ಟಿವಿ ಆಯ್ತು ಈಗ ಪೇಪರ್ ನೋಡಿ

 The Congress is leaving a new newspaper

05-01-2019

ಸದಾಕಾಲ ಚುನಾವಣೆ ಎದುರಿಸಲು ಶಾರ್ಟ್‍ಕಟ್ ಹುಡುಕುವ ಕಾಂಗ್ರೆಸ್ ಕಳೆದ ಆಡಳಿತಾವಧಿ ಕಾಲದಲ್ಲಿ ತಮ್ಮ ಸಾಧನೆ ಬೆಂಬಲಿಸಲು ಸುದ್ದಿ ಟಿವಿ ಎಂಬ ಕಾಂಗ್ರೆಸ್ ಮುಖವಾಣಿಯೊಂದನ್ನು ಸೃಷ್ಟಿಸಿಕೊಂಡಿತ್ತು. ಆದರೆ ದುರದೃಷ್ಟವಶಾತ ಆ ವಾಹಿನಿಯೂ ಉಳಿಯಲಿಲ್ಲ. ಕಾಂಗ್ರೆಸ್ ಪಕ್ಷವೂ ಗೆಲ್ಲಲಿಲ್ಲ. ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು ಮಾತ್ರ ನಿಜ. ಹೀಗಾಗಿ ಸುದ್ದಿ ಟಿವಿಯಲ್ಲಿ ಕೈ ಸುಟ್ಟುಕೊಂಡ ಕಾಂಗ್ರೆಸ್  ಈ ಬಾರಿ  ಪೇಪರ್ ಗೆ ಕೈ ಇಟ್ಟಿದೆ. 

ಮುಂಬರುವ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಆರಂಭಿಸಿರುವ ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕಾಗಿ ಪೇಪರ್ ಆರಂಭಿಸಲು ಮುಂದಾಗಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೊಂದಿರುವ ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲೇ ರಾಜ್ಯದಲ್ಲಿ ಕಾಂಗ್ರೆಸ್  ಸಾಧನೆಗಳನ್ನು ಒಳಗೊಂಡ ಪತ್ರಿಕೆಯೊಂದು ಮಾರುಕಟ್ಟೆಗೆ ಬರಲಿದೆ. ಈ ಪತ್ರಿಕೆ ಪಾಕ್ಷಿಕವಾಗಿದ್ದು, 15 ದಿನಕ್ಕೊಮ್ಮೆ ಬಿಡುಗಡೆಯಾಗಲಿದೆ. ಜನವರಿ ತಿಂಗಳಾಂತ್ಯಕ್ಕೆ ಈ ಪತ್ರಿಕೆ ಮಾರುಕಟ್ಟೆ ಬರಲಿದೆ. 

ಸಾಮಾಜಿಕ ಜಾಲ ತಾಣವನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಇನ್ನು ಮುಂದೆ ತಮ್ಮದೇ ಪತ್ರಿಕೆಯ ಮೂಲಕವೂ ಕಾಂಗ್ರೆಸ್ ಸಾಧನೆಗಳು, ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದೆ. ಜನವರಿ 26 ಗಣರಾಜ್ಯೋತ್ಸವದಂದು ಈ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾಗಲಿದೆ. ಈ ಹಿಂದೆಯೂ ಹೀಗೆ ಮಾಧ್ಯಮವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್‍ನ ಹಿರಿಯ ನಾಯಕ, ಸಚಿವ ಕೆ.ಜೆ.ಜಾರ್ಜ್ ಒಡೆತನದಲ್ಲಿ ಸುದ್ದಿ ಟಿವಿ ಎಂಬ ವಾಹಿನಿಯೊಂದನ್ನು ಆರಂಭಿಸಲಾಗಿತ್ತು. 
ಈ ವಾಹಿನಿ ಕೇವಲ ಕಾಂಗ್ರೆಸ್ ನ ಮುಖವಾಣಿಯಾಗಿ ಕೆಲಸ ಮಾಡಿತ್ತು. ಆದರೆ ದುರದೃಷ್ಟವಶಾತ ಸಂಪಾದಕರ ತಿಕ್ಕಲುತನ ಹಾಗೂ ಆಂತರಿಕ ಸಮಸ್ಯೆಗಳಿಂದ ಈ ವಾಹಿನಿ ಮುಚ್ಚಲ್ಪಟ್ಟಿದ್ದು, ಉದ್ಯೋಗಿಗಳು ಬೀದಿಗೆ ಬಿದ್ದಿದ್ದರು. ಹೀಗಾಗಿ ಈ ಬಾರಿ ವಾಹಿನಿಗಳಿಂದ ದೂರ ಉಳಿದಿರುವ ಕಾಂಗ್ರೆಸ್ ಕಡಿಮೆ ಖರ್ಚಿನ ಪೇಪರ್ ಮೊರೆ ಹೋಗಿದೆ. ಒಟ್ಟಿನಲ್ಲಿ ಐದು ವರ್ಷಗಳ ಸುದೀರ್ಘ ಅವಧಿಯವರೆಗೆ ಸರ್ಕಾರ ನಡೆಸಿದ ಬಳಿಕ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾಗುವಲ್ಲಿ ವಿಫಲವಾದ ಕಾಂಗ್ರೆಸ್ ಪೇಪರ್ ಮೂಲಕ ಮುಂಬರುವ ಚುನಾವಣೆಯಲ್ಲಿ ಏನು ಮೋಡಿ ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

# The Congress # New Newspaper # In Karnataka #After TV


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ