ಕನ್ನಡ ಸಂಸ್ಕøತಿಗೆ ಮಸಿ ಬಳಿಯುತ್ತಿರುವ ಧಾರಾವಾಹಿಗಳು..!

 Kannada Serial Making Fun of Our Culture

02-01-2019

ಜನರ ಮನೋರಂಜನೆಗಾಗಿ ಹುಟ್ಟಿಕೊಂಡ ಟಿವಿಗಳು ಇವತ್ತು ಮನುಷ್ಯನ ನೈತಿಕ , ಮಾನಸಿಕ ಅಧಃಪತನಕ್ಕೆ ಕಾರಣವಾಗುತ್ತಿವೆಯಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿರೋದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್‍ಗಳು. ಹೌದು ಕನ್ನಡ ಮನೋರಂಜನಾ  ಕ್ಷೇತ್ರದಲ್ಲಿ ಇವತ್ತು ಧಾರಾವಾಹಿಗಳದ್ದೇ ಹಾವಳಿ. ಪ್ರತಿಯೊಂದು ವಾಹಿನಿಯೂ ಸಂಜೆ 6 ಗಂಟೆಯಿಂದ ಆರಂಭಿಸಿದ್ರೆ, ರಾತ್ರಿ 11 ಗಂಟೆವರೆಗೂ ವಿವಿಧ ಬಗೆಯ ಚಿತ್ರಕತೆಗಳನ್ನು ಒಳಗೊಂಡ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ. ಆದರೆ ಹೀಗೆ ಪ್ರಸಾರವಾಗುತ್ತಿರುವ ಸೀರಿಯಲ್‍ಗಳ ಕತೆ, ಸಂಭಾಷಣೆಗಾಗಿ ಬಳಕೆಯಾಗುತ್ತಿರುವ ಪದಗಳು, ಕತೆ ಸಾಗುತ್ತಿರುವ ದಿಕ್ಕು ಎಲ್ಲವನ್ನು ಗಮನಿಸಿದ್ರೆ ಇದು ನಮ್ಮ ಸಾಂಸ್ಕøತಿಕ ಶ್ರೀಮಂತ ಸಮಾಜವನ್ನು ಹಾಳುಗೆಡುವವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ ಎನ್ನಿಸುತ್ತಿದೆ. 

ಸಾಂಸ್ಕøತಿಕವಾಗಿ ಶ್ರೀಮಂತವಾಗಿರುವ ಕರ್ನಾಟಕದಲ್ಲಿ ಕಲೆ,ಸಾಹಿತ್ಯ,ಸಂಸ್ಕøತಿಗಳಿಗೆ ಯಾವುದೇ ಕೊರತೆಯಿಲ್ಲ. ಆದರೂ ಟಿವಿಗಳ ಹಾವಳಿಯಿಂದ ಇವೆಲ್ಲವೂ ಜನಮಾನಸದಿಂದ ಮರೆಯಾಗುತ್ತಿದೆ. ಹೋಗಲಿ ಈ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಾದ್ರೂ ನಮ್ಮ ಮನೆಗಳನ್ನು ಒಳ್ಳೆ ದಿಕ್ಕಿನತ್ತ ಪ್ರೋತ್ಸಾಹಿಸುತ್ತಿವೆಯಾ ಎಂದರೇ...ಖಂಡಿತಾ ಇಲ್ಲ. ಎಲ್ಲ ಧಾರಾವಾಹಿಗಳಲ್ಲೂ ಕಥಾನಾಯಕ ಅಥವಾ ನಾಯಕಿಗೆ ಒಬ್ಬ ಗಂಡ, ಇನ್ನೊಬ್ಬ ಪ್ರಿಯಕರ, ಇಲ್ಲವೇ ಮಕ್ಕಳಿಲ್ಲ ಎಂಬ ಕಾರಣಕ್ಕೆ ಗಂಡನಿಗೆ ಎರಡನೇ ಮದುವೆ ಮಾಡಿಸುವ ಹೆಂಡತಿ, ಅತ್ತೆಯನ್ನು ಬೆದರಿಸುವ ಸೊಸೆ, ಸೊಸೆಗೆ ಚಿತ್ರಹಿಂಸೆ ನೀಡುವ ಅತ್ತೆ, ಹೀಗೆ  ಮನೆಹಾಳುವ ಸ್ಟೋರಿಗಳನ್ನೆ ಈ ಧಾರಾವಾಹಿಗಳು ಹೆಣ್ಣುಮಕ್ಕಳ ತಲೆಯಲ್ಲಿ ತುಂಬುತ್ತಿವೆ. 
ಇನ್ನೊಂದೆಡೆ ಈ ರೀತಿಯ ಧಾರಾವಾಹಿಯಲ್ಲಿ ಅಪರಾಧ ಕೃತ್ಯಗಳನ್ನು  ಎಸಗೋದು ಹೇಗೆ ಅನ್ನೋದನ್ನು ಇಂಚು ಇಂಚಾಗಿ ಕಲಿಸಿಕೊಡಲಾಗ್ತಿದೆ. ಕಿಡ್ನಾಪ್ ಮಾಡೋದು, ಶೂಟ್ ಮಾಡೋದು, ಚಾಕುವಿನಿಂದ ಚುಚ್ಚೋದು, ಬಿಸಿ ಎಣ್ಣೆ ಸುರಿಯೋದು,ಹೂತು ಹಾಕೋದು,ಸುಳ್ಳು ಆರೋಪ ಮಾಡೋದು,ಎಕ್ಸಿಡೆಂಟ್ ಮಾಡಿಸೋದು,ಚಾಡಿ ಹೇಳೋದು, ಬೇರೆಯವರ ಮಾತುಗಳನ್ನು ಕದ್ದುಕೇಳೋದು, ಮೊಬೈಲ್ ಚಾಟ್‍ಗಳನ್ನು ಕದ್ದು ಓದೋದು, ಬ್ಲಾಕ್‍ಮೇಲ್ ಮಾಡೋದು,  ಆಹಾರಕ್ಕೆ ವಿಷ ಬೆರೆಸೋದು, ಮತ್ತಿನ ಔಷಧಿಗಳ ಬಳಕೆ, ಪೋಟೋ-ವಿಡಿಯೋ ಸಿದ್ಧಪಡಿಸಿ ಹಣಕ್ಕಾಗಿ ಪೀಡಿಸೋದು, ದಾಖಲೆಗಳಿಗೆ ಮೋಸದಿಂದ ಸಹಿ ಹಾಕಿಸಿಕೊಳ್ಳುವುದು ಹೀಗೆ ಎಲ್ಲ ರೀತಿಯ ಅಪರಾಧ ಕೃತ್ಯಗಳನ್ನು ನಡೆಸೋದು ಹೇಗೆ ಎಂಬುದನ್ನು ವಿವರವಾಗಿ ತೋರಿಸುವ ಮೂಲಕ ಟಿವಿ ವೀಕ್ಷಕರಿಗೆ ಬಹಿರಂಗವಾಗಿಯೇ ಅಪರಾಧ ಕೃತ್ಯಗಳಲ್ಲಿ ತೊಡಗಲು ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತಿದೆ. 

ಧಾರಾವಾಹಿಗಳಲ್ಲಿ ಬಳಸುವ ಭಾಷೆ ಹಾಗೂ ಶಬ್ದಗಳಂತೂ ದೇವರಿಗೇ ಪ್ರೀತಿ. ಕೊಚ್ಚಿ ಬಿಡ್ತಿನಿ, ಚುಚ್ಚಿಬಿಡ್ತಿನಿ, ಸಾಯಿಸಿ ಬಿಡ್ತಿನಿ, ಹುಟ್ಟಲಿಲ್ಲಾ ಅನ್ನಿಸಿಬಿಡ್ತಿನಿ,ಕಾಲು ಮುರಿತಿನಿ,ಕೊಂದು ಹಾಕ್ತಿನಿ,ಮುಗಿಸಿಬಿಡ್ತಿನಿ ಸಿಗಿದು ತೋರಣ ಕಟ್ತಿನಿ ಇಷ್ಟೇ ಅಲ್ಲದೆ ಅವಾಚ್ಯ ಹಾಗೂ ಕಟುವಾದ ಶಬ್ದಗಳನ್ನು ಬಳಸುವ ಮೂಲಕ ನೋಡುಗರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕøತಿಯಲ್ಲದ ಈ ರೀತಿಯ ಕೆಟ್ಟ ಸಂಭಾಷಣೆಗಳು ಮಕ್ಕಳಿಗೆ ತಪ್ಪುಹಾದಿ ತುಳಿಯಲು ಪ್ರೇರಣೆ ನೀಡುತ್ತಿದೆ.  ಇದಲ್ಲದೆ  
ಮನೆಯಲ್ಲಿಯೆ ಕುಳಿತು ಬಹಿರಂಗವಾಗಿ ಮದ್ಯ ಸೇವನೆ, ಸ್ಮೋಕಿಂಗ್, ಮಾದಕ ದ್ರವ್ಯ ಸೇವನೆಯ ತರಬೇತಿ ನೀಡುವ ಶಾಲೆಗಳಂತೆ ಸೀರಿಯಲ್ ಪ್ರಸಾರವಾಗುತ್ತಿದೆ. ಅತಿಯಾದ ಅನಾರೋಗ್ಯಕರ ಸ್ಪರ್ಧೆಯಿಂದ ಮನೋರಂಜನಾ ಮಾಧ್ಯಮಗಳು ತಮ್ಮ ಎಲ್ಲೇ ಮೀರುತ್ತಿದ್ದು, ಜನರು ಇಂಥ ಧಾರಾವಾಹಿಗಳಿಂದ ಕೆಟ್ಟ ಕೆಲಸಗಳತ್ತಲೇ ಹೆಚ್ಚು ಪ್ರೇರೇಪಿತರಾಗುತ್ತಿರುವುದು ದುರ್ದೈವದ ಸಂಗತಿ. ಇನ್ನಾದರೂ ಮನೋರಂಜನಾ ವಾಹಿನಿಗಳ ಈ ಅಂಧಾ ದರ್ಬಾರ್‍ಗೆ ಕಡಿವಾಣ ಬೀಳಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Kannada Serial #Spoiling #Our culture #Bad story


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ