ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅಸಮಾಧಾನಿತ ಶಾಸಕರಿಗೆ ಇನ್ನಷ್ಟು ನಿರಾಶೆ

For dissatisfied legislators waiting for the cabinet More disappointment

11-12-2018

ಬೆಳಗಾವಿ.ಡಿ.10: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅಸಮಾಧಾನಿತ ಶಾಸಕರಿಗೆ ಇನ್ನಷ್ಟು ನಿರಾಶೆ ಎದುರಾಗಿದೆ.ಯಾರೊಬ್ಬ ಕಾಂಗ್ರೆಸ್ ನಾಯಕರು ನೇತೃತ್ವವಹಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ನಮ್ಮ ಕೆಲಸಗಳಾಗುತ್ತಿಲ್ಲ,ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು ಇಲ್ಲ.ನಮ್ಮ ಮುಖಂಡರು ಬಂದಿಲ್ಲ,ಮುಖ್ಯಮಂತ್ರಿಯನ್ನೇ ಕರೆಯುವ ಶಾಸಕಾಂಗ ಪಕ್ಷದ ಸಭೆ ಮುಂದಕ್ಕೆ ಹೋಗಿದೆ ಎಂಬ ಅಭಿಪ್ರಾಯವನ್ನು ಶಾಸಕರು ವ್ಯಕ್ತಪಡಿಸುತ್ತಾರೆ.ಆದರೆ ಅದನ್ನು ಧೈರ್ಯವಾಗಿ ಹೇಳುವುದಕ್ಕೆ ಶಾಸಕರು ಹಿಂದೇಟು ಹಾಕುತ್ತಾರೆ.ಎರಡು ಮೂರು ದಿನಗಳಲ್ಲಿ ಬೆಂಗಳೂರಿನ ಶಾಸಕರು ಸಭೆ ಕರೆಯಬಹುದೆಂಬ ಆಸೆಯನ್ನು ಕೆಲ ಶಾಸಕರು ಹೊಂದಿದ್ದಾರೆ.ಆದರೆ ಬೆಂಗಳೂರಿನ ಹಿರಿಯ ಶಾಸಕರು ಮಾತ್ರ ತಮಗೇಕೆ ಎಂಬ ಮೌನಕ್ಕೆ ಶರಣಾಗಿದ್ದಾರೆ.

ಬೆಂಗಳೂರು ನಗರ ಹೊರತುಪಡಿಸಿ ಇನ್ನುಳಿದ ಯಾವುದೇ ಜಿಲ್ಲೆಯ ಶಾಸಕರು ಮಾತ್ರ ಸಭೆ ಸೇರಿ ತಮ್ಮ ಅಸಮಾಧಾನವನ್ನು ಹೊರ ಹಾಕಬೇಕು ಎಂಬ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ.


ಸಂಬಂಧಿತ ಟ್ಯಾಗ್ಗಳು

ಶಾಸಕರು ಬೆಂಗಳೂರು legislators Belagum


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ