ನಿರುದ್ಯೋಗವೇ ಬಿಜೆಪಿಗೆ ವೈರಿ ಆಯ್ತಾ? 

As unemployment become enemy to BJP?

27-12-2018


ಲೋಕಸಭೆಯಲ್ಲಿ ಮತ್ತೊಮ್ಮೆ ಅಧಿಪತ್ಯ ಸಾಧಿಸುವ ಹುಮ್ಮಸ್ಸಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಕನಸಿಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಷ ತಣ್ಣೀರೆರಚಿದೆ. ತಮ್ಮ ಸೋಲಿಗೆ ಕಾಂಗ್ರೆಸ್ ಕಾರಣ ಎಂದುಕೊಂಡಿರುವ ಬಿಜೆಪಿ ಕಾಂಗ್ರೆಸ್‍ನ್ನು ದುರ್ಬಲಗೊಳಿಸಲು ಹಾಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಪಡೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿದೆ. ಆದರೆ ಪಂಚ ರಾಜ್ಯಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿರೋದು ಬಿಜೆಪಿಯ ಸ್ವಯಂಕೃತ ಅಪರಾಧವೆಂಬುದು ಸಾಬೀತಾಗಿದೆ. 

ಪಂಚ ರಾಜ್ಯ ಚುನಾವಣೆ ಬಳಿಕ ರಾಜಸ್ಥಾನ, ಮಧ್ಯಪ್ರದೇಶ್, ಛತ್ತೀಸಗಡ, ಮಿಜೋರಾಂ ಹಾಗೂ ತೆಲಂಗಾಣದಲ್ಲಿ ಅಧ್ಯಯನ ನಡೆಸಿದ  ಪ್ರಜಾತಾಂತ್ರಿಕ ಸುಧಾರಣಾ ಸಂಘಟನೆ (Association For Democratic Reforms)ಅಲ್ಲಿನ ಜನರ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ದಾಖಲಿಸಿದಾಗ ಕಂಡು ಬಂದಿದ್ದು ಏನೆಂದರೆ ಈ ರಾಜ್ಯಗಳಲ್ಲಿ ಮತದಾರರ ಪ್ರಕಾರ ಅಲ್ಲಿನ ಮತದಾರರು ಬಿಜೆಪಿಯನ್ನು  ತಿರಸ್ಕರಿಸಿರೋದಿಕ್ಕೆ ಮೂಲ ಕಾರಣ ನಿರುದ್ಯೋಗ ಸಮಸ್ಯೆ.  ಅಧಿಕಾರಕ್ಕೆ ಬರುವ ವೇಳೆ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು  ಸೃಷ್ಟಿ ಮಾಡುವುದಾಗಿ ಹೇಳಿದ್ದ ಮೋದಿ ಸರ್ಕಾರ ಬಳಿಕ ಕೊಟ್ಟ ಮಾತು ಮರೆತೇ ಬಿಟ್ಟಿತು. ಪಕೋಡಾ ಮಾರುವುದು ಕೂಡ ಉದ್ಯೋಗವಲ್ಲವೇ? ಎಂಬ ಉಢಾಪೆಯ ಮಾತನ್ನು ಅಮಿತ್ ಶಾ ಹೇಳಿದ್ದನ್ನು ಇನ್ನೂ ಯಾರೂ ಮರೆತಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆಯಿಂದ ಬಳಲಿರುವ ಈ ರಾಜ್ಯದ ಜನರು ಈ ಭಾರೀ ಬದಲಾವಣೆ ಬಯಸಿ ಮತ ನೀಡಿದರು ಎನ್ನಲಾಗಿದೆ.  

ಎಡಿಆರ್ ನಡೆಸಿದ ಅಧ್ಯಯನಗಳ ಪ್ರಕಾರ ರಾಜಸ್ಥಾನದಲ್ಲಿ ಶೇಕಡಾ 66, ಮಧ್ಯಪ್ರದೇಶದಲ್ಲಿ 59 ಶೇಕಡಾ, ಛತ್ತಿಸಗಡದಲ್ಲಿ 58 ಶೇಕಡಾ, ಮಿಜೋರಾಂನಲ್ಲಿ  69 ಶೇಕಡಾ ಹಾಗೂ  ತೆಲಂಗಾಣದಲ್ಲಿ 63 ಶೇಕಡಾ ಜನರು ನಿರುದ್ಯೋಗವೆ ಪ್ರಮುಖ ಸಮಸ್ಯೆ ಎಂದು ನೇರವಾಗಿ ಅಭಿಪ್ರಾಯಿಸಿದ್ದಾರೆ. ನಾಲ್ಕೂವರೆ ವರ್ಷಗಳ ಕಾಲ ಉದ್ಯೋಗ ಪಡೆಯಲು ಸರ್ಕಸ್ ನಡೆಸಿದ ಜನರು ಕೊನೆಗೂ ನಿರುದ್ಯೋಗಿಗಳಾಗಿಯೇ ಉಳಿದಿರೋದರಿಂದ ಬಿಜೆಪಿಯನ್ನು ತಿರಸ್ಕರಿಸಿ ಬದಲಾವಣೆಗೆ ಅವಕಾಶ ನೀಡಿದ್ದಾರೆ. ಇನ್ನೂ ಕೂಡ ಬಿಜೆಪಿ ಮಂದಿರ, ಧರ್ಮ, ದೇವರು ಇಂಥ ವಿಚಾರದಲ್ಲೇ ಮಗ್ನವಾಗಿದ್ದು ಇನ್ನು ಕೂಡ ನಿರುದ್ಯೋಗ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡುಬರುತ್ತಿಲ್ಲ. ಆದರೆ ಇದನ್ನು ನೋಡಿದರೆ ಕಾಂಗ್ರೆಸ್ ಜನಪ್ರಿಯತೆ ಕಾರಣದಿಂದ ಗೆದ್ದಿಲ್ಲವೆಂಬುದು ಮಾತ್ರ ಸ್ಪಷ್ಟವಾಗುತ್ತದೆ. 

ಬಿಎಸ್‍ಪಿ ನಾಯಕಿ ಮಾಯಾವತಿ ಹೇಳಿದಂತೆ ಜನ ಎದೆಯ ಮೇಲೆ ಬಂಡೆ ಇರಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಮಾತಿನಲ್ಲಿ ಸತ್ಯವಿದ್ದಂತಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರೀತಿ ಇಲ್ಲದಿದ್ದರೂ ಉದ್ಯೋಗ ಕೊಡದ ಬಿಜೆಪಿಯ ಬಗ್ಗೆ ಖಂಡಿತವಾಗಿಯೂ ಜನರಲ್ಲಿ ಒಲವಿಲ್ಲ ಎಂಬುದು ಈ ಅಧ್ಯಯನದಿಂದ ಗೋಚರಿಸುತ್ತದೆ. 


ಸಂಬಂಧಿತ ಟ್ಯಾಗ್ಗಳು

#Bjp #Unemployment #Five State Election #Become enemy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ