ಲಂಡನ್ ನಲ್ಲಿ ಮತ್ತೆ ಉಗ್ರರ ದಾಳಿ - 6 ಜನ ಬಲಿ

Kannada News

04-06-2017

ಕೆಲ ದಿನಗಳ ಹಿಂದೆಯಷ್ಟೇ ಉಗ್ರರ ದಾಳಿಗೆ ಒಳಗಾಗಿದ್ದ ಲಂಡನ್ ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಲಂಡನ್ ನ ಹೃದಯ ಭಾಗವಾಗಿರುವ ಸೆಂಟ್ರಲ್ ಲಂಡನ್ ನಲ್ಲಿ ವ್ಯಾನ್ ನಲ್ಲಿ ಅಡಗಿದ್ದ ಯಮದೂತರು ಆರು ಜನರನ್ನು ಬಲಿಪಡೆದಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಶನಿವಾರ ಸಂಜೆ ವೇಳೆಗೆ ಲಂಡನ್ ಬ್ರಿಡ್ಜ್‍ನಲ್ಲಿ ನಡೆದ ಈ ದುರ್ಘಟನೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ವ್ಯಾನ್ ಪಾದಚಾರಿಗಳ ಮೇಲೆ ಹರಿದು 6 ಜನರನ್ನು ಬಲಿಪಡೆದಿದೆ. ಅಲ್ಲದೇ ವ್ಯಾನ್ ನಲ್ಲಿ ಕುಳಿತಿದ್ದ ವ್ಯಕ್ತಿ ಚಾಕುವಿನಿಂದ ಇರಿಯಲು ಯತ್ನಿಸಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಲಂಡನ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಉಗ್ರರನ್ನು ಪೊಲೀಸರು ಶೂಟೌಟ್ ಮಾಡಿದ್ದಾರೆ. ಇನ್ನೂ 6 ಮಂದಿ ಶಂಕಿತರನ್ನೂ ಹೊಡೆದುರುಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಉಗ್ರರನ್ನು ಪೊಲೀಸರು ಶೂಟೌಟ್ ಮಾಡಿದ್ದಾರೆ. ಇನ್ನೂ 6 ಮಂದಿ ಶಂಕಿತರನ್ನೂ ಹೊಡೆದುರುಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.  ಇನ್ನು ಐಸಿಸ್ ಉಗ್ರ ಸಂಘಟನೆ ಘಟನೆಗೆ ತಾನೇ ಹೊಣೆ ಎಂದು ಘೋಷಿಸಿಕೊಂಡಿದೆ.

ಲಂಡನ್ ನಲ್ಲಿ ಪದೇ ಪದೇ ಉಗ್ರರು ದಾಳಿ ಮಾಡುತ್ತಿದ್ದು, ಕಳೆದ ಎರಡು ವಾರಗಳ ಹಿಂದೆಯಷ್ಟೇ ಇಲ್ಲಿನ ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ಸ್ಫೋಟಿಸಿದ್ದ ಉಗ್ರರು 22 ಮಂದಿಯನ್ನು ಬಲಿಪಡೆದಿದ್ದರು.


ಸಂಬಂಧಿತ ಟ್ಯಾಗ್ಗಳು

ಲಂಡನ್ ಲಂಡನ್ ಲಂಡನ್ ಲಂಡನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ