ರಾಮಮಂದಿರವನ್ನು ಕೋರ್ಟ್‍ಗೆ ಬಿಟ್ಟ ಮೋದಿ 

 Modi Left RAM MANDIR TO Court

02-01-2019

ಮುಂದಿರುವ ಲೋಕಸಭಾ ಚುನಾವಣೆಯ ಮೊದಲ ವಿಷಯ ರಾಮಮಂದಿರ ನಿರ್ಮಾಣ ಹಾಗೂ ವಿರೋಧ ಎಂಬ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿಯೇ ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ಮೋದಿ ತೀರ್ಪಿನ ಬಳಿಕ ಮಂದಿರ ನಿರ್ಮಾಣ ಎಂಬ ಹೇಳಿಕೆ ನೀಡಿರುವುದು ಇದೀಗ ಹಲವು ಪ್ರಶ್ನೆ ಮೂಡಿಸಿದೆ.   ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿಬೇಕೆಂಬ ಒತ್ತಡ ಹೆಚ್ಚುತ್ತಲೇ ಇರುವ ಸಂಧರ್ಬದಲ್ಲಿ ಮೋದಿ ನೀಡಿರುವ ಈ ಹೇಳಿಕೆ ಚರ್ಚೆಯ ಹಲವು ಆಯಾಮಗಳನ್ನು ತೆರೆದಿಟ್ಟಿದೆ. 

ಮೊದಲು ರಾಮಮಂದಿರಕ್ಕೆ ಸಂಬಂಧಿಸಿದಂತೆ  ನ್ಯಾಯಾಂಗ ಪ್ರಕ್ರಿಯೆ ಮುಗಿಯಲಿ, ಆಮೇಲೆ ಸರ್ಕಾರದ ಜವಾಬ್ದಾರಿಯಾಗಿ  ಏನೆಲ್ಲ ಪ್ರಯತ್ನ ಮಾಡಬೇಕಾಗುತ್ತದೋ ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎಂಬ ಪ್ರಧಾನಿ ಪ್ರತಿಕ್ರಿಯೆ ಸಧ್ಯಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಒತ್ತಡವನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದೆ. ಆ ಮೂಲಕ ಪ್ರಧಾನಿ ಮೋದಿ ಸ್ವಪಕ್ಷಿಯರ ವಿರೋಧಕ್ಕೂ ತುತ್ತಾಗಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿದ್ದರೂ ಯಾವಾಗಲೂ  ಆರ್.ಎಸ್.ಎಸ್‍ನಿಂದ ಸೂಕ್ತ ಅಂತರ ಕಾಯ್ದುಕೊಳ್ಳುವ ಮೋದಿ ರಾಮಮಂದಿರ ನಿರ್ಮಾಣದ ವಿಚಾರದಲ್ಲೂ ಆರ್.ಎಸ್.ಎಸ್‍ನ್ನು ಪರಿಗಣಿಸಲು ಸಿದ್ಧರಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. 

ಇನ್ನು ಮೋದಿಯವರ ಈ ಧೊರಣೆಯಿಂದ ಬೇಸತ್ತು, ಆರ್.ಎಸ್.ಎಸ್. ನಿತಿನ್ ಗಡ್ಕರಿಯವರನ್ನು ಬೆಂಬಲಿಸುತ್ತಿದ್ದು, ಮೋದಿಯವರನ್ನು ನಿರ್ಲಕ್ಷಿಸುತ್ತಿದೆ. ಮುಂಬರುವ 2019 ರ ಚುನಾವಣೆಯಲ್ಲಿ ಪ್ರಬಲ ವಿರೋಧ ಪಕ್ಷದ ಕೊರತೆ ಇದೆ. ಮಿತ್ರ ಪಕ್ಷಗಳು, ಒಂದಾಗಿ ಮಹಾಘಟಬಂಧನಗೆ ಮುಂಧಾದರೂ ಯಶಸ್ಸು ಸಿಗುತ್ತಿಲ್ಲ. ಹೀಗಾಗಿ ಸುಲಭವಾಗಿ ಗೆದ್ದು ಬರುವ ಕನಸಿನಲ್ಲಿರುವ ಮೋದಿಯವರು, ನಾವೇ  ಗೆಲ್ತೀವಿ ಅನ್ನೋ ಕಾರಣಕ್ಕೆ ಯಾವುದರ ಬಗ್ಗೆಯೂ ಅತಿಯಾಗಿ ತಲೆಕೆಡಿಸಿ ಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. 
ಆದರೆ ವಾಸ್ತವ ಬೇರೆಯದೇ ಇದೆ. ಒಂದೊಮ್ಮೆ ಮೋದಿ ನೇತ್ರತ್ವದ ಸರ್ಕಾರ ಚುನಾವಣೆಯಲ್ಲಿ ನೀರಿಕ್ಷಿತ ಪ್ರಮಾಣದ ಯಶಸ್ಸು ಗಳಿಸಿ ಸೀಟು ಪಡೆಯದೇ ಹೋದಲ್ಲಿ ಮೋದಿಯನ್ನು ಪಕ್ಷ ಮೂಲೆಗುಂಪು ಮಾಡೋದರಲ್ಲಿ  ಸಂಶಯವಿಲ್ಲ. ಅಲ್ಲದೇ ಇತ್ತಿಚಿಗೆ ನಿತಿನ್ ಗಡ್ಕರಿಯನ್ನು ಆರ್.ಎಸ್.ಎಸ್. ಕೂಡ ಸಾಕಷ್ಟು ಬೆಂಬಲಿಸುತ್ತಿದ್ದು, ಮೋದಿ ಅಧಿಕಾರಕಳೆದುಕೊಂಡರೂ ಅಚ್ಚರಿ ಇಲ್ಲ. ಆದರೆ ವಿಶ್ವಮಟ್ಟದ ನಾಯಕರಾಗಿ ಬೆಳೆದುನಿಂತಿರುವ ಮೋದಿ. ರಾಮ ಮಂದಿರ ಪ್ರೋತ್ಸಾಹಿಸುವ ಮೂಲಕ ತಮ್ಮನ್ನು ತಾವು ಧಾರ್ಮಿಕ ಮುಖಂಡರಂತೆ ಚಿತ್ರಿಸಿಕೊಳ್ಳಲು ಇಷ್ಟಪಡುತ್ತಿಲ್ಲವೇ ಎಂಬ  ಪ್ರಶ್ನೆ ಕಾಡುತ್ತಿದೆ. ಒಟ್ಟಿನಲ್ಲಿ ದೇಶದ ಎಲ್ಲೆಡೆ ಧಾರ್ಮಿಕ ಮುಖಂಡರುಗಳು ರಾಮಮಂದಿರದ ಜಪ ಮಾಡುತ್ತಿರುವಾಗ ಹಾಗೂ ಬಿಜೆಪಿ ಕೂಡ ಅದನ್ನೇ ಚುನಾವಣೆಯ ಮುಖ್ಯ ಅಜೆಂಡಾ ಮಾಡಿಕೊಳ್ಳಲು ಹವಣಿಸುತ್ತಿರುವಾಗ ಮೋದಿ ನೀಡಿದ ಶಾಕ್ ಎಲ್ಲರನ್ನು ಹುಬ್ಬೆರಿಸುವಂತೆ ಮಾಡಿದೆ. 


ಸಂಬಂಧಿತ ಟ್ಯಾಗ್ಗಳು

# Modi #Court #RAM MANDIR # shock to bjp


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ