ನಮಾಜ್ ಬೇಡ.... ಪೂಜೆ ಓಕೆನಾ?

No To Namaj In Public Place

27-12-2018

ಭಾರತದಲ್ಲಿ ಸಹಿಷ್ಣುತೆ ಇದೆ. ಏಕರೂಪರ ಕಾನೂನುಗಳು ಎಲ್ಲರಿಗೂ ಅನ್ವಯವಾಗುತ್ತದೆ ಎನ್ನಲಾಗುತ್ತದೆ. ಆದರೇ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೊಲೀಸ್ ಠಾಣೆಯೊಂದು ಹೊರಡಿಸಿದ ಆದೇಶ ಇದೀಗ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದು, ದೇಶದಲ್ಲಿ ಮುಸ್ಲಿಂರಿಗೆ ಮಾತ್ರ ನಿಯಮಗಳು ಅನ್ವಯವಾಗುತ್ತಾ ಎಂಬ ಪ್ರಶ್ನೆ ಮೂಡಿಸಿದೆ. 

    ಕೈಗಾರಿಕಾ ಪ್ರದೇಶವಾಗಿರುವ ನೋಯ್ಡಾದಲ್ಲಿ  ಶುಕ್ರವಾರ ಸೇರಿದಂತೆ ಹಲವು ಸಂದರ್ಭದಲ್ಲಿ  ಮುಸ್ಲಿಂರು ಪಾರ್ಕ್ ಸೇರಿದಂತೆ ಬೇರೆ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುತ್ತಿದ್ದರು. ಇದರಿಂದ ಏಕಕಾಲಕ್ಕೆ ಜನದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ ಎಂದಿರುವ ನೋಯ್ಡಾ ಸೆಕ್ಟರ್ 58 ರ ಪೊಲೀಸ್ ಠಾಣೆ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವಂತಿಲ್ಲ, ಎಲ್ಲರೂ ಮಸೀದಿಗೆ  ತೆರಳಿ ಪ್ರಾರ್ಥನೆ ಸಲ್ಲಿಸಬೇಕೆಂದು ಆದೇಶಿಸಿದೆ. ಅಲ್ಲದೆ ಆದೇಶ ಮೀರಿ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಪೊಲೀಸರು ಎಚ್ಚರಿಸಿದ್ದಾರೆ. 
     ಇನ್ನು ಪೊಲೀಸರ ಈ ಕ್ರಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಹಿಂದೂಗಳು ಕೆಲವೊಮ್ಮೆ ಪಾರ್ಕ್‍ಗಳಲ್ಲಿ ಪೂಜೆ ಮಾಡುತ್ತಾರೆ. ರಸ್ತೆ ಬದಿಗಳಲ್ಲೂ ದೇವಾಲಯಗಳನ್ನು ಗುಡಿಗಳನ್ನು ಕಟ್ಟಿ ದೇವರನ್ನು ಪೂಜಿಸುತ್ತಾರೆ. ಕ್ರಿಶ್ಚಿಯನ್ನರು ಕೂಡ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಏಸುವಿನ ಶಿಲುಬೆ ಸ್ಥಾಪಿಸುತ್ತಾರೆ, ಅಂದ ಮೇಲೆ ಏಕರೂಪ ಕಾಯಿದೆ ಪ್ರಕಾರ ಎಲ್ಲರಿಗೂ ಸಾರ್ವಜನಿಕ ಸ್ಥಳದಲ್ಲಿ ದೇವರ ಆರಾಧನೆ ಮಾಡುವಂತಿಲ್ಲ ಎಂಬ ಆದೇಶ ಬರಬೇಕೇ ವಿನಃ ಒಂದು ಕೋಮಿನ 
ಜನರನ್ನು ಮಾತ್ರ ನಿರ್ಬಂಧಿಸಬಾರದು ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ. 
      ತಮ್ಮ ಆದೇಶದಿಂದ ಸೃಷ್ಟಿಯಾಗಿರುವ ಚರ್ಚೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ನೋಯ್ಡಾ ಪೊಲೀಸರು ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ. ಉದ್ದಿಮೆಗಳ ಉದ್ಯೋಗಿಗಳು ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಹೀಗಾಗಿ ಕಂಪನಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ನೋಯ್ಡಾ ಪೊಲೀಸರ ಕ್ರಮ ದೇಶದಾದ್ಯಂತ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿರುವುದಂತು ನಿಜ.

 


ಸಂಬಂಧಿತ ಟ್ಯಾಗ್ಗಳು

#No Namaj Noida Public Place Police Order


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ