ಇಮ್ರಾನ್ ‘U’ ಟರ್ನ್ ಖಾನ್

Imran

19-11-2018

‘ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಇಮ್ರಾನ್ ಖಾನ್, ಇದೀಗ ತಮ್ಮನ್ನು ತಾವು ಹಿಟ್ಲರ್ ಮತ್ತು ನೆಪೋಲಿಯನ್ ಗೆ ಹೋಲಿಸಿಕೊಂಡಿದ್ದಾರೆ.

ತಾವು ಚುನಾವಣೆಗೆ ಮುನ್ನ ತಳೆದಿದ್ದ ನಿಲುವುಗಳು ಮತ್ತು ದೇಶಕ್ಕೆ ನೀಡಿದ್ದ ಭರವಸೆಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದಲ್ಲಿ ಭಾರಿ ಟೀಕೆಗಳು ಕೇಳಿ ಬಂದಿವೆ. ಪದೇ ಪದೇ ಯು ಟರ್ನ್‌ ಹೊಡೆಯುತ್ತಿರುವ ಇಮ್ರಾನ್ ಖಾನ್, ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳಲು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್  ಮತ್ತು ಫ್ರಾನ್ಸ್ ದೇಶದ ನೆಪೋಲಿಯನ್ ಬೋನಾಪಾರ್ಟೆ ಕೈಗೊಂಡ ನಿರ್ಧಾರಗಳನ್ನು ಬಳಸಿಕೊಂಡಿದ್ದಾರೆ.  ‘ಈ ಇಬ್ಬರೂ ಕೂಡ, ತಮ್ಮ ನಿರ್ಧಾರಗಳಿಂದ ಹಿಂದೆ ಸರಿದಿದ್ದರೆ, ರಷ್ಯಾದಲ್ಲಿ ನಡೆದ ಯುದ್ಧದ ವೇಳೆ ನಷ್ಟ ಅನುಭವಿಸುತ್ತಿರಲಿಲ್ಲ’ ಎಂದಿರುವ ಇಮ್ರಾನ್ ಖಾನ್ ‘ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳದವನು ನಿಜವಾದ ನಾಯಕನಲ್ಲ’ ಎಂದು ಹೇಳಿದ್ದಾರೆ.

‘ಇಮ್ರಾನ್ ಖಾನ್ ಮಾತು, ಅವರೂ ಕೂಡ ಹಿಟ್ಲರ್ ರೀತಿ ಸರ್ವಾಧಿಕಾರಿ ಆಗಬಯುಸುತ್ತಾರೆ ಅನ್ನುವುದನ್ನು ತೋರಿಸುತ್ತದೆ’ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖಂಡ ಸಯ್ಯದ್ ಖುರ್ಷೀದ್ ಪ್ರತಿಕ್ರಿಯೆ ನೀಡಿದ್ದಾರೆ.

‘ಇಮ್ರಾನ್ ಖಾನ್ ಸರ್ಕಾರ ಆರ್ಥಿಕತೆ, ಆಡಳಿತ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ಎಲ್ಲ ಭರವಸೆಗಳಿಂದ ಯು ಟರ್ನ್ ಪಡೆಯುತ್ತಿದೆ, ಅವರು ಇದಕ್ಕಾಗಿಯೇ ಒಂದು ಯು ಟರ್ನ್ ಸಚಿವಾಲಯ ಸ್ಥಾಪಿಸಬೇಕು’ ಎಂದು ಖುರ್ಷೀದ್ ಛೇಡಿಸಿದ್ದಾರೆ.

‘ಯು ಟರ್ನ್ ಸಂಬಂಧ ತಾವು ನೀಡಿರುವ ಹೇಳಿಕೆಗೆ ವಿರುದ್ಧವಾಗಿಯೂ ಅವರು ಮತ್ತೆ ಯು ಟರ್ನ್ ಪಡೆಯಬಹುದು, ಅದು ಇಮ್ರಾನ್ ಖಾನ್ ಶೈಲಿಯಾಗುತ್ತದೆ’ ಎಂದು ಪಾಕಿಸ್ತಾನದ ಅಂಕಣಕಾರ ನದೀಮ್ ಫರೂಕ್ ಪರಾಚ ಟ್ವೀಟ್‌ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಇಮ್ರಾನ್ ನೆಪೋಲಿಯನ್ Pakistan Hitler


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ