ಸಿದ್ಧಗಂಗಾ ಶ್ರೀ ಆಸ್ಪತ್ರೆಗೆ ದಾಖಲು..!

 Siddaganga Swamiji in Hospital

04-01-2019

ಸಿದ್ದಗಂಗಾಶ್ರೀಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೈ-ಕಾಲುಗಳಲ್ಲಿ ಸ್ವಲ್ಪ ಪ್ರಮಾಣದ ಊತ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ವೀಲ್ಹ್ ಚೇರ್ ನಲ್ಲಿ ಆಸ್ಪತ್ರೆಗೆ ಕರೆತರಲಾಯಿತು.  ಮಠದಲ್ಲಿ ಚಿಕಿತ್ಸೆ ಮುಂದುವರಿಸಿದರೆ ಸೋಂಕು ಹೆಚ್ಚುವ ಸಾಧ್ಯತೆ ಇರೋದರಿಂದ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ. 

ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಚೈನೈನ ರೇಲಾ ಆಸ್ಪತ್ರೆಯ ವೈದ್ಯರಾದ ಡಾ.ಸುಬ್ರಹ್ಮಣ್ಯ ಅವರು ಮಠಕ್ಕೆ ಆಗಮಿಸಿ  ಶ್ರೀಗಳ ಆರೋಗ್ಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈದ್ಯರು,  ಶ್ರೀಗಳ ಆರೋಗ್ಯದಲ್ಲಿ  ಚೇತರಿಕೆ ಕಂಡುಬರುತ್ತಿದೆ.  ಶ್ವಾಸಕೋಶದಲ್ಲಿ  ಸೋಂಕು ಕ್ರಮೇಣ ನಿವಾರಣೆಯಾಗುತ್ತಿದೆ.  ಅವರಿಗೆ ವಯಸ್ಸಾಗಿರುವ ಕಾರಣ ಚೇತರಿಕೆ ನಿಧಾನವಾಗುತ್ತಿದೆ ಎಂದರು. 

ಇನ್ನು ಶ್ರೀಗಳ ಆಪ್ತವೈದ್ಯರಾಗಿರುವ ಡಾ.ಪರಮೇಶ್ ಮಾತನಾಡಿ, ಮಠದಲ್ಲಿ ಶ್ರೀಗಳಿಗೆ ಸೋಂಕು ತಗುಲುವ ಭೀತಿಯಿಂದ ಕಿರಿಯ ಶ್ರೀಗಳ ಅಪ್ಪಣೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದೇವೆ. ಅಲ್ಲಿ ಒಂದು ವಾರಗಳ ಕಾಲ ಯಾವುದೇ ವಿಐಪಿಗಳಿಗೂ ಭಕ್ತರಿಗೂ ದರ್ಶನ ಅವಕಾಶವಿಲ್ಲ ಎಲ್ಲರೂ ಸಹಕರಿಸಬೇಕು ಎಂದರು. ಆಸ್ಪತ್ರೆಯಲ್ಲಿ ಶ್ರೀಗಳ ಚಿಕಿತ್ಸೆ ಮುಂದುವರೆದಿದ್ದು,  ಚೇತರಿಸಿಕೊಳ್ಳುವ ಭರವಸೆ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

# Siddaganga swamiji #Tumkur #Admitted #Hospital


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ