ಶಾರೂಕ್ ಜೀರೋ ಮುಂದೆ ಯಶ್ ಹೀರೋನಾ? 

Is Yesh Hero  infront of  Sharuks Zero?

26-12-2018

ಶಾರೂಕ್ ಜೀರೋ ಮುಂದೆ ಯಶ್ ಹೀರೋನಾ? 

ಕನ್ನಡದ ಬಹುನೀರಿಕ್ಷಿತ ಚಿತ್ರ ಕೆಜಿಎಫ್ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಮೇಲೆ ಬಂದು ಮೋಡಿ ಮಾಡ್ತಿದೆ ಅನ್ನೋ ಮಾತು ಎಲ್ಲೆಡೆ ಕೇಳಿಬರ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಎಲ್ಲಾ ಕಡೆಗಳಲ್ಲೂ ಕೆಜಿಎಫ್‍ನದ್ದೇ ಹವಾ. ಅಷ್ಟೇ ಅಲ್ಲ ಹಿಂದಿಯಲ್ಲಿ ಬಾಲಿವುಡ್ ಬಾದಷಾ, ಕಿಂಗ್ ಖಾನ್ ಶಾರೂಕ್ ಅಭಿನಯದ  ಜೀರೋ ಗಳಿಕೆಯನ್ನು ಕೆಜಿಎಫ್ ಮೀರಿಸಿದೆ ಎಂಬ ಮಾತಿನಿಂದ ಚಿತ್ರತಂಡ ಅಕ್ಷರಷಃ ಆಕಾಶಕ್ಕೆ ಏಣಿ ಹಾಕ್ತಿದೆ. ಆದರೇ ನಿಜಕ್ಕೂ ಕೆಜಿಎಫ್, ಹಿಂದಿಯ ಜೀರೋ  ಮೀರಿಸುವಷ್ಟು ಹಣ ಗಳಿಸಿದ್ಯಾ ಅಂದ್ರೆ, ಹಿಂದಿಯ ಮಂದಿ ಹೇಳ್ತಿರೋದೆ ಬೇರೆ. 
ಬಾಲಿವುಡ್ ಗಲ್ಲಾಪೆಟ್ಟಿಗೆ ವಿಮರ್ಶಕರ ಪ್ರಕಾರ ಕೆಜಿಎಫ್ ಹಿಂದಿಯ ಜೀರೋವನ್ನು ಮೀರಿಸುವಂಥ  ಗಳಿಕೆಯನ್ನೇನೂ ಮಾಡುತ್ತಿಲ್ಲ. ಬದಲಾಗಿ ತಕ್ಕಮಟ್ಟಿಗೆ ಹಿಂದಿ ನೋಡುಗರ ಮೆಚ್ಚುಗೆಗೆ ಪಾತ್ರವಾಗ್ತಿದೆ. ಬಹುವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ಏಕಕಾಲಕ್ಕೆ ಹಿಂದಿಯ 1500 ಸ್ಕ್ರೀನ್‍ನಲ್ಲೂ ಬಿಡುಗಡೆ ಕಂಡಿತ್ತು. ಹೀಗಾಗಿ ಜನರು ಕುತೂಹಲ ಹಾಗೂ ಆಸಕ್ತಿಯಿಂದ ಚಿತ್ರಮಂದಿರದತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ ಹಿಂದಿಯಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರ ಮೊದಲನೆ ದಿನ ಒಟ್ಟು 2.10 ಕೋಟಿ ಗಳಿಕೆ ಕಂಡಿತ್ತು. ನಾಲ್ಕು ದಿನಗಳ ಅಂತ್ಯಕ್ಕೆ ಈ ಗಳಿಕೆ ಕೆಜಿಎಫ್‍ನ ಗಳಿಕೆ12.01 ಕೋಟಿ.
 
ಇನ್ನು ವಿಭಿನ್ನ ಕತೆಯ ಮೂಲಕ ಬಾಲಿವುಡ್‍ನಲ್ಲಿ ತೆರೆಗೆ ಬಂದ ಕಿಂಗ್‍ಖಾನ್‍ರ ಬಹುನೀರಿಕ್ಷಿತ ಚಿತ್ರ ಜೀರೋ ಇದುವರೆಗೂ 60 ಕೋಟಿ ಅಧಿಕ ಮೊತ್ತ ಗಳಿಸಿದ್ದು, ಯಶಸ್ವಿ ಪ್ರದರ್ಶನ ಮುಂದುವರೆದಿದೆ. ನಾಲ್ಕು ದಿನದ ಅಂತ್ಯಕ್ಕೆ ಜೀರೋ ಗಳಿಸಿದ ಮೊತ್ತದ ಅಂಕಿಅಂಶ ಇನ್ನು ಬಿಡುಗಡೆಯಾಗಬೇಕಿದ್ದು, ಅದು ಕನಿಷ್ಠ 100 ಕೋಟಿ ದಾಟಿರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಜೀರೋ ಚಿತ್ರವನ್ನು ಕೆಜಿಎಫ್ ಚಿತ್ರ ಮೀರಿಸಿದೆ ಎಂಬ ವಾದದಲ್ಲಿ ಹುರುಳಿಲ್ಲ ಅಂತಾರೆ ಚಿತ್ರವಿಮರ್ಶಕರು. 
   ಇನ್ನು ಕೇವಲ ಬಾಕ್ಸಾಪೀಸ ಗಳಿಕೆ ಬಗ್ಗೆ ಮಾತನಾಡೋದಾದರೂ ಕೂಡ ಹಿಂದಿ ಭಾಷೆಯೊಂದರಲ್ಲೇ ಬಿಡುಗಡೆಯಾದ ಜೀರೋ ಚಿತ್ರ  ಈಗಾಗಲೆ 60 ಕೋಟಿ ಗಳಿಸಿದೆ. ಆದರೆ ಕೆಜಿಎಫ್ ಇದುವರೆಗೂ ವಲ್ರ್ಡವೈಡ್ ಗಳಿಸಿದ ಒಟ್ಟು ಸಂಪಾದನೆ 24 ಕೋಟಿ ರೂಪಾಯಿ. ಇನ್ನು ನಾಲ್ಕು ಭಾಷೆಗಳ ಜೊತೆ ಹಿಂದಿಯಲ್ಲೂ ಬಿಡುಗಡೆ  ಕಂಡ ಕೆಜಿಎಫ್ ಮೊದಲನೆ ದಿನ ಹಿಂದಿಯಲ್ಲಿ ಕೇವಲ 2.10 ಕೋಟಿ ಗಳಿಸಿತ್ತು. ಹೀಗಾಗಿ ಕೆಜಿಎಫ್ ಗಳಿಕೆಯನ್ನು ಹಿಂದಿಯೊಂದಿಗೆ ಹೋಲಿಕೆ ಮಾಡೋದೆ ಸರಿಯಲ್ಲ. ಆದರೂ ಕನ್ನಡದ ಚಿತ್ರವೊಂದು ಬಾಲಿವುಡ್ ಕಿಂಗ್ ಶಾರುಕ್ ಚಿತ್ರಕ್ಕೆ ಪೈಪೋಟಿ ನೀಡ್ತಿದೆ ಅನ್ನೋದು ಕನ್ನಡಿಗರ ಪಾಲಿಗೆ ಸಂಭ್ರಮದ ಸಂಗತಿ. 


ಸಂಬಂಧಿತ ಟ್ಯಾಗ್ಗಳು

#KGF #SHARUK #YESH #ZERO


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ