ಟ್ರಂಪ್‍ಗೆ ಬೋರ ಮಾಡಿದ್ರಾ ಮೋದಿ..? 

 Trump Criticized Modi

05-01-2019

ಯುದ್ಧಪೀಡಿತ ಅಪ್ಘಾನಿಸ್ತಾನದಲ್ಲಿ ಶಾಂತಿ ಮರುಸ್ಥಾಪನೆಗೆ ಇತರ  ರಾಷ್ಟ್ರಗಳು ನೀರಿಕ್ಷಿತ ಪ್ರಮಾಣದಲ್ಲಿ ಸಹಾಯ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೋದಿಯವರ ಬಗ್ಗೆಯೂ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡೋನಾಲ್ಡ್  ಟ್ರಂಪ್, ಭಾರತದ ಪ್ರಧಾನಿ ಮೋದಿಯವರು ತಾವು ಅಪ್ಘಾನಿಸ್ತಾನದಲ್ಲಿ ಲೈಬ್ರರಿ ನಿರ್ಮಿಸಿದ್ದನ್ನು ನನ್ನೊಂದಿಗೆ ಹಲವಾರು ಬಾರಿ ಹೇಳಿಕೊಂಡರು. ಆದರೆ ಇಲ್ಲಿ ಲೈಬ್ರರಿ ಯಾರಿಗೆ ಉಪಯೋಗವಾಗುತ್ತದೆಯೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. 

ಮೋದಿಯವರು, ತಾವು ನಿರ್ಮಿಸಿದ ಲೈಬ್ರರಿಗಾಗಿ ನಾನು ಅವರನ್ನು ಅಭಿನಂದಿಸಲು ಎಂದು ಬಯಸಿದಂತಿದ್ದು ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಯುದ್ಧಪೀಡಿತ ಅಪ್ಘಾನಿಸ್ತಾನದಲ್ಲಿ ಯಾರಾದ್ರೂ 5 ಗಂಟೆ ಲೈಬ್ರರಿಯಲ್ಲಿ  ಕಳೆಯುತ್ತಾರೆಯೇ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಭಾರತ ಮಾತ್ರವಲ್ಲದೆ ರಷ್ಯಾ, ಪಾಕಿಸ್ತಾನ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿರುವ ಟ್ರಂಪ್ ತಾಲಿಬಾನಿಗಳಿಂದ ಪೀಡಿತವಾಗಿರುವ ಅಪ್ಘಾನಿಸ್ತಾನಕ್ಕೆ ಅಗತ್ಯ ನೆರವು ನೀಡುವಲ್ಲಿ ಈ ರಾಷ್ಟ್ರಗಳು ವಿಫಲವಾಗಿವೆ. ಆದರೆ 6 ಸಾವಿರ ಮೈಲುಗಳ ಆಚೆ ಇದ್ದರೂ ನಾವು ಅಪ್ಘಾನಿಸ್ತಾನಕ್ಕೆ ಸಹಾಯಹಸ್ತ ಚಾಚಿದ್ದೇವೆ. ನಾವು ನೆರೆಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತೇವೆ ಎಂದು ಬೆನ್ನು ತಟ್ಟಿಕೊಂಡಿದ್ದಾರೆ. 

ಅಮೇರಿಕಾ ಅಪ್ಘಾನಿಸ್ತಾನದ ಶಾಂತಿ ಸ್ಥಾಪನೆಗಾಗಿ ಬಿಲಿಯನ್‍ಗಟ್ಟಲೇ ಖರ್ಚು ಮಾಡಿದೆ. ಆದರೆ ಇತರ ರಾಷ್ಟ್ರಗಳು ಮಾತ್ರ 100 ಅಥವಾ 200 ಸೈನಿಕರನ್ನು ಕಳುಹಿಸುವ ಮೂಲಕ ತಾವು ಶಾಂತಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ಅಪ್ಘಾನಿಸ್ತಾನಕ್ಕೆ ಭಾರತದ ಕೊಡುಗೆಯನ್ನು  ಟ್ರಂಪ್ ಲಘುವಾಗಿ ಪರಿಗಣಿಸಿದ್ದು, ಮೋದಿ ತಮ್ಮ ಭೇಟಿ ವೇಳೆಯಲ್ಲೆಲ್ಲ ಲೈಬ್ರರಿಯ ಬಗ್ಗೆಯೇ ಪುನಃ ಪುನಃ ಹೇಳಿಕೊಂಡರು ಎನ್ನುವ ಮೂಲಕ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#Trump #Modi #Criticized #Afghanistan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ