2018 ರ ಮೋಸ್ಟ್ ಸ್ಟೈಲಿಶ್ ಬ್ರೈಡ್ ಯಾರು ಗೊತ್ತಾ?

 Who

03-01-2019

ಕೆಲ ದಿನಗಳ ಹಿಂದೆಯಷ್ಟೇ ಅದ್ದೂರಿ ವಿವಾಹದ ಮೂಲಕ ಹೊಸ ಬದುಕಿಗೆ ಕಾಲಿಟ್ಟಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ಸಂಭ್ರಮ ಹಾಗೂ ಖುಷಿಗೆ ಮತ್ತೊಂದು ಗರಿ ಸೇರಿದೆ. ಹೌದು 2018 ರಲ್ಲಿ ಬಾಲಿವುಡ್‍ನ ಸಾಕಷ್ಟು ನಟ-ನಟಿಯರು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಆದರೆ ಇವರೆಲ್ಲರಲ್ಲಿ ಅತ್ಯಂತ ಸ್ಟೈಲಿಶ್ ವಧು ಪಟ್ಟಕ್ಕೆ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. 

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ 2018  ರ ಅತ್ಯಂತ ಸ್ಟೈಲಿಶ್ ವಧು ಯಾರು ಎಂಬುದರ ಬಗ್ಗೆ ಪೋಲಿಂಗ್ ನಡೆಸಿತ್ತು.  ಈ ಪೋಲಿಂಗ್‍ನಲ್ಲಿ ದೀಪಿಕಾ ಪಡುಕೋಣೆಗೆ ಅತ್ಯಧಿಕ ಮತಗಳು ಲಭ್ಯವಾಗಿದ್ದು, ಕರ್ನಾಟಕದ ಬೆಡಗಿ ದೀಪಿಕಾ ಮೋಸ್ಟ್ ಸ್ಟೈಲಿಶ್ ಬ್ರೈಡ್ ಆಫ್ 2018 ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ. 

ಸಿಂಧಿ ಹಾಗೂ  ಕೊಂಕಣಿ ಸಂಪ್ರದಾಯದಂತೆ ಇಟಲಿಯಲ್ಲಿ ಮದುವೆಯಾದ ದೀಪಿಕಾ ಮದುವೆಯ ಎಲ್ಲ ಸಮಾರಂಭಗಳಲ್ಲಿ ಒಂದಕ್ಕಿಂತ ಒಂದು ಆಕರ್ಷಕ ಡ್ರೆಸ್‍ಗಳಲ್ಲಿ ಕಾಣಿಸಿಕೊಂಡಿದ್ದರು. ವೆಡ್ಡಿಂಗ್ ಕಾಸ್ಟ್ಯೂಮ್ ಅಂತೂ ಎಲ್ಲೆಡೆ ಪ್ರಶಂಸೆ ಪಡೆದುಕೊಂಡಿತ್ತು. ಅಲ್ಲದೇ ಮೇಕಪ್, ಆಭರಣ,ಅಲಂಕಾರ ಎಲ್ಲದರಲ್ಲೂ ದೀಪಿಕಾ ಮನಸೊರೆಗೊಂಡಿದ್ದರು. 

ಪೋಲಿಂಗ್‍ನಲ್ಲಿ ದೀಪಿಕಾ ಪಡುಕೋಣೆ 55 ಶೇಕಡಾದಷ್ಟು ಮತಗಳನ್ನು ಪಡೆದಿದ್ದಾರೆ. ಇನ್ನು ಇದೆ ಪೋಲಿಂಗ್‍ನಲ್ಲಿ ಇತ್ತೀಚಿಗೆ ಮದುವೆಯಾದ ಪ್ರಿಯಾಂಕಾ ಚೋಪ್ರಾಗೆ ದೀಪಿಕಾ ನಂತರದ ಸ್ಥಾನ ಲಭ್ಯವಾಗಿದೆ. ಪ್ರಿಯಾಂಕಾ ಚೋಪ್ರಾ ಶೇಕಡಾ 18 ರಷ್ಟು ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದ ಮನೆಮಗಳು ಈ ಗೌರವಕ್ಕೆ  ಪಾತ್ರವಾಗಿರೋದು ನಮ್ಮ  ಪಾಲಿಗೆ ಹೆಮ್ಮೆಯ ವಿಷಯ. 


ಸಂಬಂಧಿತ ಟ್ಯಾಗ್ಗಳು

# Deepika padukone #Bride of the year #2018 # Times of India


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ