ಬಿಜೆಪಿಗೆ ಒಂದು ಸೀಟ್ ಕಮ್ಮಿ !

A seat for the BJP!

21-11-2018 327

ಇಂದೋರ್(ಮಧ್ಯಪ್ರದೇಶ): 2019ರ ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿಗೆ ಒಂದು ಖಾತ್ರಿ

ಸೀಟು ಕಮ್ಮಿ ಆಯ್ತು ಅನ್ನಬಹುದು. ಯಾಕೆ ಅಂತೀರಾ, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ

ಸ್ವರಾಜ್ ಅವರು, ‘ಆರೋಗ್ಯದ ಕಾರಣಗಳಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ

ಸ್ಪರ್ಧಿಸುವುದಿಲ್ಲ’ ಎಂದು ಹೇಳಿದ್ದಾರೆ.

ಹಲವಾರು ವರ್ಷಗಳ ಹಿಂದಿನಿಂದಲೂ ಮಧುಮೇಹ(ಡಯಾಬಿಟೀಸ್) ಸಮಸ್ಯೆಯಿಂದ

ಬಳಲುತ್ತಿರುವ ಸುಷ್ಮಾ ಸ್ವರಾಜ್ ಅವರು, 2 ವರ್ಷಗಳ ಹಿಂದೆ ಮೂತ್ರಕೋಶ(ಕಿಡ್ನಿ) ಕಸಿ

ಮಾಡಿಸಿಕೊಂಡಿದ್ದರು. ಆ ಸಮಯದಲ್ಲಿ ಹಲವು ತಿಂಗಳು ತಮ್ಮ ಜವಾಬ್ದಾರಿಯಿಂದ ವಿಶ್ರಾಂತಿ

ಪಡೆದಿದ್ದರು.

‘ಕಿಡ್ನಿ ಕಸಿ ಸಂಬಂಧ ಶಸ್ತ್ರಚಿಕಿತ್ಸೆಯ ಬಳಿಕ ನನಗೆ ಧೂಳಿನ ಅಲರ್ಜಿ ಹೆಚ್ಚಾಗಿದೆ’ ಎಂದಿರುವ ಸುಷ್ಮಾ

ಸ್ವರಾಜ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವ ತಮ್ಮ ನಿರ್ಧಾರವನ್ನು ಪಕ್ಷದ

ನಾಯಕರಿಗೆ ತಿಳಿಸಿದ್ದಾರಂತೆ. 2014ರಲ್ಲಿ ಸುಷ್ಮಾ ಅವರು, ಮಧ್ಯಪ್ರದೇಶದ ವಿದಿಷಾ ಕ್ಷೇತ್ರದಿಂದ

ಲೋಕಸಭೆಗೆ ಆರಿಸಿಬಂದಿದ್ದರು.

ಸುಷ್ಮಾ ಅವರ ನಿರ್ಧಾರವನ್ನು ಅವರ ಪತಿ ಮಿಜೋರಾಮ್‌ ರಾಜ್ಯದ ಮಾಜಿ ರಾಜ್ಯಪಾಲ ಸ್ವರಾಜ್

ಕೌಶಲ್ ಅವರು ಸ್ವಾಗತಿಸಿದ್ದಾರೆ. ‘ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸದಿರುವ ನಿಮ್ಮ ನಿರ್ಧಾರಕ್ಕೆ

ಧನ್ಯವಾದಗಳು. ಮಿಲ್ಕಾ ಸಿಂಗ್ ಕೂಡ ಓಡುವುದನ್ನು ನಿಲ್ಲಿಸಬೇಕಾದ ಸಮಯ ಬಂದಿತ್ತು

ಅನ್ನುವುದು ನನಗೆ ನೆನಪಿದೆ.’ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿರುವುದು ಹಲವು ರೀತಿಯಲ್ಲಿ ತಮಗೆ ಲಾಭದಾಯಕ

ಅನ್ನುವುದನ್ನು ಬಿಜೆಪಿ ಅರ್ಥಮಾಡಿಕೊಂಡಿದೆ. ಹೀಗಾಗಿ, ಸುಷ್ಮಾ ಅವರು ರಾಜ್ಯಸಭೆ ಮೂಲಕ

ಮತ್ತೊಮ್ಮೆ ಸಂಸತ್ ಪ್ರವೇಶಿಸುವುದು ಖಚಿತ ಎಂದು ಹೇಳಬಹುದು.


ಸಂಬಂಧಿತ ಟ್ಯಾಗ್ಗಳು

ಬಿಜೆಪಿ ಇಂದೋರ್ Sushma Swaraj Kaushal


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ