ಫೆಬ್ರವರಿ 8 ರಂದು ರಾಜ್ಯ ಬಜೆಟ್

State Budget On 8th February

04-01-2019

ಫೆಬ್ರವರಿ 8 ರಂದು 2019-20 ನೇ ಸಾಲಿನ  ರಾಜ್ಯ ಬಜೆಟ್ ಮಂಡನೆಯಾಗಲಿದೆ. ಇದೇ ವೇಳೆ ರೈತರ ಪಾಲಿಗೆ ಎಟುಕದ ದ್ರಾಕ್ಷಿಯಂತಾಗಿರುವ ಸಾಲ ಮನ್ನಾಕ್ಕೂ ಒಂದು ಸ್ಪಷ್ಟ ರೂಪ ಸಿಗುವ ಭರವಸೆ ವ್ಯಕ್ತವಾಗಿದೆ. ಫೆಬ್ರವರಿ 8 ರಂದು ಸಿಎಂ ಬಜೆಟ್ ಮಂಡಿಸಲಿದ್ದು, ಈ ವೇಳೆಯಲ್ಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೆ ಬ್ಯಾಂಕ್‍ಗಳಿಗೆ ರೈತ ಸಾಲಮನ್ನಾಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. 

ಜೆಪಿಭವನದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಫೆಬ್ರವರಿ 8 ರಂದು ರಾಜ್ಯ ಬಜೆಟ್ ಮಂಡಿಸಲಿದ್ದೇನೆ. ಈ ವೇಳೆ ರೈತರ ಸಾಲ ಮನ್ನಾದ ಬಾಕಿ ಹಣ 46 ಕೋಟಿಯನ್ನು ಮುಂದಿನ ಆರ್ಥಿಕ   ವರ್ಷದಿಂದ ಜಾರಿಗೆ ಬರುವಂತೆ ಚುಕ್ತಾ ಮಾಡುವ ನಿರ್ಣಯವನ್ನು ಪ್ರಕಟಿಸಲಾಗುವುದು ಎಂದರು. 

ಲೋಕಸಭಾ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ಮಂಡನೆಯಾಗುತ್ತಿರುವ  ಈ ಬಜೆಟ್ ಸಾಕಷ್ಟು ನೀರಿಕ್ಷೆ ಮೂಡಿಸಿದ್ದು, ರೈತರ ಸಾಲಮನ್ನಾ, ವೃದ್ಧಾಪ್ಯ ವೇತನ ಹೆಚ್ಚಳ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಕೂಡ ಪ್ರಕಟಿಸುವ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#State Budget #8th February # Cm Kumarswamy # Debt relief


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ