ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡಿಕೊಂಡಿದ್ದಾರೆ !

Kannada News

05-06-2017 267

 

ಮೈಸೂರು:- ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಸಮಾವೇಶದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡಿಕೊಂಡಿದ್ದಾರೆ ಎಂದು  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಎಚ್. ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ 75 ಭಾಗ ಸುಳ್ಳು ಹೇಳಿದ್ದಾರೆ,  ಕೇವಲ 25 ಭಾಗ ಮಾತ್ರ ನಿಜ ಹೇಳಿದ್ದಾರೆ. 2013 ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 150 ಭರವಸೆಗಳನ್ನು ಈಡೇರಿಸಿರುವುದಾಗಿ ಸಿಎಂ ಹೇಳಿದ್ದಾರೆ. ಹಾಗಾದರೆ ನೀಡಿದ್ದ ಭರವಸೆಗಳೇನು? ಈಡೇರಿಸಿರುವ ಭರವಸೆಗಳೇನು? ಎಂದು ಸ್ಪಷ್ಟಪಡಿಸುವಂತೆ ವಿಶ್ವನಾಥ್ ಸವಾಲು ಹಾಕಿದ್ದಾರೆ. ಈ ಹಿಂದೆ ಧಾಂ ಧೂಮ್ ಎಂದು ಸಾಧನಾ ಸಮಾವೇಶ ನಡೆಸಿದವರು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿಲ್ಲ ಎಂದರು.  ಸಾಧಾನ ಸಮಾವೇಶ ಮಾಡಿದ ಯಾವುದೇ ಸರ್ಕಾರ ವಾಪಸ್ ಅಧಿಕಾರಕ್ಕೆ ಬಂದಿಲ್ಲ. ನೀವು ಭಾಗ್ಯಗಳನ್ನು ಕೊಟ್ಟಿದ್ದೀರಿ, ಆದರೆ ಅವು ಜನರಿಗೆ ತಲುಪಿದೆಯಾ? ಆ ಬಗ್ಗೆ ಸಮೀಕ್ಷೆ ನಡೆದಿದೆಯೇ ? 5 ವರ್ಷದಲ್ಲಿ ರೈತರಿಗೆ ಏನು ಕೊಟ್ಟಿದ್ದೀರಿ,  ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡಿ ನೀವು ಅಧಿಕಾರಕ್ಕೆ ಬಂದಿರಿ, ರಾಜ್ಯದ ಖಜಾನೆಗೆ ಹಣ ವಾಪಸ್ ತರುತ್ತೇನೆ ಎನ್ನುವುದು ನಿಮ್ಮ‌ ಪ್ರಮುಖ ಭರವಸೆಯಾಗಿತ್ತು, ಆದರೆ ಆ ಕೆಲಸ ಆಯಿತಾ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಎಸಿಬಿ, ಲೋಕಾಯುಕ್ತಗಳಿಂದ ರಾಜ್ಯದ ಬೊಕ್ಕಸಕ್ಕೆ 1000 ಕೋಟಿ ನಷ್ಟವಾಗುತ್ತಿದೆ. ಇದೇನಾ ನಿಮ್ಮ ಋಣಾತ್ಮಕ ಸರ್ಕಾರದ ಸಾಧನೆ? ಸಂಸ್ಥೆಗಳನ್ನು ಕೊಂದರೆ ದೇಶ ಉದ್ದಾರ ಆಗುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ  ಎಚ್. ವಿಶ್ವನಾಥ್ ಕಿಡಿಕಾರಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ