ರಾಜ್ಯದಲ್ಲಿ ಯಾರಿಗೂ ಬೇಡವಾದ ಗೃಹ ಇಲಾಖೆ

 No one wants to be Home Minister

29-12-2018


ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೊರೈಸೋ ಮುನ್ನವೇ ಸಚಿವ ಸಂಪುಟದ ಖಾತೆಯೊಂದು  ಹತ್ತಾರು ಭಾರಿ ಪುಟ್‍ಬಾಲ್‍ನಂತೆ ಅವರಿಂದ ಇವರಿಗೆ , ಇವರಿಂದ ಅವರಿಗೆ ಹಸ್ತಾಂತರವಾಗುತ್ತಲೇ ಇದೆ. ಅದು ಬೇರ್ಯಾವುದು ಅಲ್ಲ ಗೃಹ ಖಾತೆ. ರಾಜ್ಯದ ಕಾನೂನು ಸುವ್ಯವಸ್ಥೆಯಂತಹ ಗುರುತರ ಜವಾಬ್ದಾರಿ ಹೊಂದಿರುವ ಈ ಖಾತೆ ನಿಜಕ್ಕೂ ಅತ್ಯಂತ ಮಹತ್ವದ್ದು. ಆದರೆ ರಾಜಕೀಯದ ಅರ್ಥ ಬದಲಾದಂತೆ  ಖಾತೆಗಳು ಹಣ ಮಾಡುವ ಕಾರ್ಖಾನೆಗಳಂತಾಗಿರೋದರಿಂದ ಕಾಸು ಕೊಡದೆ ತಲೆನೋವು ತರುವ ಗೃಹ ಇಲಾಖೆ ಎಲ್ಲರಿಂದಲೂ  ತಿರಸ್ಕಾರಕ್ಕೆ ಒಳಗಾಗುತ್ತಿದೆ. 

 

ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಮಗುವಿನಂತೆ ಸಚಿವ ಸ್ಥಾನಕ್ಕೆ ಹಟ ಹಿಡಿದು ಕೂತಿದ್ದ ಎಂ.ಬಿ.ಪಾಟೀಲ್‍ರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿತು. ಸಚಿವ ಸ್ಥಾನ ಕೊಟ್ಟವರಿಗೆ ಒಂದು ಖಾತೆ ಕೊಡಬೇಕಲ್ಲ ಎಂಬ ಕಾಟಾಚಾರಕ್ಕೆ ಈಗಾಗಲೆ ಉಪಮುಖ್ಯಮಂತ್ರಿಯಾಗಿದ್ದ ಡಾ.ಪರಮೇಶ್ವರ್ ಬಳಿ ಇದ್ದ ಗೃಹ ಇಲಾಖೆಯನ್ನು ಕಿತ್ತು ಪಾಟೀಲ್ ಮಡಿಲಿಗೆ ಹಾಕಲಾಯ್ತು. ಆದರೆ ಗೃಹ ಇಲಾಖೆಯನ್ನು ಕಣ್ಣೆತ್ತಿ ನೋಡಲು ಕೂಡ ಸಿದ್ಧವಿಲ್ಲದ ಎಂ.ಬಿ.ಪಾಟೀಲ್ ತಾವು ಈ ಹಿಂದೆ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

 

ಮೂಲಗಳ  ಮಾಹಿತಿ ಪ್ರಕಾರ ಗೃಹ ಇಲಾಖೆಯ ಸಂಪೂರ್ಣ ಹಿಡಿತ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕೈಯಲ್ಲಿದೆ. ಅಲ್ಲದೆ ಗೃಹ ಇಲಾಖೆಯಲ್ಲಿ ಹಣ ಗಳಿಸಲು ಸಾಧ್ಯವಿಲ್ಲ. ಅಧಿಕಾರಿಗಳ ವರ್ಗಾವಣೆಯನ್ನು ಕೂಡ ಸಿಎಂ ಕುಮಾರಸ್ವಾಮಿ ಹಾಗೂ ಅವರ ಸಹೋದರ ಸಚಿವ ರೇವಣ್ಣನವರೇ ಮಾಡುತ್ತಿರೋದರಿಂದ ಗೃಹ ಸಚಿವರಿಗೆ ಕೇವಲ ಸಬ್ ಇನ್ಸಪೆಕ್ಟರ್ ಲೆವೆಲ್ ಅಧಿಕಾರಿಗಳ ವರ್ಗಾವಣೆ ಮಾತ್ರ ಉಳಿಯುತ್ತಿದೆ ಎನ್ನಲಾಗಿದೆ. ಇನ್ನು ರಾಜ್ಯದಲ್ಲಿ ಏನಾದ್ರೂ ಅಹಿತಕರ ಘಟನೆಗಳು ನಡೆದರೂ ಗೃಹ ಇಲಾಖೆಯೆ ಉತ್ತರದಾಯಿತ್ವ ಹೊರಬೇಕಾಗೋದರಿಂದ ಸಚಿವರುಗಳು ಕಡಿಮೆ ತಲೆನೋವು ಕೊಡುವ ಹಾಗೂ ಜಾಸ್ತಿ ಹಣ ಗಳಿಸುವ ಇಲಾಖೆಗಳತ್ತಲೆ ಮನಸ್ಸು ಮಾಡುತ್ತಿದ್ದಾರೆ. 


ಹೀಗಾಗಿ ಗೃಹ ಇಲಾಖೆ ಯಾರಿಗೂ ಬೇಡದ ಕೂಸಿನಂತಾಗಿದೆ. ಅಲ್ಲದೆ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಬಳಿ ಇದ್ದಾಗ ದಲಿತ ಮುಖಂಡರುಗಳು ಇಲಾಖೆಯ ಬಗ್ಗೆಯಾಗಲಿ ಅಥವಾ ಪೊಲೀಸ್ ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯುವುದು ಕಡಿಮೆ. ಬೇರೆ ಯಾವುದೆ ಸಚಿವರು ಗೃಹ ಇಲಾಖೆ ವಹಿಸಿಕೊಂಡಾಗ ಈ ರೀತಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಯಾರೂ ಕೂಡ ಗೃಹ ಇಲಾಖೆಯನ್ನು ಸ್ವೀಕರಿಸಲು ಸಿದ್ಧವಿಲ್ಲ. ಈಗಲೂ ಕೂಡ ಗೃಹ ಇಲಾಖೆಯನ್ನು ಕೃಷ್ಣ ಬೈರೈಗೌಡರ್ ತಲೆಗೆ ಒರೆಸಿ, ಆದಾಯದ ಮೂಲದಂತಿರುವ ಗ್ರಾಮೀಣಾಭಿವೃದ್ಧಿಯನ್ನು ಕಿತ್ತುಕೊಳ್ಳಲು ಸಿದ್ಧತೆ ನಡೆದಿದೆ. ನಿಜಕ್ಕೂ ಸಮರ್ಥ ಆಡಳಿತಗಾರರ ಕೈಯಲ್ಲಿರಬೇಕಾದ ಗೃಹ ಇಲಾಕೆ ಹೀಗೆ ಕಾಲ್ಚೆಂಡಿನಂತೆ ಸಚಿವರುಗಳ ಅಂಗಳದಿಂದ ಅಂಗಳಕ್ಕೆ ಎಸೆಯಲ್ಪಡುತ್ತಿರುವುದು ಮಾತ್ರ ದುರಂತವೇ ಸರಿ. 


ಸಂಬಂಧಿತ ಟ್ಯಾಗ್ಗಳು

#Karnataka # No one wants # Kumarswamy Cabinet #Home Ministry


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಸುಪರ್ ನ್ಯೂಸ್
  • ಯಲ್ಲಪ್ಪ ಮಬನೂರ
  • ಈ ಸಂಜೆ ರಿಪೋರ್ಟ್ ರ
ಸುಪರ್ ನ್ಯೂಸ್
  • ಯಲ್ಲಪ್ಪ ಮಬನೂರ
  • ಈ ಸಂಜೆ ರಿಪೋರ್ಟ್ ರ