ಯಾಕಾಯ್ತು ಈ ರೀತಿ ದಿಗಂತ-ಐಂದ್ರಿತಾ ಮದುವೆ

Diganth

27-12-2018


ಬಾಲಿವುಡ್,ಸ್ಯಾಂಡಲವುಡ್ ಹೀಗೆ ದೇಶದ ಚಿತ್ರರಂಗದಲ್ಲಿಯೇ 2018 ಮದುವೆಯ ಪರ್ವದ ವರ್ಷ. ದೀಪಿಕಾ ರಣವೀರ್, ಪ್ರಿಯಾಂಕಾ-ನಿಕ್ ಜೋನ್ಸ್, ಚಿರಂಜೀವಿ ಸಜಾ ಮತ್ತು ಮೇಘನಾ ರಾಜ್ ಹೀಗೆ ಫೇಮಸ್ ಅನೇಕ ಸಿನಿ ತಾರೆಯರು ಹಸೆಮಣೆ ತುಳಿದು ಹೊಸ ಬದುಕಿಗೆ ಕಾಲಿಟ್ಟರು. ಈ ಎಲ್ಲ ವೈಭವೋಪೇತ ಮದುವೆಗಳ ನಡುವೆ ಸ್ಯಾಂಡಲವುಡ್‍ನ ದೂಧಪೇಡ್ ದಿಗಂತ ಮದುವೆ ಕೂಡ ನಡೆಯಿತು. ಆದರೆ ಉಳಿದೆಲ್ಲ ಮದುವೆಗಳು ಅದ್ದೂರಿಯಾಗಿ ನಡೆದರೇ , ದಿಗಂತ ಐಂದ್ರಿತಾ ಮಾತ್ರ ನಾವು  ಸರಳ ಮದುವೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸಾರಿ-ಸಾರಿ ಹೇಳಿಕೊಳ್ಳುತ್ತಿದ್ದರು. ಈ ಮದುವೆಯನ್ನು ಟಿವಿಯಲ್ಲಿ ನೋಡಿದವರೂ ಕೂಡ ಇದು ಸರಳ ಮದುವೆಯಲ್ಲ ಅತೀ ಸರಳ ಮದುವೆ ಎಂದು ಮೂಗು ಮುರಿದರು. 

 ಮಾಡೆಲ್ ಆಗಿ ವೃತ್ತಿ ಆರಂಭಿಸಿ ಸ್ಯಾಂಡಲವುಡ್ ಕೆಲವು ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್‍ನ ಕೆಲ ಚಿತ್ರಗಳಲ್ಲಿ ಮುಖ ತೋರಿಸಿದ ದಿಗಂತ್ ಮತ್ತು ಬಹುತೇಕ ನೇಪಥ್ಯಕ್ಕೆ ಸರಿದಿರುವ ಐಂದ್ರಿತಾ ರೇ ಈಗಾಗಲೇ ಸಾಕಷ್ಟು  ವರ್ಷಗಳಿಂದ ಕನ್ನಡ ಸಿನಿಮಾ ರಂಗದ ಅಧಿಕೃತ ಪ್ರೇಮಿಗಳ ಜೋಡಿ ಎನ್ನುವ ರೀತಿಯಲ್ಲಿ ಓಡಾಡಿಕೊಂಡಿದ್ದರು. ಇವರ ಸಂಬಂಧ ಮುರಿದಿತ್ತು ಎಂಬ ಗುಮಾನಿ ಕೆಲವು ವರ್ಷಗಳ ಹಿಂದೆ ಸುಳಿದಾಡಿದ್ದರೂ ಮತ್ತೆ ನಾವಿಬ್ಬರು ಜೋಡಿ ಸರಳ ಮದುವೆ ಮಾಡ್ಕೋತಿವಿ ನೋಡಿ ಎಂದು ಮತ್ತೊಮ್ಮೆ ಜೊತೆಯಾಗಿ ಪ್ರತ್ಯಕ್ಷರಾದರು. 


ಇಬ್ಬರು ಮದುವೆ ದಿನಾಂಕವನ್ನು ಪ್ರಕಟಿಸಿದಾಗ ಕರ್ನಾಟಕದಲ್ಲಿ ಅಂತಹ ಕುತೂಹಲವೇನು ಸೃಷ್ಟಿಯಾಗಿರಲಿಲ್ಲ. ಆದರೂ ಮದುವೆ ಹೇಗಿರುತ್ತದೆ ಎಂದು ಊಹಿಸಿದ್ದವರಿಗೆ ಇವರ ಮದುವೆ ವಿಡಿಯೋವಂತು ನಿರಾಸೆ ಮೂಡಿಸಿದ್ದು ನಿಜ. ಸರಳ ಮದುವೆ ಎಂದರೆ ಅದ್ದೂರಿ ಆಡಂಬರವಿಲ್ಲದ ಮದುವೆ. ಆ ಸರಳ ಮದುವೆಗಳಲ್ಲೂ ಮದುವೆಯ ಸಂಭ್ರಮದಲ್ಲಿ ಅದ್ದೂರಿ ಇಲ್ಲದಿದ್ದರೂ ಮದುವೆ ಆಚರಣೆಯಾದರೂ ಸಾಕಷ್ಟು ಆಡಂಬರದಿಂದ ಕೂಡಿರುತ್ತದೆ. ಆದರೆ ದಿಗಂತ ಮತ್ತು ಐಂದ್ರಿತಾ ಇಬ್ಬರು ಕೆಳ ಮಧ್ಯಮವರ್ಗದ ಜೋಡಿಯಂತೆ ಮದುವೆ ಮಾಡಿಕೊಂಡಿದ್ದು ಎಷ್ಟೇ ಸಮಜಾಯಿಸಿ ನೀಡಿದರು ಜನರಿಗೆ ಅರ್ಥವಾದಂತೆ ಕಂಡುಬರಲಿಲ್ಲ. 

ಆಶ್ಚಯವೆಂದರೇ, ಮದುವೆ ಹೇಗೆ ಇರಲಿ, ಮದುವೆಗೆ ಬಂದಂತಹ ಜನರ ಪೈಕಿ ಆಸಕ್ತಿಯಿಂದ ನೋಡಬಹುದಾದಂತಹ ಒಂದು ಮುಖವೂ ಕಾಣಲಿಲ್ಲ ಎಂದು ಅನೇಕ ತಾರಾಪ್ರಿಯರು ಗೋಗರೆದಿದ್ದು ಉಂಟು. ಮದುವೆಯ ತಾಣವಾಗಿರಲಿ, ಮಂಟಪವಾಗಲಿ, ಆಸನ ವ್ಯವಸ್ಥೆಯಾಗಿರಲಿ, ಊಟವಾಗಲಿ ಅಲಂಕಾರವಾಗಲಿ ಯಾವುದು ಕೂಡ ಒಂದು ಮಧ್ಯಮವರ್ಗದ ರೀತಿಯಲ್ಲೂ ಇರದಿದ್ದಿದ್ದು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇವರ ಆರತಕ್ಷತೆ ಕೂಡ ನೀರಸವಾಗಿದ್ದು, ಅವರ ಹಾಕಿಕೊಂಡಿದ್ದ ಪೋಷಾಕು ಕೂಡ 
ದಿಗಂತ ಬಾತ್ ರೂಂ ಸೂಟ್ ಹಾಗೂ ಐಂದ್ರಿತಾ ನೈಟ್ ಗೌನ್ ಹಾಕಿಕೊಂಡಂತಿತ್ತು. ಮದುವೆಗೆ ಆಗಲಿ ಆರತಕ್ಷತೆಗೆ ಆಗಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಭಾವಿಗಳು ಪ್ರತಿಷ್ಠಿತರು  ಮತ್ತು ತಾರೆಯರು ಬರದಿರುವುದು ಕೂಡ ಅನೇಕರನ್ನು ಚಕಿತಗೊಳಿಸಿತ್ತು. ಈ ಮದುವೆ ಬಗ್ಗೆ ಯಾರೂ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ ಎಂದು ಗೊತ್ತಿದ್ದೇ ಇದು ಸರಳ ಮದುವೆ ಎಂದು ಮೊದಲೆ ಹೇಳಿಬಿಟ್ಟರೇ ಇಲ್ಲ ಅನೇಕ ವರ್ಷಗಳಿಂದ ಸರಿಯಾಗಿ ಸಿನಿಮಾಗಳಿಲ್ಲದೆ ಇದ್ದ ಈ ಜೋಡಿ ಅದ್ದೂರಿ ಮದುವೆ ಮಾಡಿಕೊಳ್ಳಲು ಹಣವಿಲ್ಲದೆ ಸರಳ ಮದುವೆ ಮಾಡ್ಕೋತಿವಿ ಎಂದರೆ. ದಿಗಂತ ಮತ್ತು ಐಂದ್ರಿತಾರನ್ನು ಹತ್ತಿರದಿಂದ ನೋಡಿರುವ  ವ್ಯಕ್ತಿಗಳು ಎರಡನೆ ಕಾರಣವೇ ನಿಜ. ತಾರೆಯರ ಮದುವೆಗೆ ಕನಿಷ್ಠ ಎರಡು ಕೋಟಿಯಾದರೂ ಬೇಕು. ಅಷ್ಟು ಹಣ ಈ ಇಬ್ಬರೂ ಎಲ್ಲಿಂದ ತರುತ್ತಾರೆ ಮತ್ತು ಇಬ್ಬರಿಗೂ ಹೇಳಿಕೊಳ್ಳುವಂತಹ ಅಭಿಮಾನಿಗಳ ದಂಡು ಕೂಡ ಇಲ್ಲ. ಅಲ್ಲಿ-ಇಲ್ಲಿ ಅಜ್ಜೆಸ್ಟ್ ಮಾಡಿ ಹಣ ಜೋಡಿಸಿಕೊಂಡು ಅದ್ದೂರಿ ಮದುವೆ ಮಾಡಿಕೊಂಡರೂ ಯಾರು ಬರದಿದ್ದರೆ ಹೇಗೆ ಎಂಬ ಆತಂಕವೂ ಇದ್ದಿರಬಹುದು ಎನ್ನಲಾಗುತ್ತಿದೆ. ಆದರೂ ಇದೆಲ್ಲಕ್ಕಿಂತ ಹೆಚ್ಚಾಗಿ ಈ ಮದುವೆಯಲ್ಲಿ ಏನಿತ್ತು ಎಂದು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿತ್ತು ಅನ್ನೋದೆ ಕುತೂಹಲದ ಸಂಗತಿ. ಮದುವೆ ಬಗ್ಗೆ ಇದ್ದ ಒಂದಷ್ಟು ಆಸಕ್ತಿಯೂ ಟಿವಿಯಲ್ಲಿ ಅದನ್ನು ನೋಡಿ ಮಾಯವಾಗಿರುವುದು ಮಾತ್ರ ನಿಜ. ಅನೇಕ ಮಂದಿ ದಿಗಂತ -ಐಂದ್ರಿತಾ ಮದುವೆ ನೋಡಿ ವಾವ್ ಎಂದು ಹುಬ್ಬೆರಿಸುವ ಬದಲು ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದು ಮಾತ್ರ  ಈ ತಾರಾ ದಂಪತಿಗೆ ಕೇಳಿಸಲೇ ಇಲ್ಲ. 


ಸಂಬಂಧಿತ ಟ್ಯಾಗ್ಗಳು

#Diganth #Simple Marrige #Aindrita ray #Story


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ