ಅಪರಾಧ ಕೃತ್ಯಗಳ ಪಾಠಶಾಲೆಯಾಯ್ತಾ ಪಾರು ಸೀರಿಯಲ್?

Expolsives Making Lesson in Zee Kannada

26-12-2018

ಕನ್ನಡ ಖಾಸಗಿ ಮನೋರಂಜನಾ ವಾಹಿನಿ ಝೀ ಕನ್ನಡದಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿರುವ ಕೌಟುಂಬಿಕ ಧಾರಾವಾಹಿ ಪಾರು ಇದೀಗ ವಿವಾದಕ್ಕೀಡಾಗಿದೆ. ಧಾರಾವಾಹಿಯಲ್ಲಿ ಕಾರಿನಿಂದ ವ್ಯಕ್ತಿಯನ್ನು ರಕ್ಷಿಸಲು ನಾಯಕಿ ಪಾರು ಬಳಸಿದ ವಿಧಾನ ವಿವಾದಕ್ಕೆ ಕಾರಣವಾಗಿದ್ದು, ಸೀರಿಯಲ್ ಮೂಲಕ ಅಪರಾಧ ಕೃತ್ಯಕ್ಕೆ ಬಹಿರಂಗವಾಗಿಯೇ ಟ್ರೈನಿಂಗ್  ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. 

 ಕಥಾನಾಯಕಿ ಪಾರು ತನ್ನ ಬುದ್ಧಿವಂತಿಕೆಯಿಂದ ಬೆಂಕಿಕಡ್ಡಿಯನ್ನೆ  ಸ್ಪೋಟಕವಾಗಿಸಿದ್ದೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಧಾರವಾಹಿಯಲ್ಲಿ ಮನೆಯ ಒಡತಿ  ಅಖಿಲಾಂಡೇಶ್ವರಿಯ ಪತಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದೆನೋವಿನಿಂದ ಬಳಲಿ ಕಾರಿನಲ್ಲಿ ಒಳಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಅವರನ್ನು   ರಕ್ಷಿಸಲು ಮುಂದಾಗುವ  ನಾಯಕಿ ಪಾರು ಕಾರಿನ ಬಾಗಿಲಿಗೆ ಬೆಂಕಿ ಕಡ್ಡಿಯಲ್ಲಿರುವ ಗಂಧಕವನ್ನು ಬಳಸಿ ಕಾರಿನ ಬಾಗಿಲ ಲಾಕ್‍ನ್ನು ಸ್ಪೋಟಿಸಿ ಒಳಗಿರುವ ಯಜಮಾನರನ್ನು ರಕ್ಷಿಸುತ್ತಾಳೆ. ಈ ದೃಶ್ಯ ವಿವಾದಕ್ಕೆ ಕಾರಣವಾಗಿದ್ದು, ಈ ದೃಶ್ಯದ ಮೂಲಕ ಸುಲಭವಾಗಿ ಮನೆಯಲ್ಲಿ ಸಿಗುವ  ಗಂಧಕವನ್ನು  ಸ್ಪೋಟಕವಾಗಿ ಬಳಸುವುದನ್ನು ಹೇಳಿಕೊಟ್ಟಂತಾಗಿದ್ದು, ಇದು 
ಅಪಾಯಕ್ಕೆ ಎಡೆ ಮಾಡಿಕೊಡಲಿದೆ ಎಂಬ ಮಾತು ಕೇಳಿಬಂದಿದೆ. 

 ಈ ರೀತಿ ಯಾವುದೇ ಕಾರಿನ ಬಾಗಿಲನ್ನು ತೆರೆಯಬಹುದೆಂದು ತೋರಿಸಿ ಕೊಟ್ಟಿದ್ದು, ಸ್ಪೋಟಕವನ್ನು ತಯಾರಿಸುವುದು ಕಾನೂನು ಬದ್ಧ ಕೆಲಸ ಎಂಬಂತೆ ಬಿಂಬಿಸಲಾಗಿದೆ. ಭಾರತೀಯ ಕಾನೂನಿನ ಪ್ರಕಾರ ಅನುಮತಿ ಇಲ್ಲದೇ ಸ್ಪೋಟಕ ತಯಾರಿಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಸ್ಪೋಟಕ ಮಾಡುವುದನ್ನು ಹೇಳಿಕೊಡುವುದು ಜೈಲಿಗೆ ದಾರಿ ಮಾಡಿಕೊಡಬಹುದು. ಸೀರಿಯಲ್‍ಗಳಲ್ಲಿ ಯಾವುದೇ ದೃಶ್ಯಗಳನ್ನು ಬಳಸಿಕೊಳ್ಳುವಾಗ ಅದು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವದ ಕುರಿತು ಯೋಚನೆ ಮಾಡಬೇಕು. ಆದರೇ ಪಾರು  ಸೀರಿಯಲ್ ನಿರ್ದೇಶಕರು ಈ ನಿಯಮ ಮರೆತಿದ್ದು, ತಮ್ಮ ಧಾರಾವಾಹಿ ನಾಯಕಿಯನ್ನು ಬುದ್ಧಿವಂತೆ ಎಂದು ನಿರೂಪಿಸುವ ಭರದಲ್ಲಿ ಕಾನೂನು ಮರೆತು 
ಜನ ಅಪರಾಧ ಎಸಗಲು ಪ್ರಚೋದನೆ ನೀಡಿದಂತಿದೆ. ಈಗಾಗಲೇ ಬೇಜವ್ದಾರಿಗೆ ಹೆಸರಾಗಿರುವ ಕನ್ನಡದ ಮನೋರಂಜನಾ ವಾಹಿನಿಗಳು ಈ ಘಟನೆಯ ಮೂಲಕ ಉತ್ತರದಾಯಿತ್ವ ರಹಿತ ನಡವಳಿಕೆಯ ಪರಮಾವಧಿಯನ್ನು ತಲುಪಿದಂತಿದೆ. ಯಾರಾದ್ರೂ ಇಂತಹುದ್ದೆಲ್ಲದರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಮೊದಲೆ ಈ ವಾಹಿನಿಗಳು ಎಚ್ಚೆತ್ತುಕೊಂಡರೇ ಎಲ್ಲರಿಗೂ ಕ್ಷೇಮ . 


ಸಂಬಂಧಿತ ಟ್ಯಾಗ್ಗಳು

#PARU SERIAL #ZEE KANNADA Expolsives Making


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ