ವೈ ಪಾಲಿಟಿಕ್ಸ್ ರೈ? 

Why Politics Rai

02-01-2019

ಚಲನಚಿತ್ರರಂಗಕ್ಕೂ, ಸಿನಿಮಾ ರಂಗಕ್ಕೂ ಈ ಹಿಂದಿನಿಂದಲೂ ಬಲವಾದ ನಂಟಿದೆ. ಅದೇಷ್ಟೋ ತಾರೆಯರು ಚಂದನವನದ ಬಳಿಕ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ಮುಗ್ಗರಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಹಿಂದಿನ ವಿಧಾನಸಭೆ ಚುನಾವಣೆ ವೇಳೆಗೆ ಪ್ರಜಾಕೀಯ ಪಕ್ಷ ಸ್ಥಾಪಿಸಲು ಹೋಗಿ ಮುಗ್ಗರಿಸಿದ್ದು, ನಮ್ಮ ಕಣ್ಣಮುಂದೆಯೇ ಇದೆ. ಹೀಗಿರುವಾಗಲೇ ಬಹುಭಾಷಾ ನಟ ಪ್ರಕಾಶ್ ರೈ, ಖಾದಿ ತೊಡಲು ಮುಂದಾಗಿದ್ದು ಪರ-ವಿರೋಧ ಚರ್ಚೆ ರಂಗೇರುತ್ತಿದೆ. 

ಅನಿಷ್ಟಕ್ಕೆಲ್ಲ ಶನಿಶ್ವರನೇ ಕಾರಣ ಅನ್ನೋ ಹಾಗೆ ಸದಾಕಾಲ ಎಲ್ಲ ವಿಚಾರಗಳಿಗೂ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಟೀಕಿಸುತ್ತಲೆ ಬಂದಿದ್ದ  ನಟ ಪ್ರಕಾಶ್ ರೈ, ಒಂದಲ್ಲ ಒಂದು ದಿನ ರಾಜಕೀಯದ ಅಂಗಳದಲ್ಲಿ ಕಟೌಟ್‍ನಂತೆ ನಿಲ್ತಾರೆ ಅನ್ನೋ ಮಾತು ಚರ್ಚೆಯಲ್ಲಿತ್ತು. ಆದರೆ ಹೊಸವರ್ಷದ ಆರಂಭದಲ್ಲೇ ಈ ಮಾತುಗಳಿಗೆ ಬಲ ತುಂಬಿರುವ ಪ್ರಕಾಶ್ ರೈ ಕೊನೆಗೂ ತಮ್ಮ ನಟನ ಇಮೆಜ್‍ನಿಂದ ಹೊರಬಂದು ಫುಲ್ ಟೈಂ ರಾಜಕಾರಣಿಯಾಗುವ ಮುನ್ಸೂಚನೆ ನೀಡಿದ್ದಾರೆ. ಮೋದಿ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದೇ ಬಿಂಬಿತವಾಗುತ್ತಿರುವ 2019 ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈ ಸ್ಪರ್ಧಿಸಲಿದ್ದು, ಸ್ವತಃ ರೈ ಈ ಮಾಹಿತಿಯನ್ನು ತಮ್ಮ ಟ್ವಿಟರ್ನಲ್ಲಿ  ಹಂಚಿಕೊಂಡಿದ್ದಾರೆ. 

ರಾಜ್ಯದಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವೇಳೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಬದಲು ಮೋದಿ ಸರ್ಕಾರದ ಮೇಲೆ ಮುಗಿಬಿದ್ದ ಪ್ರಕಾಶ್ ರೈ ಅಂದಿನಿಂದ ಸದಾಕಾಲ ಮೋದಿಯನ್ನು  ಟೀಕಿಸುವುದನ್ನೆ ಕೆಲಸ ಮಾಡಿಕೊಂಡಿದ್ದರು. ಇದರಿಂದ ರಾಜ್ಯದ ಹಲವು ಜಿಲ್ಲೆಗಳ ಭೇಟಿ ವೇಳೆ ಪ್ರಕಾಶ್ ರೈ ಪ್ರತಿಭಟನೆಯನ್ನೂ ಎದುರಿಸಬೇಕಾಯಿತು. ಕಾಂಗ್ರೆಸ್ ಪಕ್ಷದ ಎಜೆಂಟರಂತೆ ವರ್ತಿಸುತ್ತ ಬಂದಿದ್ದ ಅವರನ್ನು ರಾಜ್ಯದ ಬಹುತೇಕ ಜನರು ಕಾಂಗ್ರೆಸ್ ಪಕ್ಷದ ನಾಯಕನಂತೆ ನೋಡಿದ್ದರು. 
ಆದರೆ ಇದೀಗ ಸ್ವತಃ ತಾವೇ ರಾಜಕೀಯಕ್ಕೆ ಇಳಿಯೋದಾಗಿ ಪ್ರಕಾಶ್ ರೈ ಪ್ರಕಟಿಸಿದ್ದು, ಯಾವ ಪಕ್ಷದಿಂದ ಕಣಕ್ಕಿಳಿತಾರೆ ಅನ್ನೋದು ಸಧ್ಯದ ಕುತೂಹಲ. ಕಾಂಗ್ರೆಸ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪ್ರಕಾಶ್ ರೈ ಕರ್ನಾಟಕದಲ್ಲಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ತಮ್ಮ ಕ್ಷೇತ್ರಗಳನ್ನೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್ ಮತ್ತೆ ಈತನಿಗೂ ಟಿಕೇಟ್ ನೀಡಿದರೇ, ಕಾಂಗ್ರೆಸ್ ಮುಖಂಡರು ಪಕ್ಷದ ವಿರುದ್ಧವೇ ಬೀದಿಗಿಳಿಯೋದು ಗ್ಯಾರಂಟಿ. ಹೀಗಾಗಿ ರೈ ಕಾಂಗ್ರೆಸ್ ಸೇರೋದು ಡೌಟ್. 
ಮೂಲಗಳ ಪ್ರಕಾರ ಪ್ರಕಾಶ್ ರೈ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ವೈಚಾರಿಕವಾಗಿ ಯಾವುದೇ ಸಾಮಥ್ರ್ಯ ಇಲ್ಲದೆ, ಭಾಗವಹಿಸಿದ ಎಲ್ಲ ಚರ್ಚೆಗಳಲ್ಲೂ ದಯನೀಯವಾಗಿ ಸೋಲುಂಡಿರುವ ಪ್ರಕಾಶ್ ರೈಗೆ ಜನ ಹೇಗೆ ಬೆಂಬಲಿಸುತ್ತಾರೆ ಗೊತ್ತಿಲ್ಲ. ಎಲ್ಲೋ ಕೆಲ ರೈತರಿಗೆ ಚಿಕ್ಕ ಪುಟ್ಟ ಸಹಾಯಮಾಡಿರುವ ರೈಗೆ ವ್ಯವಸ್ಥೆಯ ಬಗ್ಗೆ ಆಗಲಿ ಅಥವಾ ಜನರಿಗೆ ಒದಗಿಸಬೇಕಾದ ಸೌಲಭ್ಯಗಳ ಬಗ್ಗೆಯಾಗಲಿ ಕಾಳಜಿ ಇಲ್ಲ. ಸದಾ ಹಿಂದುತ್ವದ ವಿರುದ್ಧ ಬಾಯಿ ಹರಿಬಿಡುತ್ತಲೆ ಇರುವ ಪ್ರಕಾಶ್ ರೈಯನ್ನು ನಾವು ಯಾಕೆ ಬೆಂಬಲಿಸಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರಕಾಶ್ ರೈ ಕೊನೆಗೂ ತಮ್ಮ ಅಧ್ವಾನದ ಹೇಳಿಕೆಗಳನ್ನು ಮತವಾಗಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ಮತದಾರ ರೈ ಭವಿಷ್ಯವನ್ನು ಹೇಗೆ ತಿದ್ದುತ್ತಾರೆ ಕಾದು ನೋಡಬೇಕಿದೆ. 


ಸಂಬಂಧಿತ ಟ್ಯಾಗ್ಗಳು

# Prakash Rai #2019 #Politics # Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ