ವಿಶ್ವದ ಮೋಸ್ಟ್ ಪವರ್ ಫುಲ್ ಪಾಸ್ ಪೋರ್ಟ್ ಯಾವುದು ಗೊತ್ತಾ?

Which is the world

28-12-2018

ಈ ವಿಶ್ವದ ಅತ್ಯಂತ  ಶಕ್ತಿಶಾಲಿ ದೇಶ ಯಾವುದು ಅಂದ್ರೆ, ಅಮೆರಿಕ ಅಂತ ಯಾರಾದ್ರೂ ಹೇಳಿಬಿಡುತ್ತಾರೆ. ಆದ್ರೆ, ಅದೇ ರೀತಿ, ಯಾವ ದೇಶದ ಪಾಸ್‍ಪೋರ್ಟ ಅತ್ಯಂತ ಶಕ್ತಿಶಾಲಿ ಅಂತ ಕೇಳಿದ್ರೆ, ಅದಕ್ಕೂ ಅಮೆರಿಕ ಅಂದ್ರೆ ತಪ್ಪಾಗುತ್ತೆ. ಯಾಕೆ ಅಂದ್ರೆ, ಅಮೆರಿಕ ದೇಶದ ಪಾಸ್‍ಪೋರ್ಟ್‍ಗಿಂತ ಹೆಚ್ಚು ಶಕ್ತಿಶಾಲಿ ಅನ್ನಿಸಿಕೊಂಡಿರೋದು, 
ಜಪಾನ್ ದೇಶದ ಪಾಸ್ಪೋರ್ಟ್.

ಹೌದು, ಜಗತ್ತಿನ ವಿವಿಧ ದೇಶಗಳಿಗೆ ಪ್ರವಾಸ ಹೋಗೋದು, ಅಲ್ಲಿನ ರಮಣೀಯ ತಾಣಗಳನ್ನು ನೋಡುವುದು, ಆಚಾರ-ವಿಚಾರ, ಆಹಾರ ಮತ್ತು ಸಂಸ್ಕøತಿಗಳ ಬಗ್ಗೆ ತಿಳಿಯೋದು ಅತ್ಯಂತ ಸುಂದರವಾದ ಅನುಭವ. ಆದರೆ, ಹೀಗೆ ವೀಸಾದ ಬಗ್ಗೆ ತಲೆಕೆಡಿಸಿಕೊಳ್ಳದೆ ನೇರವಾಗಿ ವಿದೇಶಗಳಿಗೆ ಹೋಗಿ ಇಳಿಯುವ ವಿಶೇಷ ಸೌಲಭ್ಯ,ಬೇರೆ ಎಲ್ಲ ದೇಶಗಳಿಗಿಂತ ಜಪಾನ್ ದೇಶದ ಜನರಿಗಿದೆ. ಜಗತ್ತಿನ 190 ದೇಶಗಳು, ಜಪಾನ್ ದೇಶದ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ ಅಥವಾ ಬಂದಿಳಿದ ನಂತರ ವೀಸಾಪಡೆಯಬಹುದಾದ ವಿಶೇಷ ಸೌಲಭ್ಯ ನೀಡಿವೆ.

ಜಾಗತಿಕ ನಾಗರಿಕತ್ವ ಮತ್ತು ವಾಸ್ತವ್ಯ ಸಲಹೆ ಸಂಸ್ಥೆ ಹೆನ್ಲೆ ಪ್ರಕಟಿಸಿರುವ ಪಾಸ್ಪೋರ್ಟ್ ಇಂಡೆಕ್ಸ್ ವರದಿ ಪ್ರಕಾರ, ಈ ಭೂಗ್ರಹದಲ್ಲಿಜಪಾನ್ ದೇಶದ ಪಾಸ್ ಪೋರ್ಟ್ ಅತ್ಯಂತ ಪ್ರಭಾವ ಶಾಲಿಯಾಗಿದೆ. ಎರಡನೇ ಸ್ಥಾನದಲ್ಲಿರುವ ಸಿಂಗಾಪುರದ ಪಾಸ್ಪೋರ್ಟ್ 189 ದೇಶಗಳ ಬಾಗಿಲನ್ನು ತೆರೆಸುತ್ತದೆ. ನಂತರದ ಸ್ಥಾನದಲ್ಲಿ ಮೂರು ದೇಶಗಳಿವೆ. 188 ದೇಶಗಳಿಗೆ ಎಂಟ್ರಿ ಟಿಕೆಟ್ ಕೊಡುವ ಜರ್ಮನಿ, ಫ್ರಾನ್ಸ್ ಮತ್ತು ದಕ್ಷಿಣಕೊರಿಯಾದ ಪಾಸ್ಪೋರ್ಟ್‍ಗಳು ಮೂರನೇ ಸ್ಥಾನದಲ್ಲಿವೆ. ನಾಲ್ಕನೇ ಸ್ಥಾನದಲಿಲ್ಲಿರುವ ನಾಲ್ಕು ದೇಶಗಳೆಂದರೆ ಡೆನ್ಮಾರ್ಕ್, ಫಿನ್ಲಾಂಡ್, ಸ್ವೀಡನ್ ಮತ್ತು ಸ್ಪೇನ್.

ಎಲ್ಲಿ? ಪ್ರಖ್ಯಾತ ದೇಶಗಳಾದ ಅಮೆರಿಕ, ಇಂಗ್ಲೆಂಡ್ ಇನ್ನೂ ಬರಲಿಲ್ವಲ್ಲಾ ಅಂತೀರಾ? ಇದೋ ನೋಡಿ, ಅಮೆರಿಕ, ಇಂಗ್ಲೆಂಡ್ ದೇಶಗಳು ಐದನೇ ಸ್ಥಾನದಲ್ಲಿವೆ. ಇಲ್ಲ, ರಷ್ಯಾ ದೇಶವನ್ನೂ ಮರೆತಿಲ್ಲ, ಆ ದೇಶದ ಪಾಸ್ಪೋರ್ಟ್, ಈ ಪಟ್ಟಿಯಲ್ಲಿ ಸಾಕಷ್ಟು ಕೆಳಗೆ, 47ನೇ ಸ್ಥಾನದಲ್ಲಿದೆ.ನಮ್ಮ ನೆರೆಯ ದೇಶ, ಏಷ್ಯಾದ ಹೆಡ್ಮಾಸ್ಟನರ್ಂತೆ ಆಡುವ ಚೀನಾ ದೇಶದ ಪಾಸ್ ಪೋರ್ಟ್ 71ನೇ ಸ್ಥಾನದಲ್ಲಿದೆ. ಇಷ್ಟೆಲ್ಲ ಹೇಳಿ, ಭಾರತದ ಸ್ಥಾನ ಎಲ್ಲಿದೆ ಅಂತ ಹೇಳದೇ ಇರಲಿಕ್ಕೆ ಸಾಧ್ಯವೇ ಇಲ್ಲ. 
 ಮೇರಾ ದೇಶ ಮಹಾನ್, ಭಾರತದ ಪಾಸ್ ಪೋರ್ಟ್ ಈ ಪಟ್ಟಿಯಲ್ಲಿ 81ನೇ ಸ್ಥಾನದಲ್ಲಿದೆ.ಯಾಕಿಷ್ಟು ಕಡಿಮೆ ಅಂದ್ರಾ? ಇಲ್ಲ ಸ್ವಾಮಿ, ಕಳೆದ ವರ್ಷ ನಮ್ಮ ದೇಶದ ಸ್ಥಾನ 86ರಲ್ಲಿ ಇತ್ತು, ಈಗ ಇಂಪ್ರೂ ಆಗ್ತಿದೆ. ಇದೀಗ ಭಾರತದ ಪಾಸೋರ್ಟ್ ಇರುವ ಜನ,  ಜಗತ್ತಿನ 60 ದೇಶಗಳಿಗೆ ವೀಸಾ ಇಲ್ಲದೆನೇ ಹೋಗಿ ಇಳಿಯಬಹುದು. 

ಆದ್ರೆ, ಜಪಾನ್ ಪಾಸ್ಪೋರ್ಟ್ ಗೆ ಇರುವಂತೆ 190 ದೇಶಗಳಿಗೆ ಮಾತ್ರ ಯಾಕೆ, ಇಡೀ ಜಗತ್ತಿನ ಎಲ್ಲ ದೇಶಗಳಿಗೂ ಭಾರತೀಯರಿಗೆ ಮುಕ್ತ ಎಂಟ್ರಿ ನೀಡುವಂತಾಗಬೇಕು. ಆ ರೀತಿಯಲ್ಲಿ ಭಾರತ ಪ್ರಭಾವಶಾಲಿ ಆಗಬೇಕು, ಹೌದು ತಾನೆ? ಅಂಥ ದಿನ ಯಾವಾಗ ಬರುತ್ತೋ ಗೊತ್ತಿಲ್ಲ. ಅಂದ ಹಾಗೆ, ಪಾಕಿಸ್ತಾನ ಈ ಪಟ್ಟಿಯ ಕಡೆಯ 3ನೇ 
ಸ್ಥಾನದಲ್ಲಿದ್ದು, ಗಲಭೆಗ್ರಸ್ತವಾಗಿರುವ ಸಿರಿಯ ಮತ್ತು ಸೋಮಾಲಿಯ ದೇಶಗಳು ಪಾಕ್‍ಗಿಂತ ಕೆಳಗಿವೆ. ಆಫ್ಗಾನಿಸ್ತಾನ ಹಾಗೂ ಇರಾಕ್ ದೇಶಗಳು ಈ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿವೆ.

 

 

 

 

 

 

 

 


ಸಂಬಂಧಿತ ಟ್ಯಾಗ್ಗಳು

#Passport # In world # Most powerful #Japan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ