ಆನ್ಲೈನ್ ಡಿಸ್ಕೌಂಟ್‍ಗೆ ಬಿತ್ತು ಬ್ರೇಕ್....

 Break up for an online discount

29-12-2018


ನೀವು ಅಮೆಜಾನ್ ಮತ್ತು ವಾಲ್ಮಾರ್ಟ್ ಕಂಪನಿಗಳ ಮೂಲಕ ಬೇಕು ಬೇಕಾದದ್ದನ್ನೆಲ್ಲ ಆನ್ಲೈನ್‍ನಲ್ಲಿ ಕಡಿಮೆ ದರಕ್ಕೆ ಖರೀದಿಮಾಡಿ ಮಜಾ ಹೊಡೆಯೋಣ ಅಂದ್ಕೊಂಡಿದ್ರಾ? ಹಾಗಿದ್ರೆ ಪಾಪ, ಬೇಜಾರು ಮಾಡ್ಕೊಬೇಡಿ. ಇದ್ಯಾಕೋನೀವು ಅಂದ್ಕೊಳ್ಳೋ ತರ ಆಗ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಹೊಸ ರೂಲ್ಸ್‍ಗಳು ಆನ್ಲೈನ್ ಮೂಲಕ ಭಾರಿ ಡಿಸ್ಕೌಂಟ್ ಕೊಡೋದಿಕ್ಕೆ ತಡೆಯೊಡ್ಡುವ ಸಾಧ್ಯತೆಗಳು ಕಂಡುಬರುತ್ತಿವೆ.
 
ಬೃಹತ್ ವಿದೇಶಿ ಕಂಪನಿಗಳಾದ ಅಮೆಜಾನ್ ಮತ್ತು ವಾಲ್ಮಾರ್ಟ್‍ಗಳು, ಆನ್ಲೈನ್ ವ್ಯೆವಹಾರದಲ್ಲಿ ತಮಗಿರುವ ಕೌಶಲ್ಯಗಳನ್ನು ಬಳಸಿಕೊಂಡು, ನೂರಾರು ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಿ ಭಾರತದ ಜನರನ್ನು ತಮ್ಮತ್ತ ಆಕರ್ಷಿಸುವತ್ತ ಮುಂದಾಗಿದ್ದರು.  ಆದರೆ, ಕೇಂದ್ರ ಸರ್ಕಾರ  ಮುಂದಿನ ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಆನ್ಲೈನ್ ವಹಿವಾಟಿಗೆ ಹಲವು ನಿಬರ್ಂಧಗಳನ್ನು ಹೇರಲು ನಿರ್ಧರಿಸಿದೆ. 
 ವಿದೇಶಿ ಮೂಲದ ಆನ್ಲೈನ್ ಮಾರಾಟ ಕಂಪನಿಗಳು ಸ್ಮಾರ್ಟ್ ಫೋನ್‍ಗಳ ರೀತಿಯ ಉತ್ಪನ್ನಗಳನ್ನು ಕೇವಲ ತಾವೊಬ್ಬರು ಮಾತ್ರವೇ ಮಾರಾಟ ಮಾಡಬಹುದಾದ ಹಕ್ಕು ಪಡೆಯುವುದನ್ನು ಹೊಸ ನಿಯಮಗಳು ನಿಬರ್ಂಧಿಸುತ್ತವೆ. 
ಇದರಿಂದಾಗಿ, ಭಾರತದಂತ ದೊಡ್ಡಮಾರುಕಟ್ಟೆಯಲ್ಲಿ, ಮೊಬೈಲ್ ಪೋನ್ ಇತ್ಯಾದಿಗಳ ತಯಾರಕ ಕಂ¥ನಿಗಳಿಂದ ತಾವೊಬ್ಬರೇ ಮಾರಾಟಹಕ್ಕು ಪಡೆದು ಬಾರಿ ಲಾಭಗಳಿಸುವ ಆಸೆಯಲ್ಲಿದ್ದ ಅಮೆಜಾನ್ ಮತ್ತು ವಾಲ್ಮಾರ್ಟ್ ನಂಥ ಅಮೆರಿಕ ಮೂಲದ ಕಂಪನಿಗಳಿಗೆ ಬಾರಿ ನಿರಾಸೆಯಾಗಬಹುದು. 
ಈ ಕಂಪನಿಗಳು ದೊಡ್ಡ ಪ್ರಮಾಣದ ಡಿಸ್ಕೌಂಟ್ ಗೂ ತಮ್ಮ ಕಂಪನಿಗಷ್ಟೇ ಸೀಮಿತವಾದ (exclusive )ಆಫರ್‍ಗಳನ್ನು ನೀಡುವ ಮೂಲಕ ಭಾರತದ ಆನ್‍ಲೈನ್ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಿ ನಡೆಸುತ್ತಿದ್ದವು. ಆದರೆ, ಸರ್ಕಾರದ ಹೊಸನಿಯಮಗಳು ಇದಕ್ಕೆ ಕಡಿವಾಣ ಹಾಕುತ್ತವೆ.

ಈಕಾಮರ್ಸ ವಹಿವಾಟಿಗೆ ಸಂಬಂಧಿಸಿದ ಕೇಂದ್ರಸರ್ಕಾರದ ಈ ಹೊಸ ನಿಯಮಗಳು, ವಿದೇಶಿ ಮತ್ತು ಸ್ವದೇಶಿ ಆನ್ಲೈನ್ ಕಂಪನಿಗಳು ಹಾಗೂ ಉತ್ಪನ್ನಗಳನ್ನು ತಮ್ಮ ಅಂಗಡಿಯಲ್ಲಿಟ್ಟು ಮಾರುವವರಿಗೂ ಸಮಾನ ಅವಕಾಶ ಕಲ್ಪಿಸುತ್ತವೆ. ಆದರೆ,ಇನ್ನುಮುಂದೆ ಗ್ರಾಹಕರಿಗೆ ಭಾರಿ ದೊಡ್ಡಮಟ್ಟದ ರಿಯಾಯಿತಿಗಳು ಸಿಗುವ ಸಾಧ್ಯತೆಗಳು ಮಾತ್ರ ಕಡಿಮೆಯಾಗಿವೆ.


ಸಂಬಂಧಿತ ಟ್ಯಾಗ್ಗಳು

#Amazon # Online discount #Wallmart #Break up


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ