ಬಸ್ ಡಿಕ್ಕಿ ಬೈಕ್ ಸವಾರ ಸಾವು 

 Road accident Bike Rider Dies

03-01-2019 213

 

ತಿರುಪತಿಯಿಂದ ನಗರಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ. ಬೈಕ್‍ನ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 
ಎಂವಿ ಗಾರ್ಡನ್‍ನ ನಿವಾಸಿ ಶರತ್ (30) ಮೃತಪಟ್ಟ ದುರ್ದೈವಿ. ಬೈಕ್‍ನ ಹಿಂಬದಿ ಸವಾರ ಸಂತೋಷ್ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಸಾಯಿ ಆಸ್ಪತ್ರೆ ದಾಖಲಿಸಲಾಗಿದೆ.  
ಸೆಂಟ್ರಲ್‍ಮಾಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಅವರನ್ನು ಹಿಂದೆ ಕೂರಿಸಿಕೊಂಡು ರಾತ್ರಿ 12.30 ಬೈಕ್‍ನಲ್ಲಿ ಹೋಗುತ್ತಿದ್ದ ಶರತ್, ಹಳೆಮದ್ರಾಸ್ ರಸ್ತೆಯ 100 ಅಡಿ ರಸ್ತೆಯಲ್ಲಿ ಇಂದಿರಾನಗರಕ್ಕೆ ಬಲಗಡೆ ತಿರುವು ತೆಗೆದುಕೊಳ್ಳುವಾಗ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಶರತ್ ಸ್ಥಳದಲ್ಲಿಯೇ ಮೃತಪಟ್ಟರೆ, ತಲೆಗೆ ಗಂಭೀರ ಗಾಯಗೊಂಡ ಸಂತೋಷ್‍ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲಸೂರು ಸಂಚಾರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Accident #Bike #Bus #One Death


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ