ಫಲಿತಾಂಶಕ್ಕಾಗಿ ಕಾಯುತ್ತಿರುವ ಶಾಸಕರು

MLAs waiting for the results

10-12-2018

ತಮ್ಮ ಅಸಮಾಧಾನ ಹಾಗೂ ಅತೃಪ್ತಿ ಹೊರ ಹಾಕಲು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶಕ್ಕೆ ಕೆಲವರು ಕಾಯುತ್ತಿದ್ದಾರೆ. ಆ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಮಾಡಲಿದ್ದಾರೆ ಎಂಬ ಮಾತನ್ನು ಕಾಂಗ್ರೆಸ್‍ನ ಕೆಲ ಶಾಸಕರು ಹೇಳುತ್ತಾರೆ. ಫಲಿತಾಂಶ ಕಾಂಗ್ರೆಸ್‍ಗೆ ಪೂರಕವಾಗಿ ಬಂದರೆ ಹೈಕಮಾಂಡ್ ಮತ್ತಷ್ಟು ಸ್ಟ್ರಾಂಗ್ ಆಗುತ್ತದೆ. ಆಗ ಯಾವೊಬ್ಬ ಶಾಸಕರು ಇಲ್ಲಿ ಸಭೆ ನಡೆಸಲು ಅಥವಾ ಬೇರೆ ರೂಪದಲ್ಲಿ ಅತೃಪ್ತಿ ಹೊರ ಹಾಕಲು ಹೋಗುವುದಿಲ್ಲ. ಇಲ್ಲದಿದ್ದರೆ ಅತೃಪ್ತ ಬೇರೆ ರೂಪ ಪಡೆದು ಹೊರಬರಬಹುದು ಎಂಬುದು ಕೆಲ ಶಾಸಕರ ಅಭಿಪ್ರಾಯವಾಗಿದೆ.

ಯಾವುದೇ ಶಾಸಕರಿಗೂ ಪಕ್ಷ ಬಿಟ್ಟು ಹೋಗುವ ಧೈರ್ಯ ಇಲ್ಲ,ಅನಗತ್ಯ ಚುನಾವಣೆ ಎದುರಿಸುವುದಕ್ಕೂ ಸಿದ್ಧರಿಲ್ಲ, ಆದ್ದರಿಂದ ಯಾವ ಅತೃಪ್ತಿಯೂ ಸ್ಪೋಟ ಆಗುವ ಮಟ್ಟಕ್ಕೆ ಹೋಗಲ್ಲವೆಂಬುದು ಬಳ್ಳಾರಿ ಭಾಗದ ಶಾಸಕರೊಬ್ಬರ ಅಭಿಪ್ರಾಯ.

ಮೈಸೂರು ಭಾಗದ ಶಾಸಕರ ಪ್ರಕಾರ, ಡಿ.22ಕ್ಕೆ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಕಾಯಲು ನಿರ್ಧರಿಸಿದ್ದೇವೆ. 


ಸಂಬಂಧಿತ ಟ್ಯಾಗ್ಗಳು

ಪಂಚ ರಾಜ್ಯಗಳ ಮೈಸೂರು MLA Results


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ