ಪ್ರಿಯಾಂಕಾ ನಿಕ್ ಹಾವಳಿ ಎಲ್ಲಿ ತನಕ? 

People tired of watching Priyanka and  Nick

02-01-2019

ಬಾಲಿವುಡ್‍ಗೆ 2018 ಶಾದಿ-ಬಾರಾತ್ ವರ್ಷ ಅಂದ್ರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಜೋಡಿಗಳು ಈ ಬಾರಿ ಸಪ್ತಪದಿ ತುಳಿದು ಹೊಸ ಬದುಕಿಗೆ ಕಾಲಿರಿಸಿದ್ದಾರೆ. ಆದರೆ ಎಲ್ಲ ಜೋಡಿಗಳು ಮದುವೆ ಅದ್ದೂರಿತನ ಹಾಗೂ ವಿಶೇಷತೆಗಳಿಂದ ಸುದ್ದಿಯಾದರೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಾತ್ರ ಸುದ್ದಿಯಾಗುವುದಕ್ಕಾಗಿಯೇ ಎಲ್ಲವನ್ನು ಮಾಡುವಂತಿದೆ. ಹೌದು ಮೀಡಿಯಾಗಳಲ್ಲಿ ಪ್ರಿಯಾಂಕಾ ಮತ್ತು ಆಕೆಯ ಪತಿ ನಿಕ್ ಜೋನಾಸ್ ಸುದ್ದಿಗಳನ್ನು ನೋಡಿ ನೋಡಿ ಜನರು ಬೇಸತ್ತು ಹೋಗಿದ್ದು, ವಾಕರಿಕೆ ಬರುವಂತಾಗಿದೆ ಎಂದು ಟೀಕಿಸುತ್ತಿದ್ದಾರೆ. 

ತಮಗಿಂತ 10 ವರ್ಷ ಕಡಿಮೆ ವಯಸ್ಸಿನ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಇದೇ ಕಾರಣಕ್ಕೆ ಸಾಕಷ್ಟು ಚರ್ಚೆಗೀಡಾಗಿದ್ದರು. ಬಳಿಕ ಮದುವೆ  ವಿಚಾರದಲ್ಲಿ ಪ್ರಿಯಾಂಕಾ ಅತಿ ಹೆಚ್ಚು ಚರ್ಚೆಗೊಳಗಾದರು. ಈ ಹಿಂದೆ ದೀಪಾವಳಿಗೆ ಪಟಾಕಿ ಸಿಡಿಸಲು ನಿರ್ಬಂಧ ಹೇರಿದ್ದನ್ನು ಸಪೋರ್ಟ್ ಮಾಡಿದ್ದ ಪ್ರಿಯಾಂಕಾ ಸ್ವತಃ ತಮ್ಮ ಮದುವೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದರು. 

ಆದರೂ ಮಾಧ್ಯಮಗಳಲ್ಲಿ ಪ್ರಿಯಾಂಕಾ ಸುದ್ದಿ ಮುಗಿಯಲಿಲ್ಲ. ತನಗೆ ವಾಯುಮಾಲಿನ್ಯದಿಂದ ಅಸ್ತಮಾ ಉಂಟಾಗುತ್ತದೆ ಎಂದಿದ್ದ ಪ್ರಿಯಾಂಕಾ ಮತ್ತೊಮ್ಮೆ ತಮ್ಮ ಪತಿಯೊಂದಿಗಿದ್ದ ಪೋಟೋ ರಿಲೀಸ್ ಮಾಡಿ ಸುದ್ದಿಯಾದರು. ಕಾರಣ ಅವರು ರಿಲೀಸ್ ಮಾಡಿದ ಪೋಟೋದಲ್ಲಿ ಅವರ ಪತಿ ನಿಕ್ ಜೋನಾಸ್ ಕೈಯಲ್ಲಿ ಸಿಗಾರ್ ಹಿಡಿದು ನಿಂತಿದ್ದರು. ಹಾಗಾಗಿ ಸಿಗರೇಟ್ ಹೊಗೆಯಿಂದ ಪ್ರಿಯಾಂಕಾಗೆ ಅಸ್ತಮಾ ಬರೋದಿಲ್ಲವೇ ಎಂದು ಜನರು ಪ್ರಶ್ನಿಸಿದರು. ಇಷ್ಟೆಲ್ಲ ಆದ ಮೇಲೂ ಪ್ರಿಯಾಂಕಾ ಹಾವಳಿ ತಪ್ಪಿಲ್ಲ. ಇನ್ನು ಕೂಡ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಪ್ರಿಯಾಂಕಾ ಸುದ್ದಿಯಾಗುತ್ತಲೇ ಇದ್ದಾರೆ. 

ಇದೀಗ ಹೊಸವರ್ಷವನ್ನು ಸ್ವಿಡ್ಜರ್‍ಲ್ಯಾಂಡ್‍ನಲ್ಲಿ ಪತಿಯೊಂದಿಗೆ ಸ್ವಾಗತಿಸಿರುವ ಪ್ರಿಯಾಂಕಾ ಆ ಪೋಟೋವನ್ನು ತಮ್ಮ ಇನ್‍ಸ್ಟಾಂಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋ ಮತ್ತೆ ಎಲ್ಲ ಸುದ್ದಿತಾಣಗಳಲ್ಲಿ ಹೈಲೈಟ್ ಆಗಿದ್ದು, ಪರಸ್ಪರ ಚುಂಬಿಸುತ್ತಿರುವ ಈ ಪೋಟೋ ನೋಡಿ ಜನರೂ ಅಯ್ಯೋ ಯಾವಾಗಪ್ಪ ಇವರ ರೋಮಾನ್ಸ್ ಮುಗಿಯೋದು, ಈ  ಪೋಟೋ ನೋಡಿ-ನೋಡಿ ಸಾಕಾಗಿದೆ ಅಂತ ತಲೆಚಚ್ಚಿಕೊಳ್ತಿದ್ದಾರೆ. 

ಇನ್ನು ಸಾಮಾಜಿಕ ಜಾಲ ತಾಣದ ಜನರಂತೂ ಇವರ  ಸುದ್ದಿ ಪೋಟೋ ನೋಡಿ ದಣಿದುಹೋಗಿದ್ದು, ಇನ್ನು ಬಾಕಿ ಇರೋದು ಇವರ ಬ್ರೇಕ್‍ಅಪ್ ಸುದ್ದಿಯೊಂದೆ ಮತ್ತೆಲ್ಲ ಸುದ್ದಿ ನೋಡಿ ಆಯ್ತು ಅಂತ ವ್ಯಂಗ್ಯವಾಡ್ತಿದ್ದಾರೆ. ಜಗತ್ತಿನಲ್ಲಿ ಯಾರೂ ಪ್ರೀತಿಸಿಯೇ ಇಲ್ಲವೇನೋ ಎಂಬಂತೆ ಆಡುತ್ತಿರೋ ಪಿಗ್ಗಿ-ನಿಕ್‍ನಿಂದ ಜನ ರೋಸಿಹೋಗಿರೋದಂತು ಸತ್ಯ. ಒಟ್ಟಿನಲ್ಲಿ ಸದಾ ತಮ್ಮ ಎಡವಟ್ಟುಗಳಿಂದಲೇ ಪ್ರಸಿದ್ಧಿಗೆ ಬರೋ ಈ ಪ್ರಿಯಾಂಕಾ ನಿಕ್ ಜೋನಾಸ್ ಯಾವಾಗ ಬುದ್ದಿ ಕಲಿತಾರೋ, ಜನರಿಗೆ ಯಾವಾಗ ಇವರ ಸುದ್ದಿಗಳಿಂದ ಬಿಡುಗಡೆ ಸಿಗುತ್ತೋ ದೇವರಿಗೆ ಗೊತ್ತು.


ಸಂಬಂಧಿತ ಟ್ಯಾಗ್ಗಳು

#Priyanka and Nick # New year #People tired #Watching


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ