆ. ಅದೇ ವಿಡಿಯೋದಲ್ಲಿ ತಾವು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂಬುದನ್ನು ಹೇಳಿದ್ದಾರೆ. 

ಮೂಲಗಳ ಪ್ರಕಾರ, ಯಶ್ ಗೆ ಐಟಿ ದಾಳಿ ಸಾಕಷ್ಟು ತಲೆನೋವು ತಂದಿಟ್ಟಿದೆ ಎನ್ನಲಾಗಿದೆ.  ಕೆಜಿಎಫ್ ಯಶಸ್ಸಿನ ಅಲೆಯಲ್ಲಿದ್ದ ಯಶ್‍ಗೆ ಸಣ್ಣ ಸೂಚನೆಯೂ ಇಲ್ಲದೆ ಐಟಿ ದಾಳಿ ನಡೆದಿರೋದರಿಂದ ಕೆಲ ದಾಖಲೆಗಳನ್ನು  ಒದಗಿಸುವುದು  ಮಾಹಿತಿ ನೀಡುವುದರಲ್ಲಿ ವ್ಯತ್ಯಾಸವಾಗಿರೋದರಿಂದ ಯಶ್ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಯಶ್ ಇನ್ನು ಹಲವಾರು ಬಾರಿ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗುವ ಅಗತ್ಯ ಕೂಡ ಇದೆ ಎನ್ನಲಾಗುತ್ತಿದೆ.ಹೀಗಾಗಿ ಈ ಎಲ್ಲ ಗೊಂದಲಗಳ ನಡುವೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಯಶ್‍ಗೆ ಮನಸ್ಸಿನಲ್ಲ. 
ಹೀಗಾಗಿ ಯಶ್ ಅಂಬಿ ನಿಧನದ ಕಾರಣ ಕೊಟ್ಟು, ಬರ್ತಡೆ ಆಚರಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಕೆಜಿಎಫ್ ಯಶಸ್ಸಿನಿಂತ ಸಹಜವಾಗಿ ಸಂಭ್ರಮದಲ್ಲಿರುವ ಕೆಜಿಎಫ್ ತಂಡ, ಯಶ್ ಹುಟ್ಟುಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಲು ಸಿದ್ಧತೆ ನಡೆಸಿತ್ತು. ಆದರೆ  ಇದೀಗ ಯಶ್ ಹುಟ್ಟುಹಬ್ಬವನ್ನೆ ನಿರಾಕರಿಸಿರೋದರಿಂದ ಯಶ್ ಫ್ಯಾನ್ಸ್‍ಗೆ  ಬೇಸರವಾಗಿದೆ. ಆದರೆ ಯಶ್ ಮಾತ್ರ ಸಧ್ಯ ಐಟಿ ಅಧಿಕಾರಿಗಳಿಂದ ಬಿಡುಗಡೆ ಸಿಕ್ಕರೆ ಸಾಕಪ್ಪ ಅಂತ ದೇವರ ಬಳಿ ಬೇಡಿಕೊಳ್ತಿದ್ದಾರಂತೆ. 


ಸಂಬಂಧಿತ ಟ್ಯಾಗ್ಗಳು

#Rocking Star #No Birthday #Yash #Celebration


ಒಂದು ಕಮೆಂಟನ್ನು ಹಾಕಿ

ಇತ್ತೀಚಿನ ಸುದ್ದಿ

View more...


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ