ಕೊನೆಗೂ ಅಯ್ಯಪ್ಪನ ಸನ್ನಿಧಾನ ತಲುಪಿದ ಮಹಿಳೆಯರು...!

Finally, Womens Reached Ayyappa

02-01-2019

 

ಪೊಲೀಸರ ಬಿಗಿ ಭದ್ರತೆಯಲ್ಲಿ ಇಬ್ಬರು 50 ವರ್ಷದೊಳಗಿನ ಇಬ್ಬರು ಮಹಿಳೆಯರು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೈಯ ದೇವಾಲಯ ಪ್ರವೇಶಿಸುವ ಮೂಲಕ ಕೊನೆಗೂ ಸುಪ್ರೀಂ ಕೋರ್ಟ್‍ನ ಐತಿಹಾಸಿಕ ತೀರ್ಪು ಜಾರಿಗೆ ಬಂದಂತಾಗಿದೆ. ಇಂದು ಬೆಳಗಿನ ಜಾವ 3.45 ರ ವೇಳೆಗೆ ಬಿಂದು ಮತ್ತು ಕನಕದುರ್ಗಾ ಎಂಬ 40 ವಯಸ್ಸಿನ ಮಹಿಳೆಯರು  ಓಡುತ್ತಾ ಹೋಗಿ ದೇವಾಲಯವನ್ನು ಪ್ರವೇಶಿಸಿದ್ದಾರೆ. ಹೀಗೆ ದೇವಾಲಯ ಪ್ರವೇಶಿಸುತ್ತಿರುವ ಮಹಿಳೆಯರಿಗೆ ಪೊಲೀಸರು ಭದ್ರತೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸತ್ಯಾಸತ್ಯತೆಯ ಇನ್ನಷ್ಟೇ ತಿಳಿದುಬರಬೇಕಿದೆ. 

ಮಹಿಳೆಯರಾದ ಕನಕದುರ್ಗಾ ಹಾಗೂ ಬಿಂದು ಈ ಹಿಂದೆ ಡಿಸೆಂಬರ್ 18 ರಂದು  ದೇವಾಲಯ ಪ್ರವೇಶಿಸಲು ಯತ್ನಿಸಿದ್ದರು.  ಆದರೆ ಜನರ ವಿರೋಧದಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ ಈಗ ಪೊಲೀಸರ  ನೆರವಿನೊಂದಿಗೆ ಮಹಿಳೆಯರು ದೇವಾಲಯ ಪ್ರವೇಶಿಸಿದ್ದು, ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿಯುವುದರ ಜೊತೆ 800 ವರ್ಷಗಳ ಇತಿಹಾಸವನ್ನು ಮುರಿದಂತಾಗಿದೆ. 

ಶಬರಿಮಲೈ ದೇವಾಲಯದ ನಿಯಮಗಳ ಪ್ರಕಾರ 10 ರಿಂದ 50 ವರ್ಷದ ಮಹಿಳೆಯರು ದೇವಾಲಯಕ್ಕೆ ಬರುವಂತಿಲ್ಲ. ಆದರೆ ದೇವಾಲಯದ ಈ ನಿಯಮವನ್ನು ಪ್ರಶ್ನಿಸಿ ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುದೀರ್ಘ ಕಾಲ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಐವರು  ನ್ಯಾಯಮೂರ್ತಿಗಳ ಪೀಠ, ಸಪ್ಟೆಂಬರ್ 28 ರಂದು  ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ ಹೊರಡಿಸಿತ್ತು. 

ಈ ಆದೇಶದ ಬಳಿಕ ಸಾವಿರಾರು ಮಹಿಳೆಯರು ದೇವಾಲಯವನ್ನು ಪ್ರವೇಶಿಸುವ ಪ್ರಯತ್ನ ಮಾಡಿದರೂ ಕೂಡ ಶಬರಿಮಲೈ ಭಕ್ತರೂ ಸೇರಿದಂತೆ ಹಲವು ಸಂಘಟನೆಗಳ ವಿರೋಧದಿಂದ ಪ್ರವೇಶ ಸಾಧ್ಯವಾಗಿರಲಿಲ್ಲ. ಕೇವಲ ಭಕ್ತರು ಮಾತ್ರವಲ್ಲದೇ ದೇವಾಲಯದ ಆಡಳಿತಮಂಡಳಿ, ತಂತ್ರಿಗಳು ಸೇರಿದಂತೆ ಎಲ್ಲರೂ ಮಹಿಳೆಯರ ಪ್ರವೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ ಎನ್ನಲಾಗುತ್ತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆಡಳಿತ ಮಂಡಳಿ ಹಾಗೂ ಭಕ್ತರ ಕಣ್ಣುತಪ್ಪಿಸಿ ಪೊಲೀಸರೇ ಮಹಿಳೆಯರನ್ನು ಒಳಕ್ಕೆ ಬಿಟ್ರಾ ಅನ್ನೋ ಅನುಮಾನವೂ ವ್ಯಕ್ತವಾಗುತ್ತಿದೆ. ಈ ಎಲ್ಲ ಅನುಮಾನಗಳಿಗೆ ದೇವಾಲಯದ ಆಡಳಿತ ಮಂಡಳಿ ನೀಡಬಹುದಾದ ಮಾಹಿತಿಯೆ ಉತ್ತರವಾಗಬಹುದಾಗಿದೆ. ಇನ್ನು ಮಹಿಳೆಯರ ಪ್ರವೇಶಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Ayyappa's Temple #Finally #Shabarimale #Womens Reached


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ