ನಟ-ನಿರ್ಮಾಪಕರ ಮನೆ ಮೇಲೆ ಮುಂದುವರಿದ ಐಟಿ ದಾಳಿ

Continued IT Attack on Actor-Producer

04-01-2019

ನಿನ್ನೆ ಸ್ಯಾಂಡಲವುಡ್ ನಟರು ಹಾಗೂ ನಿರ್ಮಾಪಕರುಗಳ ಮನೆ ಮೇಲೆ ನಡೆದ ಐಟಿ ದಾಳಿ ಇಂದೂ ಮುಂದುವರೆದಿದ್ದು, ಬೆಳಗ್ಗೆನಿಂದಲೂ ಅಧಿಕಾರಿಗಳು ಪರಿಶೀಲನೆ  ಮುಂದುವರೆಸಿದ್ದಾರೆ. ನಿನ್ನೆ ಏಕಕಾಲಕ್ಕೆ, ನಟ ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಯಶ್,ಸುದೀಪ್ ಹಾಗೂ ನಿರ್ಮಾಪಕರುಗಳಾದ ರಾಕ್‍ಲೈನ್ ವೆಂಕಟೇಶ್, ವಿಜಯ್ ಕಿರಗಂದೂಋ, ಸಿ.ಆರ್.ಮನೋಹರ್, ಜಯಣ್ಣ ಅವರುಗಳ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 

ದಾಳಿ ವೇಳೆ ಸುದೀಪ್ ಚಿತ್ರದ ಚಿತ್ರೀಕರಣದಲ್ಲಿದ್ದರೇ, ಯಶ್ ಮುಂಬೈಗೆ ತೆರಳಿದ್ದರು. ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮನೆಯಲ್ಲೇ ಇದ್ದರು. ಯಶ್ ಮತ್ತು ಸುದೀಪ ತಕ್ಷಣ ಮನೆಗೆ ಆಗಮಿಸಿ ಅಗತ್ಯ ಮಾಹಿತಿ ನೀಡಿದ್ದರು.  ಐಟಿ ದಾಳಿಯಾಗಿ ಒಂದು ದಿನ ಕಳೆದರೂ ಇನ್ನು ಪರಿಶೀಲನೆ ಮುಗಿಯದ ಕಾರಣ ಅಧಿಕಾರಿಗಳು ಇನ್ನೂ ಪರಿಶೀಲನೆ ಮುಂದುವರೆಸಿದ್ದಾರೆ. ಹೀಗಾಗಿ ಎಲ್ಲ ನಟರು ಮನೆಯಲ್ಲೇ ಉಳಿದಕೊಂಡಿದ್ದು ಐಟಿ ದಾಳಿ ಮುಗಿಯೋದನ್ನೆ ಕಾಯುವಂತಾಗಿದೆ. 

ಮಾಹಿತಿ ಪ್ರಕಾರ ಚಿತ್ರರಂಗದ ಮೇಲಿನ ದಾಳಿ ಅಧಿಕಾರಿಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಬುಧವಾರವೇ  ನ್ಯಾಯಾಲಯದಿಂದ ವಾರೆಂಟ್ ಪಡೆದುಕೊಂಡಿದ್ದರು.  200 ಅಧಿಕಾರಿಗಳ ತಂಡ ಒಟ್ಟು 30 ತಂಡಗಳಲ್ಲಿ ನಟ-ನಿರ್ಮಾಪಕರ ಮನೆ, ಕಚೇರಿ, ಹೊಟೇಲ್ ರೂಂಗಳು, ಫಾರ್ಮ್ ಹೌಸ್, ಸಂಬಂಧಿಕರಮನೆ ಮೇಲೆ ದಾಳಿ ನಡೆಸಿದೆ. 

ದಾಳಿ ವೇಳೆ ನಟ-ನಿರ್ಮಾಪಕರು, ಅವರ ಪತ್ನಿಯರು, ಕುಟುಂಬಸ್ಥರು ಅಧಿಕಾರಿಗಳು ಪ್ರತ್ಯೇಕವಾಗಿ ಕರೆಯಿಸಿ ವಿಚಾರಣೆ ನಡೆಸಿದ್ದು, ಹಣ-ಸ್ಥಿರಾಸ್ತಿ,ವಾಹನಗಳು, ಆಭರಣಗಳು,ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇಂದು ಸಂಜೆ ವೇಳೆಗೆ ದಾಳಿಅಂತ್ಯವಾಗುವ ಸಾಧ್ಯತೆ ಇದ್ದು, ಬಳಿಕವಷ್ಟೇ ನಟ-ನಿರ್ಮಾಪಕರುಗಳ ಆಸ್ತಿಯ ಸಂಪೂರ್ಣ ವಿವರ ಲಭ್ಯವಾಗಲಿದೆ. 


ಸಂಬಂಧಿತ ಟ್ಯಾಗ್ಗಳು

#It Raid # Actor-Producer's Home #Continued #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ