ಹಿಂದೂ ದೇವರುಗಳ ಟೀಕಿಸಲು ಸರ್ಕಾರದಿಂದ ಭದ್ರತೆ..!

 Security Of The Government to Criticize Hindu Gods

28-12-2018

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದೆ ಸಮುದಾಯಕ್ಕೆ ನೋವಾಗುವಂತೆ ಬಳಸಲ್ಪಟ್ಟರೆ ಅದಕ್ಕೆ ನೀವೆ ಹೊಣೆಯಾಗಬೇಕು. ಮತ್ತು ಅಗತ್ಯಬಿದ್ದರೆ ಶಿಕ್ಷೆ ಎದುರಿಸಲು ಸಿದ್ಧವಿರಬೇಕು. ಆದರೆ, ಸಾಹಿತಿ ಭಗವಾನ್ ಪ್ರಕರಣದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ. ಹೌದು ಬಹುತೇಕ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಸಾಹಿತಿ ಭಗವಾನ್ ಅವರ ರಕ್ಷಣೆಗೆ ಹಿಂದೂಗಳೇ ಕಟ್ಟಿದ ತೆರಿಗೆ ಹಣದ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರ ವ್ಯಯಿಸುತ್ತಿದೆ. ಇದಕ್ಕೆ ಈಗ ತೀವ್ರ ವಿರೋದ ವ್ಯಕ್ತವಾಗುತ್ತಿದ್ದು, ಭಗವಾನ್ ಸರ್ಕಾರದ ಕೋವಿಯ ನೆರಳಲ್ಲಿ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂಬ ಆಗ್ರಹ ವ್ಯಕ್ತವಾಗುತ್ತಿದೆ. 

ಸಾಹಿತಿ ಹಾಗೂ ಚಿಂತಕ ಕೆ.ಎಸ್.ಭಗವಾನ್ ಸದಾಕಾಲ ಹಿಂದೂ ಧರ್ಮ,  ಆಚರಣೆ, ನಂಬಿಕೆಗಳು ಹಾಗೂ ಧರ್ಮಗ್ರಂಥಗಳನ್ನು ಟೀಕಿಸಿ ಮಾತನಾಡುತ್ತಲೇ  ಇರುತ್ತಾರೆ. ಇದೆ ಕಾರಣಕ್ಕೆ ಜೀವ ಬೆದರಿಕೆ ಎದುರಿಸುತ್ತಿರುವ ಭಗವಾನ್‍ಗೆ ಸರ್ಕಾರ ಕಳೆದ 3 ವರ್ಷಗಳಿಂದ ಭದ್ರತೆಯನ್ನು ನೀಡಿದೆ. ಜೀವಬೆದರಿಕೆ ಬಂದ ಮೇಲೂ ಕೂಡ ಭಗವಾನ್ ಬದಲಾಗಿಲ್ಲ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಅವರ ಮೇಲೆ ಇದೇ ಕಾರಣಕ್ಕೆ ಪ್ರಕರಣಗಳು ದಾಖಲಾದರೂ ತಮ್ಮ ವರ್ತನೆಯನ್ನು ಭಗವಾನ್ ಬದಲಾಯಿಸಿಕೊಂಡಿಲ್ಲ. ಹೀಗಾಗಿ ಸರ್ಕಾರ ವರ್ಷಕ್ಕೆ 20 ಲಕ್ಷದಂತೆ ಇದುವರೆಗೂ ಅಂದಾಜು ಅಂದಾಜು 60 ಲಕ್ಷ ವ್ಯಯಿಸಿ,  ಒಬ್ಬ ಗನ್‍ಮ್ಯಾನ್ ಸೇರಿ ಐವರು ಭದ್ರತಾ ಸಿಬ್ಬಂದಿಯನ್ನು ಭಗವಾನ್ ಭದ್ರತೆಗೆ ನೇಮಿಸಿದೆ. ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ಭಗವಾನ್‍ಗೆ ಸರ್ಕಾರ ಒದಗಿಸುತ್ತಿರುವ ಈ ಭದ್ರತೆ ಅವರ ಧೈರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದು, ಇದೇ ಕಾರಣಕ್ಕೆ ಅವರು ತಮ್ಮ ಹಳೆಚಾಳಿಯನ್ನು ಮುಂದುವರೆಸುತ್ತಿದ್ದಾರೆ ಎಂದು ಜನರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಿರಿಯ ಸಾಹಿತಿ ಎಮ್.ಎಮ್ ಕಲ್ಬುರ್ಗಿ ಹತ್ಯೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ  ಜೀವ ಬೆದರಿಕೆ ಎದುರಿಸುತ್ತಿರುವ ಕೆಲ ಸಾಹಿತಿಗಳು, ಚಿಂತಕರಿಗೆ ಭದ್ರತೆ ನೀಡಲು ನಿರ್ಧರಿಸಿತ್ತು. ಹೀಗಾಗಿ ಕಳೆದ ಮೂರು ವರ್ಷಗಳಿಂದ ಭಗವಾನ್ 5 ಭದ್ರತಾ ಸಿಬ್ಬಂದಿಯನ್ನು ನೇಮಿಸಿತ್ತು. ಇದನ್ನು ಲಾಭವಾಗಿ ಬಳಸಿಕೊಂಡಂತೆ ವರ್ತಿಸುತ್ತಿರುವ ಭಗವಾನ ಸರ್ಕಾರಿ ಭದ್ರತೆಯಲ್ಲಿ ತಮ್ಮ ನಾಲಿಗೆ ಹರಿಬಿಡುವ ಕೆಲಸವನ್ನು ಮುಂದುವರೆಸಿದ್ದಾರೆ. ಅವರ ಮನೆಗೆ ಹಾಗೂ ಅವರು ಮನೆಯಿಂದ ಹೊರಕ್ಕೆ ತೆರಳಿದಾಗಲೂ ಭದ್ರತೆ ನೀಡಲಾಗುತ್ತಿದೆ. ಅವರ ಮನೆಯ ಆವರಣ, ಮುಖ್ಯದ್ವಾರಕ್ಕೂ ಸಿಸಿಟಿವಿ ಅಳವಡಿಸಲಾಗಿದ್ದು, ಬಂದು ಹೋಗುವವರ ಮೇಲೂ ಕಣ್ಣಿಟ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ. 

ಆದರೆ ಇದನ್ನು ಲಾಭದಂತೆ ಬಳಸಿಕೊಳ್ಳುತ್ತಿರುವ ಭಗವಾನ್ ಮೇಲಿಂದ ಮೇಲೆ ರಾಮಾಯಣ ಸೇರಿದಂತೆ ವಿವಿಧ ಧರ್ಮದ ವಿಚಾರಗಳಲ್ಲಿ ಮನಬಂದಂತೆ ಮಾತನಾಡುವುದನ್ನು ಮುಂದುವರೆಸಿದ್ದಾರೆ. ಹೀಗಾಗಿ ಅವರ ಎಗ್ಗಿಲ್ಲದ ಟೀಕೆಗಳಿಗೆ ಈ ಪೊಲೀಸ್ ಭದ್ರತೆ ಇನ್ನಷ್ಟು ಬಲ ತುಂಬುತ್ತಿದೆಯೇ ಎಂಬ ಆತಂಕ ಹಿಂದೂ ಚಿಂತಕರುಗಳನ್ನು ಕಾಡುತ್ತಿದೆ. ಭಗವಾನ್ ನಿಜಕ್ಕೂ ಕಟು ವಿಮರ್ಶಕರಾಗಿದ್ದರೇ, ತಮ್ಮ ಹೇಳಿಕೆಗಳಿಗೆ ಬದ್ಧರಾಗಿ ಜೈಲಿಗೆ ಹೋಗಲು ಸಿದ್ಧವಾಗಬೇಕು. ಅದರ ಬದಲು ಸರ್ಕಾರದ ಭದ್ರತೆ ಎಂಬ ಗನ್ ಕೆಳಗೆ ಧೈರ್ಯ ಪ್ರದರ್ಶನ ಮಾಡೋದ್ಯಾಕೆ ಅನ್ನೋದು ಜನಸಾಮಾನ್ಯರ ಪ್ರಶ್ನೆ. 
ಇನ್ನು ಜನರು ಕಷ್ಟಪಟ್ಟು ದುಡಿದು ಪಾವತಿಸುವ ತೆರಿಗೆ ಹಣವನ್ನು ಸರ್ಕಾರ ಇಂತಹ ಸಮಾಜದ ಸ್ವಾಸ್ಥ್ಯ ಕದಡುವ ಸಾಹಿತಿಗಳ ಭದ್ರತೆಗೆ ಖರ್ಚು ಮಾಡುತ್ತಿರೋದು ಎಷ್ಟು ಸರಿ ಅನ್ನೋ ಪ್ರಶ್ನೆ ಕೂಡ ಜನರನ್ನು ಕಾಡುತ್ತಿದೆ. ಈ ರೀತಿಯ ದುಂದುವೆಚ್ಚದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ರಾಜ್ಯದಲ್ಲಿ ಅದೆಷ್ಟೋ ಅಧಿಕಾರಿಗಳು ಕೆಲಸ ನಿರ್ವಹಿಸುವ ವೇಳೆ ಸೂಕ್ತ ಭದ್ರತೆಯಿಲ್ಲದೇ ಅಪಾಯಕ್ಕೆ ತುತ್ತಾಗಿಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಭಗವಾನ್‍ರಂತಹ ಜವಾಬ್ದಾರಿ ಇಲ್ಲದ ಸಾಹಿತಿಗಳು ಮಾತ್ರ ತಮ್ಮ ಹುಚ್ಚಾಟಗಳಿಗೆ ಸರ್ಕಾರದ ಭದ್ರತೆಯೆಂಬ ಗರಿ ಮೂಡಿಸಿಕೊಳ್ತಿರೋದು ಮಾತ್ರ ದುರಂತವೇ ಸರಿ. 


ಸಂಬಂಧಿತ ಟ್ಯಾಗ್ಗಳು

# k s bhagwan #Security #Government # to Criticize Hindu Gods


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ