ಪ್ರದರ್ಶಕರಿಗೆ ಕೈ ಕೊಟ್ಟ ‘ಥಗ್ಸ್’21-11-2018

ಗಲ್ಲಾಪೆಟ್ಟಿಗೆ ತುಂಬಿ ತುಳುಕುವಷ್ಟು ದುಡ್ಡು ಮಾಡುತ್ತದೆ ಎಂದು ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದ್ದ ‘ಥಗ್ಸ್ ಆಫ್ ಹಿಂದೋಸ್ತಾನ್’ ಸಿನೆಮಾ ನಿರಾಸೆ ಉಂಟುಮಾಡಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನೆಮಾ, ಕಳೆದ 11 ದಿನಗಳಲ್ಲಿ 146 ಕೋಟಿ ರೂಪಾಯಿಗಳನ್ನಷ್ಚೇ ಸಂಪಾದಿಸಿದೆ.

ದೀಪಾವಳಿಯಂದು ತೆರೆಗೆ ಬಂದ, ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಈ ಸಿನೆಮಾ ದಲ್ಲಿ, ಮೊದಲಬಾರಿಗೆ ಮೆಗಾಸ್ಟಾರ್‌ ಗಳಾದ ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್ ಜೊತೆಯಾಗಿ ಅಭಿನಯಿಸಿದ್ದಾರೆ. ಹೀಗಿದ್ದರೂ ‘ಥಗ್ಸ್ ಆಫ್ ಹಿಂದೋಸ್ತಾನ್’ ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿದ್ದು, ಥಿಯೇಟರ್‌ ಮಾಲೀಕರು, ಸಿನೆಮಾ ಖರೀದಿಸಲು ತಾವು ಕೊಟ್ಟಿದ್ದ ಹಣದ ಶೇ.50ರಷ್ಟನ್ನು ಕಳೆದುಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ಅವರು, ತಮಗೆ ಆಗಿರುವ ನಷ್ಟ ತುಂಬಿಕೊಡಬೇಕು ಎಂದು, ಈ ಸಿನೆಮಾ ವಿತರಕರಾದ ಯಶ್ ರಾಜ್ ಫಿಲ್ಮ್ಸ್‌ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಈ ವಿಚಾರದಲ್ಲಿ, ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್ ಅವರಿಂದ ನೆರವು ನಿರೀಕ್ಷಿಸಿರುವ ಪ್ರದರ್ಶಕರು, ಒಂದುವೇಳೆ ನಮಗೆ ಪರಿಹಾರ ಸಿಗದಿದ್ದರೆ ಹಲವು ಥಿಯೇಟರ್‌ ಗಳನ್ನು

ಮುಚ್ಚಬೇಕಾಗಿ ಬರಬಹುದು ಎಂದು ಹೇಳಿದ್ದಾರೆ. ಮೊದಲಬಾರಿಗೆ ದೇಶದ 5 ಸಾವಿರಕ್ಕೂ ಹೆಚ್ಚು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗುವ ಮೂಲಕ ‘ಥಗ್ಸ್ ಆಫ್ ಹಿಂದೋಸ್ತಾನ್’ ಸಿನೆಮಾ, ಹಿಂದಿ ಸಿನೆಮಾದ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿತ್ತು.

ಯಾವುದೇ ಸಿನೆಮಾ, ಹಣ ಮಾಡುವಲ್ಲಿ ಸೋತರೆ ಅದಕ್ಕೆ, ನಿರ್ಮಾಪಕರಾಗಲಿ, ನಟರಾಗಲಿ ವಿತರಕರಿಗೆ ಅಥವ ಪ್ರದರ್ಶಕರಿಗೆ ಪರಿಹಾರಕೊಡಬೇಕೆಂಬ ನಿಯಮವೇನೂ ಇಲ್ಲ. ಆದರೆ, ಈ

ಹಿಂದೆ, ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಮತ್ತು ಸಲ್ಮಾನ್ ಖಾನ್ ನಟನೆಯ ‘ಟ್ಯೂಬ್ ಲೈಟ್’ ಸಿನೆಮಾಗಳು ಗೋತಾಹೊಡೆದಾಗ ಈ ಇಬ್ಬರೂ ನಟರು ಸಂಬಂಧಪಟ್ಟವರಿಗೆ ನೆರವಾಗಿದ್ದರು ಅನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


ಸಂಬಂಧಿತ ಟ್ಯಾಗ್ಗಳು

ಥಗ್ಸ್ ದೀಪಾವಳಿ Vijay Krishna Acharya Amitabh Bachchan


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ