ಮತ್ತೆ ಬಣ್ಣ ಹಚ್ಚಿದ ಉಮಾಶ್ರೀ

X Minister  Umashree Acting in Movie

04-01-2019

ಬಣ್ಣದ ಲೋಕದ ಸೆಳೆತವೆ  ಹಾಗೆ. ಎಷ್ಟು ದೂರ ಹೋದರು ಕಲಾವಿದರು ಮತ್ತೆ ಮತ್ತೆ ಬಣ್ಣದ ಲೋಕಕ್ಕೆ ಸೆಳೆಯಲ್ಪಡುತ್ತಾರೆ. ಉಮಾಶ್ರೀ ಕೂಡ ಹಾಗೆ  ಸಿನಿಮಾ ಲೋಕದಿಂದ ದೂರವಾಗಿ ಎಮ್‍ಎಲ್‍ಎಯಾಗಿ ಸಚಿವೆಯಾಗಿ ರಾಜಕೀಯದಲ್ಲಿ ಬೆರೆತು ಹೋಗಿದ್ದರು. ಆದರೆ ಇದೀಗ ಸುದೀರ್ಘ 6 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. 

ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ ತಾಯಿಯಾಗಿ ಉಮಾಶ್ರೀ ಅಭಿನಯವನ್ನು ಮೆಚ್ಚದವರೆ ಇಲ್ಲ.  ಈ ಚಿತ್ರಕ್ಕಾಗಿಯೇ ಪ್ರಶಸ್ತಿಯನ್ನು ಗಳಿಸಿಕೊಂಡ ಉಮಾಶ್ರೀ ಇದೀಗ ಮತ್ತೊಮ್ಮೆ ಕ್ರೇಜಿಸ್ಟಾರ್ ರವಿಚಂದ್ರನ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಮರಳಿದ್ದಾರೆ. ರವಿಚಂದ್ರನ ಅವರ ಬಹುನೀರಿಕ್ಷಿತ ಚಿತ್ರ, ಬ್ಯಾಟ್ರಾಯ ಚಿತ್ರದಲ್ಲಿ ಉಮಾಶ್ರೀ ರವಿಚಂದ್ರನ ಅವರ ತಾಯಿಯಾಗಿ ಮತ್ತೆ ಬಣ್ಣ ಹಚ್ಚಲಿದ್ದಾರೆ. 

ಇತ್ತೀಚಿಗೆ ಕೇವಲ ಹೋರಾಟಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ನಟ ಚೇತನ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಸಂಕ್ರಮಣದ ವೇಳೆಗೆ ಚಿತ್ರದ ಫಸ್ರ್ಟ ಲುಕ್ ಬಿಡುಗಡೆಯಾಗುವ ನೀರಿಕ್ಷೆ ಇದೆ. ಈ ಚಿತ್ರವನ್ನು ಮದನ್ ಮೋಹನ್ ನಿರ್ದೇಶಿಸುತ್ತಿದ್ದು, ಆರ್.ಎಸ್.ಶ್ರೀನಿವಾಸ್  ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ವಿಭಿನ್ನ ಕತೆ ಹೊಂದಿರುವ ಈ ಚಿತ್ರ ಜನವರಿ 12 ರಿಂದ ಚಿತ್ರೀಕರಣ ಆರಂಭಿಸಲಿದ್ದು, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಸಿಕರು ಮಿಸ್ ಮಾಡಿಕೊಂಡ ಪುಟ್ನಂಜಿಯನ್ನು ತೆರೆಯ ಮೇಲೆ ನೋಡುವ ಅವಕಾಶ ಲಭ್ಯವಾಗಿದ್ದು, ಚಿತ್ರರಸಿಕರಲ್ಲಿ ಕುತೂಹಲ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

# Umashree #Kannada Movie # Acting #Ravichandra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ