ಕನ್ನಡ ಮತ್ತು ಸಂಸ್ಕøತಿ ಅಂಗಳದಲ್ಲಿ ಸಚಿವ ಡಿ.ಕೆ.ಶಿವಕುಮಾರ್

D.K.Shivkumar as Kannada and Culture Minister

01-01-2019

 

ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಎಂದೇ ಕರೆಯಿಸಿಕೊಳ್ಳುವ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಈಗ ಕನ್ನಡ ಮತ್ತು ಸಂಸ್ಕøತಿ ಅಂಗಳದಲ್ಲಿದ್ದಾರೆ. ಇದೇನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಂಗಳದಲ್ಲಿ ಎಂದ್ರಾ? ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಜಲಸಂಪನ್ಮೂಲ ಇಲಾಖೆ ಜೊತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೀಡಲಾಗಿದೆ. ಇದು ಅವರ ರಾಜಕೀಯ ಪಯಣವನ್ನು ಇನ್ನಷ್ಟು ಪ್ರೇರೆಪಿಸಲು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಹಲವು ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಸಚಿವರಾಗಿ ಸಾಕಷ್ಟು ಅನುಭವ ಹೊಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದುವರೆಗೂ ಲಾಭದಾಯಕ ಖಾತೆಗಳನ್ನೆ ನೀಡುತ್ತ ಬರಲಾಗಿತ್ತು. ಇಂಧನ , ಜಲಸಂಪನ್ಮೂಲ ಹೀಗೆ ರಾಜ್ಯದ ಬೊಕ್ಕಸಕ್ಕೆ ಆದಾಯ ತರಬಲ್ಲ ಖಾತೆಗಳನ್ನು ನಿರ್ವಹಣೆ ಮಾಡಿದ್ದ ಡಿ.ಕೆ.ಶಿವಕುಮಾರ್‍ಗೆ ಈ ಭಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೀಡಲಾಗಿದ್ದು, ಈ ಖಾತೆ ಅವರ ಇಮೇಜ್‍ನ್ನೆ ಬದಲಾಯಿಸುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ  ಅಭಿಪ್ರಾಯ.  

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾಗಿರೋದರಿಂದ ಡಿ.ಕೆ.ಶಿವಕುಮಾರ್, ಇನ್ನು ಮುಂದೆ ಸಾಹಿತಿಗಳು, ಚಿಂತಕರು, ಬರಹಗಾರರ ಸಂಪರ್ಕಕ್ಕೆ ಬರಲಿದ್ದು, ಇದರಿಂದ ಭಾಷೆ ಪ್ರೌಡಿಮೆ, ಅನುಭವ ಸಾಹಿತ್ಯದ ಆಳ-ಅಗಲ ಅರ್ಥ ಮಾಡಿಕೊಳ್ಳುವ ಹೆಚ್ಚಿನ ಅವಕಾಶ ಲಭ್ಯವಾಗಲಿದೆ. ಇದು ಅವರ ರಾಜಕೀಯ ಅನುಭವಕ್ಕೆ ಇನ್ನಷ್ಟು ಮೆರಗು ತರುವುದರಲ್ಲಿ ಅನುಮಾನವಿಲ್ಲ. ಸಾಹಿತ್ಯ ಸಮ್ಮೇಳನಗಳು, ಸಾಹಿತಿಗಳ ಸಭೆ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗೋದರಿಂದ ಸಂಸ್ಕøತಿಯ ಪರಿಚಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಕೂಡ ಇದು ಸಹಾಯವಾಗಲಿದೆ.

ಈ ಹಿಂದೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೆಗೌಡರು, ದಿ.ರಾಮಕೃಷ್ಣ ಹೆಗಡೆ, ಸಿದ್ಧರಾಮಯ್ಯ ಎಲ್ಲರಿಗೂ  ಅವರ ಮುಖ್ಯಮಂತ್ರಿಹುದ್ದೆ ನಿರ್ವಹಣೆ ವೇಳೆ ಅವರಿಗಿದ್ದ ಸಾಹಿತ್ಯದ ಅನುಭವ, ಸಾಹಿತಿಗಳ ಒಡನಾಟ ಎಲ್ಲವೂ ನೆರವಾಗಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಮುಂದೊಂದು ದಿನ ಅವರ ಮುಖ್ಯಮಂತ್ರಿ ಕನಸು ನನಸು ಮಾಡಿಕೊಳ್ಳಲು ಈ ಇಲಾಖೆ ಅಗತ್ಯ ತರಬೇತಿ ಶಾಲೆಯಂತೆ ಕೆಲಸ ಮಾಡಲಿದೆ ಅಂತಾರೆ ಅವರ ಹಿತೈಷಿಗಳು. 

ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ ರಫ್ ಆಂಡ್ ಟಫ್ ವ್ಯಕ್ತಿತ್ವಕ್ಕೆ ಹೆಸರಾದವರು. ಆದರೆ ಈ ಸಾಹಿತ್ಯ ಮತ್ತು ಸಂಸ್ಕøತಿ ಇಲಾಖೆಯ  ನಿರ್ವಹಣೆ  ಅವರ ವ್ಯಕ್ತಿತ್ವದಲ್ಲೂ ಒಂದು ಸವಾರ್ಂಗೀಣ ಬದಲಾವಣೆ ತರುವ ನೀರಿಕ್ಷೆ ಇದೆ. ಇನ್ನು ಸಾಹಿತ್ಯ ಜನರನ್ನು ತಲುಪುವ ಅತಿ ಸುಲಭವಾದ ಮಾರ್ಗವಾಗಿರೋದು ಕೂಡ ಡಿಕೆಶಿಯವರಿಗೆ ರಾಜಕೀಯ ಲಾಭವನ್ನು ತಂದುಕೊಡುವದರಲ್ಲಿ ಯಾವುದೆ ಅನುಮಾನವಿಲ್ಲ. ಈ ಎಲ್ಲ ದೃಷ್ಟಿಯಿಂದ ಡಿಕೆಶಿಯವರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದೊರೆತಿರೋದು ಶುಭಸೂಚಕ ಅಂತಿದ್ದಾರೆ ಅವರ ಅಭಿಮಾನಿಗಳು. ಒಟ್ಟಿನಲ್ಲಿ  ಡಿ.ಕೆ.ಶಿಯವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗುವ ಎಲ್ಲ ಲಕ್ಷಣಗಳು ದಟ್ಟವಾಗಿದ್ದು, ಕಲೆ,ಸಾಂಸ್ಕøತಿಕ ಕ್ಷೇತ್ರದಲ್ಲಿ ಸಚಿವರಾಗಿ ಡಿ.ಕೆ.ಶಿವಕುಮಾರ್ ಮಾಡಬಹುದಾದ ಕೆಲಸಗಳ ಬಗ್ಗೆ ಜನರಲ್ಲಿ ಕುತೂಹಲವಿರೋದಂತೂ ಸತ್ಯ


ಸಂಬಂಧಿತ ಟ್ಯಾಗ್ಗಳು

#D.K.Shivkumar # Karnataka # Future Cm #Kannada and Culture


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ