ತೆನೆಹೊತ್ತ ಮಹಿಳೆಯರಿಗೆ ಪೋನ್ ಮಾಡಬೇಡಿ.... ಜೆಡಿಎಸ್ ಆರ್ಡರ್!

Do not Call Jds Women

01-01-2019


ಮಹಿಳೆಯರ ಸುರಕ್ಷತೆಗಾಗಿ  ಪೊಲೀಸರು ಕ್ರಮಕೈಗೊಳ್ಳೋದು, ನಿಯಮ ರೂಪಿಸೋದು ಸಹಜವಾದ ಸಂಗತಿ. ಆದರೆ ಇದೆ ಮೊದಲ  ಬಾರಿಗೆ ರಾಜಕೀಯ ಪಕ್ಷವೊಂದು ತನ್ನ ಕಾರ್ಯಕರ್ತರಿಗೆ ಮಹಿಳೆಯರ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ನಿಯಮ ರೂಪಿಸಿದ್ದು, ಅಚ್ಚರಿ ಮೂಡಿಸಿದೆ. ಹೌದು ರಾಜ್ಯದಲ್ಲಿ ಆಡಳಿತದಲ್ಲಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇನ್ಮುಂದೆ ಸೂರ್ಯ ಮುಳುಗಿದ ಮೇಲೆ ತಮ್ಮದೆ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಪೋನ್ ಮಾಡುವಂತಿಲ್ಲ. ಇಂತಹದೊಂದು ಆದೇಶ ಜೆಡಿಎಸ್ ಅಂಗಳದಲ್ಲಿ ಓಡಾಡುತ್ತಿದೆ. 

ಕೇವಲ ಕಾರ್ಯಕರ್ತರು ಮಾತ್ರವಲ್ಲ ತಮ್ಮ ಪಕ್ಷದ ಇತರ ಮುಖಂಡರು ಕೂಡ ಯಾವುದೆ ಕಾರ್ಯಕರ್ತೆಗೆ. ಮಹಿಳಾ ನಾಯಕಿಯರಿಗೂ ಸಂಜೆ 6 ಗಂಟೆ ನಂತರ ಕರೆ ಮಾಡುವಂತಿಲ್ಲ. ಒಂದೊಮ್ಮೆ ನಿಯಮ ಬಾಹಿರವಾಗಿ ಕಾರ್ಯಕರ್ತೆಯರಿಗೆ ಕಾಲ್ ಮಾಡಿದ್ದು ಗಮನಕ್ಕೆ ಬಂದಲ್ಲಿ ಶಿಸ್ತುಕ್ರಮಕೈಗೊಳ್ಳುವುದಾಗಿ ಪಕ್ಷ ಎಚ್ಚರಿಸಿದೆ.  ಜೆಡಿಎಸ್‍ನ ಈ ಕಟ್ಟುನಿಟ್ಟಾದ ಸೂಚನೆಯ ಫಲಕವನ್ನು  ಜೆಡಿಎಸ್ ಕಚೇರಿಯಲ್ಲೂ ಹಾಕಲಾಗಿದೆ. 

ಕಚೇರಿ ಸಮಯ ಹೊರತಾಗಿ ಇತರ ವೇಳೆಯಲ್ಲಿ ಕರೆ ಮಾಡುವಂತಿಲ್ಲ . ದೂರವಾಣಿ ಸಂಭಾಷಣೆ ಬೇಡವೇ ಬೇಡ ಎಂದು ಪಕ್ಷ ಸೂಚಿಸಿದೆ. ತೆನೆ ಹೊತ್ತ ಮಹಿಳೆಯ ಗುರುತು ಹೊಂದಿರುವ ಜೆಡಿಎಸ್ ಈ ಕ್ರಮ ಹಲವು ಅನುಮಾನ ಮೂಡಿಸಿದೆ. ಮೂಲಗಳು ಸೂಪರ್ ಸುದ್ದಿಗೆ ನೀಡಿದ ಮಾಹಿತಿ ಪ್ರಕಾರ, ಪಕ್ಷದ ಕಾರ್ಯಕರ್ತರು ಹಾಗೂ ಸಹೋದ್ಯೋಗಿಗಳು ಕೆಲಸದ ನೆಪದಲ್ಲಿ ರಾತ್ರಿ ವೇಳೆ ಜೆಡಿಎಸ್ ನಾಯಕಿಯೊಬ್ಬರಿಗೆ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಅವರು ಪಕ್ಷದ ಹಿರಿಯರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ ಎನ್ನಲಾಗುತ್ತಿದೆ. 


ಆದರೆ ಯಾವ ಜೆಡಿಎಸ್ ನಾಯಕಿಗೆ ಕಿರುಕುಳ ನೀಡಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಆದರೂ ಅಧಿಕಾರಕ್ಕೆ ಬಂದು ಜನರಿಗೆ ಸುರಕ್ಷತೆ ಒದಗಿಸುವ ಪ್ರಮಾಣ ಮಾಡುವ ಪಕ್ಷಗಳಲ್ಲೇ, ಮಹಿಳೆಯರು ಸುರಕ್ಷಿತವಾಗಿಲ್ಲ ಅನ್ನೋದು ಈ ಆದೇಶದಿಂದ ಬಹಿರಂಗವಾದಂತಾಗಿದ್ದು, ಜೆಡಿಎಸ್‍ಗೆ ತೀವ್ರ ಮುಜುಗರ ಎದುರಾದಂತಾಗಿದೆ. 


ಸಂಬಂಧಿತ ಟ್ಯಾಗ್ಗಳು

#Jds Order #In Night #No call #Womans


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ