ಸಾಲದ ಹಣ ಕೊಡಲಾಗದಿದ್ದಕ್ಕೆ ಪತ್ನಿ ಮತ್ತು ಮಕ್ಕಳನ್ನು ಹೊತ್ತೊಯ್ದರು !

Kannada News

05-06-2017

ಹಾವೇರಿ:- ಸಾಲದ ಹಣ ಹಿಂದಿರುಗಿಸದ ಹಿನ್ನೆಲೆ ಪತ್ನಿ ಮತ್ತು ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಉದಯ ಸಣ್ಣತಂಗಿ (38) ಮೃತ ವ್ಯಕ್ತಿ. ಹುಬ್ಬಳ್ಳಿಯಲ್ಲಿ ಉದಯ ಮತ್ತು ಆತನ ಪತ್ನಿ ಶೋಭಾ ಒಂದು ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಿರುಕುಳ ತಾಳಲಾರದೇ  ಉದಯ ಮತ್ತು ಆತನ ಕುಟುಂಬ ಊರು ಬಿಟ್ಟು ಬಂದಿದ್ದರು.  ಸಾಲದ ಹಣ ಹಿಂದಿರುಗಿಸದಿದ್ದಕ್ಕಾಗಿ ಸಾಲ ಕೊಟ್ಟಿದ್ದ ಪವನ್ ಮತ್ತು ಆತನ ಗ್ಯಾಂಗ್ ನವರು  ಪತ್ನಿ ಮತ್ತು ಮಕ್ಕಳನ್ನ ಹೊತ್ತುಕೊಂಡು ಹೋಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಡರಾತ್ರಿ ಉದಯನ ಪತ್ನಿ ಮತ್ತು ಮಕ್ಕಳನ್ನ ಹೊತ್ತು ಕೊಂಡು ಹೋಗಿದ್ದಾರೆ. ಪತ್ನಿ‌ ಮತ್ತು ಮಕ್ಕಳನ್ನ ಹೊತ್ತುಕೊಂಡು ಹೋಗಿದ್ದಕ್ಕೆ ಮನನೊಂದ ಪತಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಪಿಎಸ್ಐ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಉದಯ ಸಾವಿನ ವಿಚಾರ ತಿಳಿದ ನಂತರ ಆತನ ಪತ್ನಿ ಮತ್ತು ‌ಮಕ್ಕಳನ್ನ ಪವನ್ ಮತ್ತು ಆತನ ಸಹಚರರು ವಾಪಸ್ ಕರೆತಂದಿದ್ದಾರೆ. ಪವನ್ ಸಹಚರರಾದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ