ಹೋದೆಯಾ ಸುನಾಮಿ ಅಂದ್ರೆ....

 Again Tsunami

27-12-2018

ಸುನಾಮಿ ದಾಳಿಯಿಂದ ಕಂಗೆಟ್ಟಿರುವ ಇಂಡೋನೇಷಿಯ ದೇಶಕ್ಕೆ ಮತ್ತೊಮ್ಮೆ ಸುನಾಮಿಭೀತಿ ಎದುರಾಗಿದೆ. ಕಳೆದ ವಾರ ಜಾವಾ ಮತ್ತು ಸುಮಾತ್ರ ಕರಾವಳಿ ತೀರಕ್ಕೆ ಅಪ್ಪಳಿಸಿದ ಸುನಾಮಿಯಲ್ಲಿ   400ಕ್ಕೂ ಹೆಚ್ಚು  ಜನ  ಸಾವಿಗೀಡಾಗಿದ್ದು, ಇನ್ನೂ  ಸುಮಾರು 200 ಜನರು ನಾಪತ್ತೆಯಾಗಿದ್ದಾರೆ. ಸುನಾಮಿಯಿಂದ ಆಗಿರುವ ಹಾನಿಯ ಸಂಪೂರ್ಣ ಚಿತ್ರಣ ಇನ್ನಷ್ಟೇ ಬರಬೇಕಿದ್ದು,  ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡು, 16 ಸಾವಿರ ಜನರು ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಸುನಾಮಿಯಲ್ಲಿ ಜೀವಕಳೆದು ಕೊಂಡವರ ಸಂಖ್ಯೆ ಇನ್ನೂಹೆಚ್ಚಾಗುವ ಸಾಧ್ಯತೆಯಿದೆಯೆಂದು, ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುವ ರೆಡ್ಕ್ರಾ ಸ್ಸಂಸ್ಥೆ ಹೇಳಿದೆ.ಸುನಾಮಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಕುಡಿಯುವನೀರು, ಆಹಾರ ಮತ್ತು ಇತರೆ  ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸುನಾಮಿ ಹಾವಳಿಯಿಂದ ಕನಿಷ್ಟಪಕ್ಷ  900 ಮನೆಗಳು, 73 ಹೋಟೆಲ್ಗಳು ಹಾಗೂ 60 ರೆಸ್ಟೋರೆಂಟ್ಗಳು ಹಾಗೂ 500 ದೋಣಿಗಳು ನಾಶವಾಗಿವೆ.


ಅನಾಕ್ಕ್ರಕಾಟೊವ್ಅಗ್ನಿಪರ್ವತ  ಸ್ಫೋಟಗೊಂಡಿದ್ದರಿಂದ   ಸುಮಾರು 160 ಎಕರೆಭೂಮಿ, ದ್ವೀಪದಿಂದ ಕಳಚಿಕೊಂಡು ಸಮುದ್ರದೊಳಕ್ಕೆ  ಜಾರಿತ್ತು.  ಇದು, ಕಳೆದ  ಹುಣ್ಣಿಮೆಯದಿನ  ಸಂಭವಿಸಿದ ಸುನಾಮಿಗೆ ಪ್ರಮುಖ  ಕಾರಣವಾಗಿತ್ತು. 10 ಅಡಿಗೂ  ಹೆಚ್ಚಿನ ಎತ್ತರದ  ದೈತ್ಯಸುನಾಮಿ   ಅಲೆಗಳು  ತೀರಕ್ಕೆ   ಅಪ್ಪಳಿಸಿದ್ದರಿಂದ   ಭಾರಿ  ಅನಾಹುತ  ಸಂಭವಿಸಿತ್ತು.


ಜಾವ  ಮತ್ತು  ಸುಮಾತ್ರ  ಕರಾವಳಿಯಿಂದ   ಕೇವಲ 30 ಮೈಲಿದೂರದಲ್ಲಿರುವ  ಅನಾಕ್ಕ್ರಕಾಟೊವ್ಅಗ್ನಿಪರ್ವತ  ಮತ್ತೊಮ್ಮೆ  ಸ್ಫೋಟಿಸುವ  ಸಾಧ್ಯತೆ   ಇದ್ದು, ಮತ್ತೆ ಸುನಾಮಿ ಅಪ್ಪಳಿಸಬಹುದು. ಎಲ್ಲಿಯವರೆಗೂ ಅಗ್ನಿಪರ್ವತ ಶಾಂತವಾಗುವುದಿಲ್ಲವೋ ಅಲ್ಲಿಯವರೆಗೂ ಸ್ಥಳೀಯರು ತುಂಬಾ  ಎಚ್ಚರಿಕೆವಹಿಸಬೇಕು ಎಂದು ಪ್ರಾಕೃತಿಕವಿಕೋಪ ಪರಿಹಾರಸಂಸ್ಥೆ ಹೇಳಿದೆ.

ಹೀಗಾಗಿ, ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಇಂಡೋನೇಷಿಯದ ಕರಾವಳಿಯಲ್ಲಿನ ಜನರು, ಜೀವಕೈಯಲ್ಲಿ ಹಿಡಿದುಕೊಂಡವರಂತೆ ಎಚ್ಚರಿಕೆಯಿಂದ ಇರಬೇಕಾಗಿದೆ.ಇದೇವೇಳೆ, ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ವಿಫಲವಾಗಿದ್ದರ ಬಗ್ಗೆಯೂ ಇಂಡೋನೇಷಿಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. .2004ರ ಸುನಾಮಿಯಲ್ಲಿ ಲಕ್ಷಾಂತರ ಜನರು ಸಾವಿಗೀಡಾಗಿದ್ದರೂ  ಕೂಡ, ಇಂಡೋನೇಷಿಯದಲ್ಲಿ ಸಮರ್ಪಕವಾದ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸಿಲ್ಲ ಎಂಬ ಆರೋಪಗಳೂ  ಕೇಳಿಬಂದಿವೆ.
 


ಸಂಬಂಧಿತ ಟ್ಯಾಗ್ಗಳು

#Indonesia #Tsunami #Again #Threat level


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ