ಫ್ಲಾಪ್ ಆಯ್ತಾ ಮ್ಯಾಜಿಕ್ ಶೋ ?

Is The Magic Show A flop show ?

27-12-2018

 

ಮ್ಯಾಜಿಕ್ ಮೇಕರ್ ಎಂದು ಕರೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ 5 ವರ್ಷವೂ ದೇಶದ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸಿನಲ್ಲಿ ಬಿಜೆಪಿ ರಾಜಕೀಯ ರಣತಂತ್ರ ರೂಪಿಸುತ್ತಿದೆ. ಆದರೆ ಜನಸಾಮಾನ್ಯರು ಮಾತ್ರ ಈ ಐದು ವರ್ಷಗಳಲ್ಲಿ ಸರ್ಕಾರ ನಮ್ಮ ಜೋಳಿಗೆಯಲ್ಲಿ ಹಾಕಿದ್ದೇನು ಎಂಬುದರ ವಿಮರ್ಶೆಗೆ  ಮುಂದಾಗಿದ್ದಾರೆ. ಹೀಗೆ ಬಿಜೆಪಿಯ ಆಡಳಿತದ ವಿಮರ್ಶೆಗೆ ಮುಂದಾದ ಜನರು ಕಮಲ ಪಾಳಯಕ್ಕೆ ನೀಡುತ್ತಿರುವ ಅಂಕ ಮಾತ್ರ ನಿಮ್ಮನ್ನು ಬೆಚ್ಚಿಬೀಳಿಸುವಷ್ಟು.

   ಹೌದು ಜನಸಾಮಾನ್ಯರು ಮೋದಿ ನೇತೃತ್ವದ ಬಿಜೆಪಿಯ ಆಡಳಿತವನ್ನು ವಿಮರ್ಶೆಗೆ ಒಡ್ಡಲು ಮುಂದಾಗಿದ್ದಾರೆ. ಈ ಸರ್ಕಾರದ ಆಡಳಿತದಿಂದ ನಿಮ್ಮ  ಜೀವನದಲ್ಲಿ ಏನಾಗಿದೆ ಎಂದು ಕೇಳಿದರೆ ಏನು ಇಲ್ಲ ಎಂದು ನೇರವಾಗಿ ಉತ್ತರಿಸುತ್ತಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲ ಮೋದಿಯನ್ನು ಬೆಂಬಲಿಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಕೂಡ ನಿಮ್ಮ ಜೀವನದಲ್ಲಿ ಏನು ಉತ್ತಮ ಬದಲಾವಣೆಯಾಗಿದೆ ಎಂದರೆ ಏನು ಇಲ್ಲ ಎನ್ನುತ್ತಿರುವುದು ದುರಂತ. ಕೇಂದ್ರದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬಷ್ಟು ನಿಷ್ಕ್ರೀಯವಾಗಿದೆ ಮೋದಿ  ಸರ್ಕಾರ ಅನ್ನೋದು ಜನರ ಟೀಕೆ. 
ಉದ್ಯೋಗ ಸೃಷ್ಟಿಸಬಲ್ಲ ಕೈಗಾರಿಕೆ, ಕೃಷಿ ಚಟುವಟಿಕೆಗಳು ಸೊರಗಿದೆ. ಸರ್ಕಾರ ಕೇವಲ ಟ್ಯಾಕ್ಸ್ ಹೆಚ್ಚಳ ಮಾಡುವ ವಿಧಾನಗಳನ್ನು  ಹುಡುಕುತ್ತಿದೆ. ಇನ್ನು ನೋಟ್ ಬ್ಯಾನ್‍ನಿಂದ ಚಿಕ್ಕ-ಪುಟ್ಟ ಕೈಗಾರಿಕೆಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಅಪಾರ ಪ್ರಮಾಣದ ನಷ್ಟ ಎದುರಿಸಿದ್ದು,  ಇದು ಬಡ ಮತ್ತು ಮಧ್ಯಮವರ್ಗದ ಜನರ ಬದುಕಿನ ಮೇಲೆ ಪರಿಣಾಮ ಬೀರಿದೆ. 

 ಸಾಂಸ್ಕøತಿಕ ಶ್ರೀಮಂತಿಕೆಗೆ ವಿಶ್ವದಲ್ಲೇ ಹೆಸರುವಾಸಿಯಾದ ಭಾರತ ಸಾಂಸ್ಕøತಿಕವಾಗಿ ಸೊರಗಿ ಹೋಗಿದೆ ಅನ್ನೋದು ಜನಸಾಮಾನ್ಯರ ಆರೋಪ. ಧಾರ್ಮಿಕವಾಗಿ ಒಂದಷ್ಟು ಚಟುವಟಿಕೆಗಳನ್ನು ಕೈಗೊಂಡಿರೋದನ್ನು ಬಿಟ್ಟರೆ  ಸಾಂಸ್ಕøತಿಕವಾಗಿ  ಸರ್ಕಾರದ ಸಾಧನೆ ಶೂನ್ಯ. ದೇಶ ಸಾಂಸ್ಕøತಿಕವಾಗಿ ದಶಕಗಳಷ್ಟು ಹಿಂದಕ್ಕೆ ಹೋದಂತಿದೆ. ಜನರು ಮೋದಿಯವರ ಅಭಿವೃದ್ಧಿ ರಹಿತ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಹೀಗಾಗಿ ಜನರು ಈ ಸರ್ಕಾರದಿಂದ ಬೇಸತ್ತು ಬದಲಾವಣೆ ಬಯಸುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿಗೆ ಅಪಾಯ ಕಾದಿದೆ ಎಂದು ಬಿಜೆಪಿ ಹಿತೈಷಿಗಳೆ ಆಡಿಕೊಳ್ಳುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Modi # flop show ? #Magic Show #People talk


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ