ಒಂಟಿ ಮಹಿಳೆ ಕೊಲೆ ಪ್ರಕರಣದ ಆರೋಪಿ ಬಂಧನ

Arrest of The Accused In The  Woman Murder Case

03-01-2019

ಬೆಂಗಳೂರಿನ ಒಂಟಿ ಮಹಿಳೆಯರ ಪಾಲಿಗೆ ಹಂತಕನಾಗಿ ಭಯ ಮೂಡಿಸಿ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಒಂಟಿ ಮಹಿಳೆಯರನ್ನು ಗುರುತಿಸಿ ಅವರ  ಮನೆಗೆ ನುಗ್ಗಿ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಈ ಅಸಾಮಿ ಬರೋಬ್ಬರಿ 6 ವರ್ಷಗಳ ಬಳಿಕ ಕೆಂಪೇಗೌಡನಗರ ಪೆÇಲೀಸರ ಅತಿಥಿಯಾಗಿದ್ದಾನೆ.

ಕೆಂಪೇಗೌಡನಗರದ ರಾಘವೇಂದ್ರ(35)ಬಂಧಿತ ಆರೋಪಿಯಾಗಿದ್ದಾನೆ. ಈತನಿಗೆ ಒಂಟಿ ಮಹಿಳೆಯ ಕೊಲೆ ಕೃತ್ಯದಲ್ಲಿ ಸಾಥನೀಡುತ್ತಿದ್ದ ಮತ್ತೊಬ್ಬ ಆರೋಪಿ ಈಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಬಂಧಿತ ರಾಘವೇಂದ್ರನಿಂದ ಚಿನ್ನಾಭರಣ ನಗದು ವಶಪಡಿಸಿಕೊಳ್ಳಲಾಗಿದೆ.ಕಳೆದ 2013ರಲ್ಲಿ ಕೆಂಪೇಗೌಡ ನಗರದ ಮನೆಯಲ್ಲಿ ಒಂಟಿಯಾಗಿದ್ದ ಮಾನಸ ಎಂಬಾಕೆಯ ಮನೆಗೆ ನುಗ್ಗಿದ್ದ ಈತ ಕಳವಿಗೆ ಯತ್ನಿಸಿದ್ದು ಪ್ರತಿರೋಧ ತೋರಿದ ಮಾನಸ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ 400 ಗ್ರಾಂ ಚಿನ್ನ 1 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.

ಶಾಲೆಗೆ ಹೋಗಿದ್ದ ಮಗು ಮನೆಗೆ ಬಂದ ಬಳಿಕ ಮಾನಸ ಹತ್ಯೆ ಬಗ್ಗೆ ಗೊತ್ತಾಗಿತ್ತು.ಆದರೆ ಯಾವುದೇ ಸುಳಿವು ಕೂಡ ಪ್ರಕರಣದಲ್ಲಿ ಪತ್ತೆಯಾಗಿರಲಿಲ್ಲ.ಪ್ರಕರಣವನ್ನೇ ಕೈಬಿಟ್ಟಿದ್ದ ಪೆÇಲೀಸರಿಗೆ ಬೇರೊಂದು ಕೊಲೆ ಪ್ರಕರಣವನ್ನು ತನಿಖೆ ಮಾಡುವಾಗ ಸುಳಿವು ಸಿಕ್ಕಿತ್ತು. ನಂತರ ಪ್ರಕರಣದ ಬೆನ್ನತ್ತಿದ್ದ ಪೆÇಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 6 ವರ್ಷದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಇವರಿಬ್ಬರು ರಾಜರಾಜೇಶ್ವರಿನಗರದಲ್ಲಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದು ಬಂಧಿತರಾಗಿದ್ದರೂ ಮಾನಸ ಕೊಲೆ ಮಾಡಿರುವ ವಿಷಯವನ್ನು ಬಾಯ್ಬಿಟ್ಟಿರಲಿಲ್ಲ ಬೇರೊಂದು ಕೊಲೆಯ ಬೆನ್ನತ್ತಿದ ಕೆಂಪೇಗೌಡನಗರ ಪೊಲೀಸರು ತನಿಖೆ ವೇಳೆ ದೊರೆತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಮಾಹಿತಿ ನೀಡಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Accused Arrest #Bangalore #Woman Murder Case #Raghvendra


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ