ಸ್ಮೋಕಿಂಗ್ ಬ್ಯಾನ್....! ಕಾನೂನಿನಲ್ಲಿದೆ.... ಆಚರಣೆಯಲ್ಲಿಲ್ಲ!

No Smoking Only Order !

26-12-2018

ಐಟಿ ಸಿಟಿ ಬೆಂಗಳೂರಿನಲ್ಲಿ ಸ್ಮೋಕಿಂಗ್ ಪ್ರಿಯರ ಸಂಖ್ಯೆ  ಪ್ರತಿನಿತ್ಯ ಹೆಚ್ಚುತ್ತಲೇ ಇದೆ. ಟೆನ್ಸನ್ ರಿಲೀಸರ್ ಅಂತಾನೇ ಕರೆಸಿಕೊಳ್ಳೋ ಸ್ಲೋ ಕಿಲ್ಲರ್ ಸಿಗರೇಟ್‍ಗೆ ವಯಸ್ಸಿನ ಬೇಧವಿಲ್ಲದೇ ಎಲ್ಲ ವಯೋಮಾನದವರು ದಾಸರಾಗುತ್ತಿದ್ದಾರೆ. ಆದರೇ ಸ್ಮೋಕಿಂಗ್ ದುಷ್ಮರಿಣಾಮವನ್ನು ತಡೆಯೋದಿಕ್ಕೆ ನಗರದಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ ಎಂದು ನಗರಾಡಳಿತ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಕೇವಲ ಕಾಗದದಲ್ಲಿ ಮಾತ್ರ ಉಳಿದುಕೊಂಡಿದ್ದು, ನಗರದ ಎಲ್ಲ ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನ ಯಾರ ಭಯವೂ ಇಲ್ಲದೇ ಧಮ್ ಮಾರೋ ಧಮ್ ಎನ್ನುತ್ತಿದ್ದಾರೆ. 

 ನಿಯಮಗಳ ಪ್ರಕಾರ ಯಾರೂ ಕೂಡ ಸಾರ್ವಜನಿಕ ಸ್ಥಳದಲ್ಲಿ ಹೊಗೆಬತ್ತಿ ಸೇದುವಂತಿಲ್ಲ. ಶಾಲೆ. ಆಸ್ಪತ್ರೆ ಹಾಗೂ ದೇವಸ್ಥಾನಗಳಿಂದ 100 ಮೀಟರ್ ದೂರದವರೆಗೂ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು ಮಾರುವಂತೆಯೂ ಇಲ್ಲ. ಆದರೂ ಮಾರಾಟ ಹಾಗೂ ಬಳಕೆ ಮೇಲೆ ಯಾವ ಕಡಿವಾಣವೂ ಬಿದ್ದಿಲ್ಲ. ಐಟಿ ಕಂಪನಿಗಳು ಸೇರಿದಂತೆ ಹೊಟೆಲ್ ಮುಂತಾದ ಉದ್ಯಮ ಸಂಸ್ಥೆಗಳು ತಮ್ಮ ಸ್ಮೋಕಿಂಗ್ ಹವ್ಯಾಸ ಉಳ್ಳ ಉದ್ಯೋಗಿಗಳಿಗಾಗಿ ಸ್ಮೋಕಿಂಗ್ ಝೋನ್ ನಿರ್ಮಿಸಬೇಕು. ಹೀಗೆ ಒದಗಿಸಲಾದ ಸ್ಮೋಕಿಂಗ್ ಝೋನ್‍ನಲ್ಲಿಯೇ ಸ್ಮೋಕ್ ಮಾಡಬೇಕು. ಹೀಗೆ ಸ್ಮೋಕಿಂಗ್ ಗೆ ಮೀಸಲಾದ ಸ್ಥಳದಲ್ಲಿ ಆಹಾರ ಹಾಗೂ ಪಾನೀಯ ಒದಗಿಸುವಂತಿಲ್ಲ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಆದರೂ ಜನ ಎಲ್ಲಿ ಸಿಗರೇಟು ಖರೀದಿಸುತ್ತಾರೋ ಅಲ್ಲೇ ಸೇದುತ್ತ ಮಾಲಿನ್ಯ ಸೃಷ್ಟಿಸೋದರ ಜೊತೆಗೆ ಇತರರಿಗೂ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿದ್ದಾರೆ. 

ನಿಯಮ ಜಾರಿಗೆ ಬಂದ ಹೊಸದರಲ್ಲಿ ಒಂದೆರಡು ತಿಂಗಳುಗಳ ಕಾಲ ನಗರದ ಹಲವೆಡೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದವರಿಗೆ ದಂಡ ವಿಧಿಸಿದ್ದರು. ಹೊಟೆಲ್‍ಗಳ ಪರವಾನಿಗೆ ರದ್ದು ಮಾಡುವುದಾಗಿಯೂ ಬೆದರಿಸಿ ಹೋಗಿದ್ದರು. ಆದರೆ ದಿನ ಹೋದಂತೆ ಅಧಿಕಾರಿಗಳು ನಿಯಮ ಮರೆತಿದ್ದು, ಹೊಟೆಲ್ ಮಾತ್ರವಲ್ಲದೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳಲ್ಲೂ ಅವ್ಯಾಹತವಾಗಿ ನಡೆಯುತ್ತಿದೆ. ಅನುಷ್ಠಾನ ಮಾಡಲಾಗದ ಕಾನೂನುನನ್ನು ಜಾರಿಗೆ ತಂದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ.  
ಈ ಹಿಂದೆ ಪ್ಲಾಸ್ಟಿಕ್ ಬ್ಯಾನ್, ಟಿಂಟ್ ಗ್ಲಾಸ್ ನಿಷೇಧ, ಹೆಲ್ಮೆಟ್ ಕಡ್ಡಾಯದಂತಹ ಆದೇಶಗಳು ಜಾರಿಯಾದರೂ ಕೂಡ ಇನ್ನು ಇನ್ನು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.  ರಾಜ್ಯ ಸರ್ಕಾರ ವಾಹನ ಸವಾರರಿಗೆ ಮಾತ್ರವಲ್ಲದೇ ಸಹ-ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಆದರೆ ರಸ್ತೆಗಳಲ್ಲಿ ಸಹ-ಸವಾರರಿರಲಿ ಬೈಕ್ ಸವಾರರೇ ಹೆಲ್ಮೆಟ್ ಧರಿಸದೆ ರಾಜಾರೋಷವಾಗಿ ವಾಹನ ಚಾಲಿಸುತ್ತಿದ್ದಾರೆ. ಇದು ಸಂಚಾರಿ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೂ ಕಣ್ಮುಚ್ಚಿ ಕೂತಿದ್ದಾರೆ. ಒಬ್ಬ ಸಿಗರೇಟು ಸೇದಿ ಸಿಗರೇಟು ಸೇದದ 10 ಜನರ ಮೂಗಿಗೆ ಹೊಗೆ ಕಳಿಸುವ ಈ ಕೆಟ್ಟ ನಡವಳಿಕೆಯನ್ನು ಬಿಬಿಎಂಪಿ ಅಸಹಾಯಕವಾಗಿ ನೋಡುತ್ತಾ ಕುಳಿತಿರುವುದು ನಿಜಕ್ಕೂ ವಿಷಾದನೀಯ.
 


ಸಂಬಂಧಿತ ಟ್ಯಾಗ್ಗಳು

#No Smoking #Govrnment Order # Public Places #No Implement


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ