ಸ್ಯಾಂಡಲವುಡ್ ಮೇಲಿನ ಐಟಿ ದಾಳಿಯಲ್ಲಿ 109 ಕೋಟಿ ಅಘೋಷಿತ ಆಸ್ತಿ ಪತ್ತೆ

 109 Crore illegal Property Detected In Sandalwood IT Raids

07-01-2019

ಸ್ಯಾಂಡಲವುಡ್ ನಟ-ನಿರ್ಮಾಪಕರ ಮೇಲೆ ಕಳೆದ ಮೂರು ದಿನಗಳಿಂದ ನಡೆದ ದಾಳಿ ಕೊನೆಗೂ ಅಂತ್ಯ ಕಂಡಿದೆ.  ಜನವರಿ 3 ರಿಂದ 5 ರವರೆಗೆ ನಡೆದ ದಾಳಿಯಲ್ಲಿ, ನಟರು ಹಾಗೂ ನಿರ್ಮಾಪಕರ ಮನೆಗಳಿಂದ ಒಟ್ಟು  109 ಕೋಟಿ ಮೊತ್ತದ  ದಾಖಲೆ ರಹಿತ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ. 

2.85 ಕೋಟಿ ನಗದು, 25.3  ಕೆಜಿ ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು 11 ಕೋಟಿಗೂ ಅಧಿಕ ಮೊತ್ತದ ವಸ್ತುಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿಮಾಡಿದೆ. ಇನ್ನು ದಾಳಿ ವೇಳೆ ಸಿನಿಮಾ ನಟರು ಹಾಗೂ ನಿರ್ಮಾಪಕರು,  ಸಿನಿಮಾ ಪ್ರದರ್ಶನ, ವಿತರಣೆ ಸೇರಿದಂತೆ ನಾನಾ ವಲಯಗಳಲ್ಲಿ  ಆದಾಯ  ತೆರಿಗೆ ವಂಚಿಸಿರುವುದು,  ನಿಯಮ ಮೀರಿ  ನಗದು ವ್ಯವಹಾರ  ನಡೆದಿರುವುದಕ್ಕೆ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ. 

ಚಿತ್ರಮಂದಿರಗಳಲ್ಲಿ ಸಂಗ್ರಹಿಸಿದ ಟಿಕೇಟ್ ಹಣಕ್ಕೆ ದಾಖಲೆಗಳಿಲ್ಲ, ನಟರು ದಾಖಲೆಗಳಿಲ್ಲದೆ  ಆಸ್ತಿ, ಆಭರಣದಲ್ಲಿ ಹೂಡಿಕೆ ಮಾಡಿದ್ದಾರೆ.  ಆಡಿಯೋ, ಡಿಜಿಟಲ್ ಮತ್ತು  ಸ್ಯಾಟ್‍ಲೈಟ್ ಹಕ್ಕುಗಳ ಮಾರಾಟದಿಂದ  ಸಂಗ್ರಹಿಸಿದ ಹಣಕ್ಕೆ ಸೂಕ್ತ ದಾಖಲೆ ಇಲ್ಲ. ವಿತರಕರಿಂದ ನಿಯಮ ಬಾಹಿರವಾಗಿ ಹಣ ಪಡೆದಿರುವುದು ಹೀಗೆ ನಾನಾ ರೀತಿಯ ಅಕ್ರಮಗಳು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. 

ಕರ್ನಾಟಕ ಮತ್ತು ಗೋವಾ ವಲಯದ 108 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡು ನಟ ಆಸ್ತಿ ಅಕ್ರಮಗಳ ಮಾಹಿತಿ ಸಂಗ್ರಹಿಸಿದ್ದಾರೆ. ಐಟಿ ಇಲಾಖೆ 109 ಕೋಟಿ ಅಕ್ರಮ ನಡೆದಿರುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಆದರೆ ಈ ಪ್ರಕಟಣೆಯಲ್ಲಿ ಯಾವ-ಯಾವ ನಟರು ಎಷ್ಟು ವಂಚನೆ ಮಾಡಿದ್ದಾರೆ ಎಂಬುದರ ಪ್ರತ್ಯೇಕ ಮಾಹಿತಿ ಇಲ್ಲ. ಒಟ್ಟಿನಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಸ್ಯಾಂಡಲವುಡ್ ನಟ-ನಿರ್ಮಾಪಕರ ಮೇಲಿನ ದಾಳಿಯಲ್ಲಿ ನಿಯಮ ಉಲ್ಲಂಘನೆ ಸಾಬೀತಾಗಿರೋದಂತು ಸತ್ಯ. 


ಸಂಬಂಧಿತ ಟ್ಯಾಗ್ಗಳು

# IT Raid #109 Crore #Sandalwood # illegal Property


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ