ಏರಿಕೆಯಾಯ್ತು ಚಿನ್ನದ ದರ 

Gold prices Rising

04-01-2019

ಹೊಸ ವರ್ಷ ಬಂದಿದೆ,  ಸಂಕ್ರಾಂತಿಯೂ ಬರಲಿದೆ ಹೀಗಾಗಿ ಒಂದಿಷ್ಟು ಚಿನ್ನದ ಒಡವೆ ಕೊಳ್ಳೋಣ ಅನ್ನೋ 
ಪ್ಲ್ಯಾನ್‍ನಲ್ಲಿ ನೀವಿದ್ದರೆ ಸಧ್ಯ ನಿಮ್ಮ ಪ್ಲ್ಯಾನ್ ಮುಂದೂಡೋದು ಒಳ್ಳೆಯದು. ಯಾಕೆ ಅಂತಿರಾ ಹೊಸ ವರ್ಷದಿಂದ ಚಿನ್ನದ ದರದಲ್ಲಿ ಸತತ ಏರಿಕೆಯಾಗುತ್ತಿದ್ದು, ಬೆಳ್ಳಿ ದರದಲ್ಲೂ ಏರಿಕೆ ಕಂಡುಬಂದಿದೆ.


ಇಂದು ಬೆಂಗಳೂರಿನಲ್ಲಿ 24 ಕ್ಯಾರೇಟ್  ಚಿನ್ನದ ದರ 10 ಗ್ರಾಂಗೆ 31,268 ರೂಪಾಯಿಗಳಿದ್ದು, 22 ಕ್ಯಾರೇಟ್ ಚಿನ್ನದ ದರ 10 ಗ್ರಾಂಗೆ 29803 ರೂಪಾಯಿಗಳಿವೆ. ಡಿಸೆಂಬರ್ 29 ರಂದು ಈ ದರ 31054 ರೂಪಾಯಿಗಳಿತ್ತು. ಮಂಗಳವಾರ ಅಂದ್ರೆ ಹೊಸವರ್ಷದ ಆರಂಭದ ಜನವರಿ 1 ರಂದು  10 ಗ್ರಾಂಗೆ 31 ಸಾವಿರ 173 ಗಳಿದ್ದು, ಕಳೆದ ಎರಡು -ಮೂರುದಿನಗಳಿಂದ ಸತತವಾಗಿ ಚಿನ್ನದ ದರ ಹೆಚ್ಚುತ್ತಲೆ ಇದೆ.  ಬೆಳ್ಳಿ ಅದರ ಅಂದಾಜು 150 ರೂಪಾಯಿನಷ್ಟು ಏರಿಕೆ ಕಂಡಿದ್ದು,  1 ಕೆಜಿಗೆ 39250 ರೂಪಾಯಿ  ದರವಿದೆ. ಕೈಗಾರಿಕಾ ಮತ್ತು ನಾಣ್ಯ ತಯಾರಿಕೆ, ಪಾತ್ರೆ ತಯಾರಿಕಾ ಘಟಕದಿಂದ ಬೇಡಿಕೆ ಹೆಚ್ಚಿರುವುದರಿಂದ ದರ ಏರಿಕೆಯಾಗಿದೆ ಎನ್ನಲಾಗುತ್ತಿದೆ. 

ಹೊಸವರ್ಷದಂದು ಗಿಫ್ಟ್ ಗಳಿಗೆ ಹೆಚ್ಚು ಬೇಡಿಕೆ ಇರೋದರಿಂದ ಚಿನ್ನದ ದರ ಏರಿಕೆಯಾಗಿದ್ದು, ಇದೀಗ ಸಂಕ್ರಾಂತಿ ಹಬ್ಬವಿರೋದರಿಂದಲೂ ದರ ಏರಿಕೆ ಇನ್ನಷ್ಟು ಕಾಲ ಮುಂದುವರಿಯುವ ಸಾಧ್ಯತೆ ಇದೆ. ನಿನ್ನೆ ದೆಹಲಿಯ ಚಿನಿವಾರ ಮಾರುಕಟ್ಟೆಯಲ್ಲಿ  22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 30850  ನಷ್ಟಿದ್ದರೇ, 24 ಕ್ಯಾರೇಟ್ ಚಿನ್ನದ ಬೆಲೆ 10 ಗ್ರಾಂಗೆ 32650 ನಷ್ಟಿತ್ತು. ಒಟ್ಟಿನಲ್ಲಿ ಹೊಸ ವರ್ಷಕ್ಕೆ ಚಿನ್ನದ ಶಾಕ್ ಎದುರಾಗಿದ್ದು, ಹೆಂಗಳೆಯರಿಗೆ ಬೇಸರ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

#Bangalore #Rising #Gold price #Silver


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ