ನಾಯಿಗಳಿಗೂ ಒಂದು ಕಾಲ...!

Every dog has its day

28-12-2018


ತುಂಬಾ ಹಿಂದಿನಿಂದಲೂ ದಕ್ಷಿಣ ಕೊರಿಯಾದ ಜನರು ನಾಯಿಮಾಂಸವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಶ್ವಾನಮಾಂಸಭಕ್ಷಣೆ ಅಲ್ಲಿಯ ಒಂದು ಸಂಪ್ರದಾಯವೂ ಆಗಿತ್ತು. ದಕ್ಷಿಣಕೊರಿಯಾ ದವರ ಇಂಥಒಂದು ರೂಢಿಯ ಬಗ್ಗೆ, ಕಳೆದ ಹಲವು ದಶಕಗಳಿಂದ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವು.
ಅಂತಾರಾಷ್ಟ್ರೀಯ ಪ್ರಾಣಿದಯಾಸಂಘಗಳು,ಇತ್ತೀಚಿನ ವರ್ಷಗಳಲ್ಲಿ ದಕ್ಷಿಣಕೊರಿಯಾದ ಪಾರ್ಮ್‍ಹೌಸ್‍ಗಳಿಂದ ಸಾವಿರಾರು ನಾಯಿಗಳನ್ನು ರಕ್ಷಿಸಿ, ಅಮೆರಿಕ, ಇಂಗ್ಲೆಂಡ್, ಕೆನಡ ಮತ್ತಿತರ ದೇಶಗಳಲ್ಲಿ ನೆಲೆಕಲ್ಪಿಸುತ್ತಿದ್ದರು. ನಾಯಿಗಳ ರಕ್ಷಣೆಗಾಗಿ, Human sosciety International ಎಂಬ ಸಂಸ್ಥೆ 2015ರಿಂದ ದೊಡ್ಡ ಅಭಿಯಾನವನ್ನೇ ಆರಂಭಿಸಿತ್ತು. ಇವೆಲ್ಲದರ ಪರಿಣಾಮವೇನೋ ಎಂಬಂತೆ, ಕಳೆದ ಕೆಲವು ವರ್ಷಗಳಿಂದ ನಾಯಿಮಾಂಸ ತಿನ್ನುವ ಕೊರಿಯನ್ನರ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತಿದೆ. ಅದೇ ರೀತಿ, ನಾಯಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವ ಮನೆಗಳ ಸಂಖ್ಯೆಯೂ ದೊಡ್ಡಮಟ್ಟದಲ್ಲಿ  ಹೆಚ್ಚಾಗಿದೆ.
ಹೀಗಾಗಿ, ರಾಜಧಾನಿ ಸೋಲ್ (Seoಟ)ನಲ್ಲಿ ನಾಯಿಮಾಂಸದ ಭಕ್ಷ್ಯಗಳನ್ನು ತಯಾರಿಸುವ ಹೋಟೆಲ ಮತ್ತು ಉಪಹಾರ ಗೃಹಗಳ ಸಂಖ್ಯೆ 2004 ರಿಂದ 2014ರ ನಡುವೆಶೇ.40 ರಷ್ಟು ಕಡಿಮೆಯಾಗಿದೆ. ಇದರ ಜೊತೆಗೆ, ಅಲ್ಲಿನ ಸರ್ಕಾರವೂ ನಾಯಿಗಳನ್ನು, ಮಾಂಸಕ್ಕಾಗಿ ಬಳಸಬಹುದಾದ ಪ್ರಾಣಿಗಳ ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಮುಂದಾಗಿದೆ. ಇದರಿಂದಾಗಿ, ಉಳಿಕೆ ಆಹಾರವನ್ನು ಎಸೆದು ನಾಯಿಗಳನ್ನು ಸಾಕಿ, ನಂತರ ಅವುಗಳನ್ನು ಮಾಂಸಕ್ಕಾಗಿ ಬಳಸುವ ಫಾರ್ಮ್‍ಗಳೂ ಮುಚ್ಚಿಹೋಗಲಿವೆ. ಈ ಕ್ರಮ ಜಾರಿಗೆ ಬಂದ ನಂತರ, ದಕ್ಷಿಣಕೊರಿಯಾದಲ್ಲಿನ ನಾಯಿಮಾಂಸ ಉದ್ಯಮ ಸಂಪೂರ್ಣವಾಗಿ ನೆಲಕಚ್ಚುವ ಸಾಧ್ಯತೆ ಇದೆ. 
ಇತ್ತೀಚೆಗೆ, ಸೋಲ ನಗರದ ಹೊರವಲಯದ ಉಪನಗರ ಸೆನೋಗ್ನಾಮ್(Seoಟಿgಟಿಚಿm)ನಲ್ಲಿದ್ದ  ನಾಯಿ  ಕಸಾಯಿಖಾನೆಯನ್ನು  ಮುಚ್ಚಿಸಲಾಗಿದೆ. ಪ್ರತಿವರ್ಷಇಲ್ಲಿ, ನೂರಾರು ನಾಯಿಗಳನ್ನು ಎಲೆಕ್ಟ್ರಿಕಲ್ ಶಾಕ್ ನೀಡಿಕೊಂದು, ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು. ಇಷ್ಟೆಲ್ಲ ಅರಿವು ಮೂಡಿದ ಬಳಿಕ, ಶೇ.70 ರಷ್ಟು ಕೊರಿಯನ್ನರು ನಾವು ಇನ್ನು ಮುಂದೆ ನಾಯಿಮಾಂಸವನ್ನು ತಿನ್ನುವುದಿಲ್ಲ ಎಂದು ನಿರ್ಧರಿಸಿದ್ದಾರಂತೆ.
ನಾಯಿಗಳಿಗೆ ಸಂಬಂಧಿಸಿದಂತೆ  ದಕ್ಷಿಣಕೊರಿಯನ್ನರಿಗೆ ಇದ್ದ ಗ್ರಹಿಕೆ ಬದಲಾಗಲು ಹಲವಾರು ಕಾರಣಗಳಿವೆಯಂತೆ. ಆ ದೇಶದಲ್ಲಿ ಒಂಟಿಯಾಗಿ ಬದುಕುತ್ತಿರುವವರ ಸಂಖ್ಯೆಹೆಚ್ಚಾಗುತ್ತಿದ್ದು ಅಂಥವರೆಲ್ಲರೂ ನಾಯಿಗಳನ್ನು ಜೊತೆಗಿಟ್ಟುಕೊಂಡು ತಮ್ಮ ಏಕತಾನತೆ ನೀಗಿಸಿಕೊಳ್ಳುತ್ತಿದ್ದಾರಂತೆ.  ಮನುಷ್ಯರ ಜೊತೆಗಿನ ಒಡನಾಟದಿಂದ ಉಂಟಾಗುವ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದಕ್ಕೂ ನಾಯಿಗಳೊಂದಿಗಿನ ಸಹವಾಸನೆರವಾಗುತ್ತಿದೆಯೆಂದು ಅಲ್ಲಿನ ವಿಶ್ವವಿದ್ಯಾಲಯವೊಂದರ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸುಹನ್ಕು ಹೇಳುತ್ತಾರೆ.
ಮನುಷ್ಯರು, ಇತರೆ ಜನರನ್ನು "ಇವರುಹೀಗೆ" ಎಂದು ನಿರ್ಧರಿಸುತ್ತಾರೆ. ಆದರೆ ನಾಯಿಗಳು ತಮ್ಮ ಮಾಲೀಕರಿಗೆ "ಬೇಷರತ್ತು ಪ್ರೀತಿ"ಕೊಡುತ್ತವೆ ಎಂಬ ಭಾವನೆಯೇ, ನಾಯಿಗಳನ್ನು ಮುದ್ದಿನಪ್ರಾಣಿಗಳಾಗಿ ಸಾಕುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆಯಂತೆ.  ಹೀಗಾಗಿ, ದಕ್ಷಿಣಕೊರಿಯಾದ  ನಾಲ್ವರು ವಯಸ್ಕರಲ್ಲಿ,   ಒಬ್ಬರಾದರೂ  ನಾಯಿ ಸಾಕುತ್ತಿದ್ದಾರಂತೆ. ಇವನ್ನು ಸಾಕಲು ಪ್ರತಿತಿಂಗಳು ಸರಾಸರಿ 6 ಸಾವಿರ ರೂಪಾಯಿಗಳನ್ನು ಖರ್ಚುಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ಎನ್ನುವ ಮಾತಿನಂತೆ, ದಕ್ಷಿಣಕೊರಿಯಾದಲ್ಲಿ ನಾಯಿಗಳಿಗೂ ಒಂದು ಕಾಲ ಬಂದಿರುವಂತಿದೆ.
 


ಸಂಬಂಧಿತ ಟ್ಯಾಗ್ಗಳು

#South Korea #Dog meat #Dog eating #Becoming less


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ