ಅಮೇರಿಕಾ ಮೆಚ್ಚಿದ ಮಿಶೆಲ್ ಒಬಾಮ

Michelle Obama  America

28-12-2018

 

17 ವರ್ಷಗಳ ಕಾಲ ಅಮೇರಿಕದ ಮೆಚ್ಚುಗೆಯ ಮಹಿಳೆ ಪಟ್ಟ ಉಳಿಸಿಕೊಂಡಿದ್ದ ಹಿಲರಿ ಕ್ಲಿಂಟನ್ ಈ ಭಾರಿ ಆ ಪದವಿಯನ್ನು ಬಿಟ್ಟುಕೊಡುವಂತಾಗಿದೆ. ಗುರುವಾರ ಪ್ರಕಟವಾದ ಅಮೇರಿಕಾದ ಪ್ರತಿಷ್ಠಿತ ಗ್ಯಾಲಪ್ ಸಮೀಕ್ಷೆಯ ಪ್ರಕಾರ ಮಿಶೆಲ್ ಒಬಾಮ ರಾಷ್ಟ್ರದ ಅತ್ಯಂತ ಪ್ರೀತಿಪಾತ್ರಳಾದ ಮಹಿಳೆ ಎಂದು ಗುರುತಿಸಿಲ್ಪಟ್ಟಿದ್ದಾರೆ.  
ಇದರೊಂದಿಗೆ ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಸತತ 11 ವರ್ಷಗಳಿಂದ ಅತ್ಯಂತ ಜನಮೆಚ್ಚಿದ ವ್ಯಕ್ತಿ ಎಂಬ ಪಟ್ಟವನ್ನು ಉಳಿಸಿಕೊಂಡು ಬಂದಿದ್ದಾರೆ. 

1946 ರಿಂದ ವಾರ್ಷಿಕವಾಗಿ ಈ ಸಮೀಕ್ಷೆ ನಡೆಸುತ್ತಿರುವ ಗ್ಯಾಲಪ್ ಪ್ರಕಾರ  ಪ್ರಸಕ್ತ ಅಮೇರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ನಾಲ್ಕನೆ ಭಾರಿ ಸಮೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಸ್ತುತ ತಮ್ಮ ಬಿಕಮಿಂಗ್ ಎಂಬ ಪುಸ್ತಕದ ಪ್ರಚಾರಕ್ಕಾಗಿ ಪ್ರವಾಸದಲ್ಲಿರುವ ಮಿಶೆಲ್ ಒಬಾಮಾರಿಗೆ  ಸಮೀಕ್ಷೆಯ  ಶೇಕಡಾ 15 ಮತಗಳು ದೊರೆತಿದ್ದು, ಜನರು ಮಿಶೆಲ್ ಅತ್ಯಂತ ಮೆಚ್ಚಿದ ಮಹಿಳೆ ಎಂದು ಒಪ್ಪಿಕೊಂಡಿದ್ದಾರೆ. 2016 ರ ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಯು.ಎಸ್.ಸೆನೆಟರ್ ಮತ್ತು ರಾಜ್ಯ ಕಾಯದರ್ಶಿ ಹಿಲರಿ ಕ್ಲಿಂಟನ್  ಒಟ್ಟು  22 ಬಾರಿ ಮತ್ತು ವಿಶೇಷವಾಗಿ ಕಳೆದ 17 ವರ್ಷಗಳಿಂದ ಸತತವಾಗಿ ಈ ಪಟ್ಟಿಯಲ್ಲಿ ಮೊದಲನೆ ಸ್ಥಾನ ಪಡೆದಿದ್ದರು. ಇನ್ನು  ಮತ ಚಲಾಯಿಸಿದವರ ಪೈಕಿ 19 ಶೇಕಡಾ ಜನರು ಬರಾಕ್ ಒಬಾಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.  

ಶೇಕಡಾ 13 ರಷ್ಟು ಮತಗಳನ್ನು ಪಡೆದಿರುವ ಟ್ರಂಪ್ ಎರಡನೇ ಸ್ಥಾನದಲ್ಲಿದ್ದರೇ, ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಹಾಗೂ ಪೋಪ್ ಪ್ರಾನ್ಸಿಸ್ ನಂತರದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್ 3 ರಿಂದ 12 ರವರೆಗೆ ಈ ಸಮೀಕ್ಷೆಯನ್ನು ಕೈಗೊಂಡಿದ್ದಾಗಿ  ಗ್ಯಾಲಪ್ ಹೇಳಿಕೊಂಡಿದೆ. 


ಸಂಬಂಧಿತ ಟ್ಯಾಗ್ಗಳು

#Michelle Obama #America # Admired woman # Gallup poll


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ