ಕೇರಳಕ್ಕೆ ಕರ್ನಾಟಕದಿಂದ ನೋ ಬಸ್

 No Bus from Karnataka to Kerala

03-01-2019

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ಕೇರಳದಲ್ಲಿ ಪ್ರತಿಭಟನೆ, ಹೋರಾಟಗಳು ತೀವ್ರಗೊಂಡಿದ್ದು, ದೇವರನಾಡಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ರಾಜ್ಯದಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಎಲ್ಲಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿ ಸಿ) ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಕೇರಳಕ್ಕೆ ಸಂಚರಿಸುತ್ತಿದ್ದ ಬೆಂಗಳೂರಿನ 3, ಮಂಗಳೂರಿನ 40 ಬಸ್ ಸೇರಿ ರಾಜ್ಯದ ನಾನಾ ಭಾಗಗಳಿಂದ ಹೋಗಬೇಕಿದ್ದ ಒಟ್ಟು ಬಸ್‍ಗಳ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ. ಈ ನಡುವೆ ರಾಜ್ಯದಿಂದ ಕೇರಳಕ್ಕೆ ತೆರಳಿದ್ದ ಕೆ ಎಸ್ ಆರ್ ಟಿ ಸಿ ಬಸ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಹಾನಿಗೊಳಿಸಿದ್ದಾರೆ. ತ್ರಿಶೂರ್‍ನಲ್ಲಿ ಅಂಬಾರಿ ಬಸ್‍ಗೆ ಕಲ್ಲು ಹೊಡೆದ ಪರಿಣಾಮ ಹಿಂಭಾಗದ ಗಾಜು ಪುಡಿ ಪುಡಿಯಾಗಿದೆ. ಅಲ್ಲದೆ ತಿರುವನಂತಪುರಂನ ಪಳ್ಳಿಪುರಂ ಎಂಬಲ್ಲಿ 
ಇನ್ನೊಂದು ಕೆಎಸ್‍ಆರ್‍ಟಿಸಿ ಬಸ್ ಮೇಲೂ ಕಲ್ಲು ತೂರಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಸ್ ಮೈಸೂರು ಡಿಪೋ ಗೆ ಸೇರಿದ್ದಾಗಿದೆ. ಮೈಸೂರು-ತಿರುವನಂತಪುರಂ ರೂಟ್‍ನಲ್ಲಿ ಸಾಗುತ್ತಿದ್ದ ವೇಳೆ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ. 

 ಒಟ್ಟು ಕರ್ನಾಟಕದ 4 ಕ್ಕೂ ಹೆಚ್ಚು ಬಸ್‍ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಕೇರಳ ಸಾರಿಗೆಯ 79 ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೇರಳದ  ಹಲವೆಡೆ ಪ್ರವಾಸಿಗರಿಗೂ ಪ್ರತಿಭಟನೆಯ ಬಿಸಿ ತಟ್ಟಿದೆ. ಒಟ್ಟಿನಲ್ಲಿ ಇಬ್ಬರು ಮಹಿಳೆಯರ ದೇವಾಲಯ ಪ್ರವೇಶದಿಂದ ಸೃಷ್ಟಿಯಾಗಿರುವ ಆಕ್ರೋಶಕ್ಕೆ ಕೇರಳದ ಸಾಮಾನ್ಯ ಜನರ ಪರಿಸ್ಥಿತಿ ಹದಗೆಟ್ಟಿದೆ. 


ಸಂಬಂಧಿತ ಟ್ಯಾಗ್ಗಳು

# Kerala tense # Karnataka #No Bus #Shabarimale


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ