ವ್ಯಾಲಂಟೈನ್ ದಿನದಿಂದ ಅತ್ಯಾಚಾರಗಳು ಹೆಚ್ಚಳ !

Kannada News

03-06-2017

ಜೈಪುರ್:-  ಪಾಶ್ಚಿಮಾತ್ಯ ಸಂಸ್ಕ್ರತಿ ಹಾಗೂ  ವ್ಯಾಲಂಟೈನ್  ದಿನ ಅತ್ಯಾಚಾರಗಳು ಹೆಚ್ಚಲು ಕಾರಣ ಎಂದು ಆರ್.ಎಸ್.ಎಸ್ ನಾಯಕ ಇಂದ್ರೇಶ್ ಕುಮಾರ್  ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿದ್ದ ಆರ್.ಎಸ್.ಎಸ್  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಪ್ರೀತಿಗೆ ಧಾರ್ಮಿಕ ಪವಿತ್ರತೆ ಇದೆ ಆದರೆ ಪಾಶ್ಚಿಮಾತ್ಯ ಸಂಸ್ಕ್ರತಿಗಳು  ಇಂಥಹ ಆಚರಣೆಗಳಿಗೆ ಜನ್ಮ ನೀಡಿವೆ, ಪಾಶ್ಚಿಮಾತ್ಯ ಸಂಸ್ಕ್ರತಿಗಳು ಪ್ರೀತಿಯನ್ನು ವಾಣಿಜ್ಯೀಕರಣಗೊಳಿಸಿವೆ, ಇವುಗಳಿಂದ ಅತ್ಯಾಚಾರ, ಮಹಿಳಯರ ವಿರುದ್ಧ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದೆಲ್ಲೆಡೆ ಇದೇ ಸಮಸ್ಯೆ ಎದುರಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಆರ್.ಎಸ್.ಎಸ್  ಅಸ್ಪೃಶ್ಯತೆ ಮತ್ತು ಜಾತಿ ತತ್ವಕ್ಕೆ  ವಿದುದ್ಧವಾಗಿದೆ ಎಂದರು, ಮತ್ತು ಹಬ್ಬದ ದಿನಗಳಲ್ಲಿ ಚೀನಾದ ವಸ್ತುಗಳ ಬಳಕೆಯನ್ನು ನಿಷೇದಿಸಬೇಕು ಇದರಿಂದ  ಭಾರತದಲ್ಲಿ ಉದ್ಯೂಗಕ್ಕೆ ಹೊಡೆತ ಬೀಳುತ್ತಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ