ಜನರ ಕಣ್ಷಿಗೆ ಕೆಸರು ಎರಿಚುವ ಕೆಲಸ ನೀರಾವರಿ ಸಚಿವರಿಂದ ಆಗಬಾರದು !

Kannada News

05-06-2017

ಹುಬ್ಬಳ್ಳಿ:- ಜಲಸಂಪನ್ಮೂಲ ಸಚಿವರು ಜಾಹೀರಾತು ನೀಡಿ ಕೇವಲ ನಾಟಕ ವಾಡಿದ್ದಾರೆ. ಜಾಹೀರಾತನಲ್ಲಿ ನೀಡಿದ್ದು ಕೇವಲ ಸುಳ್ಳು- ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮತ್ತು ರೈತರ ಸಾಲ ಮನ್ನಾ ಮಾಡಬೇಕು- ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇನೆ. ಈಗಾಗಲೇ ನೀರಾವರಿ ಇಲಾಖೆ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೆ ಇಂದಿನಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇನೆ. ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ, ಅದು ನನ್ನ ಕರ್ತವ್ಯ ಎಂದರು. ಜಲಸಂಪನ್ಮೂಲ ಇಲಾಖೆಯಲ್ಲಿ ಎಷ್ಡು ಖರ್ಚು ಮಾಡಿದ್ದಾರೆ ಅಂತಾ ಹೇಳಲಿ. ಕೇವಲ ಜನರ ಕಣ್ಷಿಗೆ ಕೆಸರು ಎರಿಚುವ ಕೆಲಸ ನೀರಾವರಿ ಸಚಿವರಿಂದ ಆಗಬಾರದು. ಇನ್ನು ದಲಿತರ ಮನೆಯಲ್ಲಿ ಉಪಹಾರ, ಊಟದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಟೀಕೆಗೆ ಪ್ರತಿಕ್ರಿಯಿಸಿದ ಅವರು. ಪರಮೇಶ್ವರ್ ಮೊದಲು ಅರಿಯಬೇಕು, ನಾನು ದಲಿತರ ಮನೆಯಲ್ಲಿ ಉಪಹಾರ, ಊಟ ಏಕೆ ಮಾಡುತ್ತೇನೆ ಎಂದು. ದಲಿತರ ನೋವು ನಲಿವಿಗೆ ಸ್ಪಂದಿಸುತ್ತೇನೆ. ದಲಿತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿಯಲಿಕ್ಕೆ ಈ ಪ್ರವಾಸ, ಕೇವಲ ರಾಜಕಾರಣಕ್ಕೆ ನಾನು ದಲಿತರ ಮನೆಗೆ ಹೋಗುತ್ತಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ