ಮೌಂಟ್ ವಿನ್ಸನ್ ಶಿಖರ ಏರಿದ ಸಾಧಕಿ ಅರುಣಿಮಾ..!

 Arunima, who climbed Mount Vincon

04-01-2019 210

ವಿಕಲ ಚೇತನ ಸಾಧಕಿ ಅರುಣಿಮಾ ಸಿನ್ಹಾ ಅಂಟಾರ್ಟಿಕಾದ ಅತೀ ಎತ್ತರದ ಶಿಖರ ಮೌಂಟ್ ವಿನ್ಸನ್ ಏರುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಮಾಡಿದ ಮೊದಲ ವಿಕಲಚೇತನ ಮಹಿಳೆ ಎಂಬ ಬಿರುದಿಗೂ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ಅರುಣಿಮಾ ಸಾಧನೆಗೆ ಸ್ವತಃ ಪ್ರಧಾನಿ ಮೋದಿ ಸಂತೋಷ ವ್ಯಕ್ತಪಡಿಸಿದ್ದು, ನಿಮ್ಮಂಥವರೆ ಈ ದೇಶದ ಹೆಮ್ಮೆ ಎಂದು ಟ್ವಿಟ್ ಮಾಡಿದ್ದಾರೆ. 

ಒಂಟಿಯಾಗಿ ರೈಲಿನಲ್ಲಿ ಚಲಿಸುವ ವೇಳೆ ಕಳ್ಳರಿಂದ ನೂಕಲ್ಪಟ್ಟು ರೇಲ್ವೈ ಟ್ರ್ಯಾಕ್‍ಗೆ ಬಿದ್ದು ಕಾಲು ಕಳೆದುಕೊಂಡ ಅರುಣಿಮಾ ಬಾಲ್ಯವಿವಾಹದ ಸಂತ್ರಸ್ಥೆಯೂ ಹೌದು. ಆದರೂ ಕೂಡ ಛಲಬಿಡದೆ ಕೃತಕ ಕಾಲಿನಲ್ಲಿ ಶಿಖರ ಏರುವ ಕನಸು ಹೊತ್ತು ಪ್ರಯತ್ನ ಆರಂಭಿಸಿದ ಅರುಣಿಮಾ, ಭಾರತದ ಧ್ವಜವನ್ನು ಮೌಂಟ್ ವಿನ್ಸನ್ ಶಿಖರದ ಮೇಲೆ ನೆಟ್ಟು ಸಾಧನೆ ಮೆರೆದಿದ್ದಾರೆ. 
ಇನ್ನು ಸಾಧನೆ ಬಳಿಕ ಟ್ವಿಟರ್‍ನಲ್ಲಿ ಸಂತೋಷ ಹಂಚಿಕೊಂಡಿರುವ ಅರುಣಿಮಾ, ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಎತ್ತಿಹಿಡಿಯುವುದಕ್ಕೆ ಸಾಧ್ಯವಾಗಿದ್ದು, ನಿಮ್ಮೆಲ್ಲರ ಪ್ರೀತಿ ಮತ್ತುಪ್ರೋತ್ಸಾಹದಿಂದ. ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. 

ಉತ್ತರ ಪ್ರದೇಶ ಮೂಲದ ಅರುಣಿಮಾ ವಿಶ್ವದ ಎಲ್ಲ ಎತ್ತರದ ಶಿಖರಗಳನ್ನು ಏರಬೇಕು ಮತ್ತು ಅಲ್ಲಿ ಭಾರತದ ಧ್ವಜವನ್ನು ನೆಡಬೇಕು ಎಂಬ ಕನಸು ಹೊತ್ತಿದ್ದು, ಅದಕ್ಕಾಗಿ ದೈಹಿಕ ನ್ಯೂನ್ಯತೆಗಳನ್ನು ಮೀರಿ ಪ್ರಯತ್ನಶೀಲರಾಗಿದ್ದಾರೆ. ಅರುಣಿಮಾ ಸಾಧನೆಗೆ ಪ್ರಧಾನಿ ಸೇರಿದಂತೆ ಎಲ್ಲ ಗಣ್ಯರು, ಕ್ರೀಡಾಪಟುಗಳು, ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

# Arunima #Mount Vincon's peak! #Climbed #Achivment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ