ನಿಮಗೂ ಹದಿಹರೆಯದ ಮಕ್ಕಳಿದ್ದಾರಾ? ಈ ಸುದ್ದಿ ನೋಡಿ!

Do You Have Teenagers In Home Watch This News!!

26-12-2018

 

ಸಿಲಿಕಾನ ಸಿಟಿ ಹೆಣ್ಣುಮಕ್ಕಳಿಗೆ ಸೇಫಲ್ಲ ಅನ್ನೋ ಕಾರಣಕ್ಕೆ ತಲೆಕೆಡಿಸಿಕೊಂಡಿದ್ದ ಪೋಷಕರಿಗೆ ಇದೀಗ ಇನ್ನೊಂದು ಶಾಕ್ ಕಾದಿದೆ. ಬೆಂಗಳೂರಿನಲ್ಲಿ ಗಲ್ಲಿ-ಗಲ್ಲಿಯಲ್ಲಿ ತಲೆ ಎತ್ತಿನಿಂತಿರೋ ಬಾರ್, ಪಬ್, ಪಾರ್ಟಿ ಹಾಲ್‍ಗಳು  ನಿಮ್ಮ ಹದಿಹರೆಯದ ಮಕ್ಕಳನ್ನೆ ಗುರಿಯಾಗಿಸಿಕೊಂಡಿದ್ದು, ನಿಮಗೂ ಟಿನೇಜಿನ ಮಕ್ಕಳಿದ್ದರೆ ನೀವು ಅವರ  ಮೇಲೆ ಒಂದು ಕಣ್ಣಿಟ್ಟಿರಲೇ ಬೇಕು ಎಂಬ ಪರಿಸ್ಥಿತಿ ಪೋಷಕರಿಗೆ ಎದುರಾಗಿದೆ.

 
ಹೌದು ನಗರದ ಪಬ್,ಕ್ಲಬ್,ಪಾರ್ಟಿ ಹಾಲ್‍ಗಳಲ್ಲಿ ಹದಿಹರೆಯದ, ಹೈಸ್ಕೂಲ್, ಕಾಲೇಜ ಮಕ್ಕಳನ್ನೆ ಟಾರ್ಗೆಟ್ ಮಾಡಿ ಮದ್ಯದ ರುಚಿ ಹತ್ತಿಸುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಬರ್ತಡೇ ಪಾರ್ಟಿ, ಹೊಸ ವರ್ಷಾಚರಣೆ ಹೀಗೆ ಬೇರೆ -ಬೇರೆ ಸೆಲಿಬ್ರೇಶನ್ ಸಂದರ್ಭಗಳನ್ನು ನೆಪವಾಗಿಟ್ಟುಕೊಂಡು ಇಂತಹ ಟಿನೇಜ್‍ನ ಹುಡುಗ-ಹುಡುಗಿಯರಿಗೆ ಪಾರ್ಟಿ ಆಯೋಜಿಸುವುದು ಹಾಗೂ ಅಂತಹ ಪಾರ್ಟಿಯಲ್ಲಿ ಮದ್ಯ ಸೇರಿದಂತೆ ವಿವಿಧ ಬಗೆಯ ಮಾದಕ ವಸ್ತುಗಳನ್ನು ಒದಗಿಸುವ ಕೆಲಸ ಅನೇಕ ಇಂಥ ಕಡೆಗಳಲ್ಲಿ ನಡೆಯುತ್ತಿದೆ.  


ವಿದ್ಯಾರ್ಥಿಗಳು ಮೊದಲು ಕುತೂಹಲದಿಂದ ಈ ರೀತಿಯ ಮಾದಕ ವಸ್ತುಗಳನ್ನು ಬಳಸಿ ನಿಧಾನಕ್ಕೆ ಅದರ ದಾಸರಾಗಿ ಹೋಗುತ್ತಿದ್ದಾರೆ. ವಿಶೇಷವಾಗಿ ಎಂ.ಜಿ.ರೋಡ್, ಬ್ರಿಗೇಡ್  ರೋಡ್‍ನಲ್ಲಿನ ಕೆಲ ಪಬ್‍ಗಳು, ಬಾರ್ ಹಾಗೂ ರೆಸ್ಟೋರೆಂಟ್‍ಗಳು, ಕೆಫೆಗಳು ಈ ರೀತಿ ಕೃತ್ಯ ಎಸಗುತ್ತಿರೋದು ಬೆಳಕಿಗೆ ಬರುತ್ತಿದೆ. 


ಟಿನೇಜ್‍ನವರನ್ನು ಸೆಳೆಯುವ ಉದ್ದೇಶದಿಂದ ಮದ್ಯವನ್ನು ರಿಯಾಯತಿ ದರದಲ್ಲಿ ಒದಗಿಸಿ  ಅವರನ್ನು ಸೆಳೆದುಕೊಳ್ಳಲಾಗುತ್ತಿದೆ.  ಕಾನೂನಿನ ಪ್ರಕಾರ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವುದು ಹಾಗೂ ಅವರನ್ನು ಮಾದಕ ದ್ರವ್ಯ ಸೇವಿಸುವಂತೆ ಪ್ರೇರೇಪಿಸುವುದು ಶಿಕ್ಷಾರ್ಹ ಅಪರಾಧ. ಆದರೆ ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದ್ದು, ಹದಿಹರೆಯದ ಮಕ್ಕಳನ್ನು ಅಮಲಿನ ದಾಸರಾಗುವ ಕಾರ್ಯ ಎಗ್ಗಿಲ್ಲದೆ  ಸಾಗಿದೆ. 


   ಮೂಲಗಳಿಂದ ಬಂದ  ಮಾಹಿತಿ ಪ್ರಕಾರ ಮಧ್ಯಾಹ್ನದ ಹೊತ್ತೇ ಹೆಚ್ಚಾಗಿ  ನಡೆಯುವ ಈ ಪಾರ್ಟಿಗಳು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಅಥವಾ ಕೆಲವೊಮ್ಮೆ ಅವರನ್ನು ಅಡ್ಜೆಸ್ಟ್ ಮಾಡಿಕೊಂಡು ನಡೆಯುತ್ತಿವೆ. ಹೆತ್ತವರು ಕೂಡ ಮಕ್ಕಳು ಸ್ಕೂಲ್‍ಗೆ ತೆರಳಿದ್ದಾರೆ. ಅಥವಾ ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ ಎಂದು ಸುಮ್ಮನಾಗುತ್ತಿದ್ದರೇ, ಇತ್ತ ಮಕ್ಕಳು ಇನ್ನು ಲೋಕವರಿದ ಹೊತ್ತಿನಲ್ಲೇ ಕೈಯಲ್ಲಿ ಗ್ಲಾಸ್ ಹಿಡಿದು ತೂರಾಡುವ ಸ್ಥಿತಿ ತಲುಪುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಅಪರಾಧ ಕೃತ್ಯಗಳು ಎಲ್ಲೆ ಮೀರುತ್ತಿದ್ದು, ಹದಿಹರೆಯವದರು ಹೀಗೆ ಎಣ್ಣೆನಶೆ ಅಪರಾಧಕ್ಕಿಳಿದರೆ ಬೆಂಗಳೂರಿನ ನಾಗರೀಕರ ಸ್ಥಿತಿ ಏನಾಗಲಿದೆ ಎಂಬ ಆತಂಕ ಕಾಡುತ್ತಿದೆ. ಇಂತಹ  ಅವಾಂತರ ಸೃಷ್ಟಿಯಾಗುವ ಮುನ್ನ ಪಾಲಿಕೆ ಹಾಗೂ ಪೊಲೀಸ್ ಇಲಾಖೇ ಎಚ್ಚೆತ್ತುಕೊಳ್ಳಬೇಕಿದೆ. 


ಸಂಬಂಧಿತ ಟ್ಯಾಗ್ಗಳು

#Teenagers Alcohol #Day Party #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಒಳ್ಳೆಯ ಅತ್ಯುತ್ತಮವಾದ ಮಾಹಿತಿ ತಿಳಿಸಿದ್ದ ಕ್ಕೆ ಧನ್ಯವಾದಗಳು...ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.....ಮಾಹಿತಿ ತಿಳಿಸಿ..
  • Chidanandamunijs
  • Electrical work